ಕ್ರಿ.ಪೂ. 1ನೇ ಶತಮಾನದ ಯಕ್ಷಿ ಫಲಕ ಭಾರತಕ್ಕೆ ವಾಪಸ್… ಮೋದಿ ಅಮೆರಿಕ ಪ್ರವಾಸದ ಫಲ
9, 10ನೇ ಶತಮಾನದ ಗಣೇಶ, ಕುಬೇರನ ವಿಗ್ರಹವೂ ಲಭ್ಯ
Team Udayavani, Jul 2, 2023, 8:30 AM IST
ನವದೆಹಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಮಾಡಿದ್ದಾಗ ದೇಶದ 105 ಪ್ರಾಚೀನ ವಸ್ತುಗಳು ಭಾರತಕ್ಕೆ ಮರಳಲಿವೆ ಎಂದು ಘೋಷಿಸಿದ್ದರು. ಕ್ರಿ.ಪೂ. 1ನೇ ಶತಮಾನಕ್ಕೆ ಸೇರಿದ ಮಹತ್ವದ ಯಕ್ಷಿ ಫಲಕವೂ ಅಮೆರಿಕದಿಂದ ಭಾರತಕ್ಕೆ ಮರಳುವ ಪಟ್ಟಿಯಲ್ಲಿದೆ ಎನ್ನುವುದು ಅತ್ಯಂತ ಮಹತ್ವದ ಸಂಗತಿ.
ಇನ್ನು 10ನೇ ಶತಮಾನಕ್ಕೆ ಸೇರಿದ ಕುಬೇರನ ವಿಗ್ರಹ, 9ನೇ ಶತಮಾನಕ್ಕೆ ಸೇರಿದ ಕೆಂಪು ಮರಳುಗಲ್ಲಿನಲ್ಲಿ ತಯಾರಿಸಲ್ಪಟ್ಟ ನರ್ತಿಸುತ್ತಿರುವ ಗಣೇಶನ ಪ್ರತಿಮೆಯೂ ಭಾರತಕ್ಕೆ ಮರಳಲಿದೆ. ಇವೆರಡೂ ಕೇಂದ್ರ ಭಾರತಕ್ಕೆ ಸೇರಿವೆ. ಇನ್ನುಳಿದಂತೆ ಅತ್ಯಂತ ಮಹತ್ವದ ವಸ್ತುಗಳನ್ನು ಭಾರತಕ್ಕೆ ಮರಳಿಸುತ್ತೇವೆಂದು ಅಮೆರಿಕ ಸರ್ಕಾರವೇ ಹೇಳಿದೆ.
ಈ ವಸ್ತುಗಳು ಅಕ್ರಮ ಮಾರ್ಗದಲ್ಲಿ ಅಮೆರಿಕದ ಪಾಲಾಗಿದ್ದವು. ಸದ್ಯ ಜೈಲಿನಲ್ಲಿರುವ ಸುಭಾಷ್ ಕಪೂರ್ ಇವುಗಳನ್ನೆಲ್ಲ ಅಕ್ರಮವಾಗಿ ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ್ದ. ನ್ಯೂಯಾರ್ಕ್ನಲ್ಲಿರುವ ಮೆಟ್ರೊಪಾಲಿಟನ್ ಸಂಗ್ರಹಾಲಯದಲ್ಲಿ ಭಾರತಕ್ಕೆ ಸೇರಿದ ಹಲವು ಪ್ರಾಚೀನ ವಸ್ತುಗಳಿವೆ. ಈ ಪೈಕಿ 16 ವಸ್ತುಗಳನ್ನು ಭಾರತಕ್ಕೆ ಮರಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.