Ajmer ದರ್ಗಾದಲ್ಲಿ ಸಮರ್ಪಣೆಯಾದ ಪ್ರಧಾನಿ ಮೋದಿ ನೀಡಿದ ಚಾದರ: ಭವ್ಯ ಸ್ವಾಗತ
ಪ್ರಧಾನಿ ಮೋದಿ ಸಂದೇಶದಲ್ಲಿ ಏನಿದೆ?
Team Udayavani, Jan 13, 2024, 7:31 PM IST
ಅಜ್ಮೀರ್( ರಾಜಸ್ಥಾನ): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅರ್ಪಿಸಿದ ಪವಿತ್ರ ಚಾದರ್ ಪ್ರತಿಷ್ಠಿತ ಅಜ್ಮೀರ್ ಷರೀಫ್ ದರ್ಗಾವನ್ನು ಶನಿವಾರ ತಲುಪಿದ್ದು, ಭರ್ಜರಿಯಾಗಿ ಸ್ವಾಗತಿಸಿ ಸಮರ್ಪಿಸಲಾಗಿದೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ಚಾದರ್‌ನೊಂದಿಗೆ ಅಜ್ಮೀರ್ ದರ್ಗಾವನ್ನು ತಲುಪಿದರು. ಚಾದರವನ್ನು ಧನ್ಮಂಡಿಯಿಂದ ದರ್ಗಾದವರೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ತರಲಾಯಿತು, ನಂತರ ಚಾದರ್ ಮತ್ತು ಅಕಿದತ್ ಪುಷ್ಪಗಳನ್ನು ಅರ್ಪಿಸಿ, ದೇಶ ಮತ್ತು ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥಿಸಲಾಯಿತು.ಶುಕ್ರವಾರದಿಂದ 812ನೇ ಉರುಸ್ ಚಂದ್ರನ ದರ್ಶನದೊಂದಿಗೆ ಆರಂಭವಾಗಿದೆ.
ಹೊಸದಿಲ್ಲಿಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಪ್ರಧಾನಿಯವರು ಸಮುದಾಯದ ಮುಖಂಡರ ಮೂಲಕ ವಿಶೇಷ ಚಾದರವನ್ನು ಅರ್ಪಿಸಿದ್ದರು. ಕೇಂದ್ರ ಅಲ್ಪ ಸಂಖ್ಯಾಕ ವ್ಯವಹಾರಗಳ ಸಚಿವೆ ಸ್ಮತಿ ಇರಾನಿ ಮತ್ತು ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ಧಿಕಿ ಈ ಸಂದರ್ಭದಲ್ಲಿ ಇದ್ದರು. ಈ ಬಗ್ಗೆ ಖುದ್ದು ಪ್ರಧಾನಿ ಯವರೇ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದರು.
#WATCH | Ajmer, Rajasthan: The sacred Chadar, presented by Prime Minister Narendra Modi reached the esteemed Ajmer Sharif Dargah.
It will be placed during the Urs of Khwaja Moinuddin Chishti at the Ajmer Sharif Dargah.
(Earlier Visuals) pic.twitter.com/ioFLnI1FpZ
— ANI (@ANI) January 13, 2024
ಪ್ರಧಾನಿ ಮೋದಿ ಸಂದೇಶದಲ್ಲಿ ಏನಿದೆ?
ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿಯವರ 812 ನೇ ಉರುಸ್ ಮುಬಾರಕ್ ಸಂದರ್ಭದಲ್ಲಿ, ಅವರ ಅನುಯಾಯಿಗಳಿಗೆ ಮತ್ತು ಅಜ್ಮೀರ್ ಶರೀಫ್‌ಗೆ ಬಂದ ಎಲ್ಲಾ ಭಕ್ತರಿಗೆ ಅಭಿನಂದನೆಗಳು ಮತ್ತು ಹೃತ್ಪೂರ್ವಕ ಶುಭಾಶಯಗಳು. ಭಾರತದ ಸೂಫಿ, ಸಂತರು ಮತ್ತು ಫಕೀರರು ತಮ್ಮ ಆದರ್ಶಗಳು ಮತ್ತು ಆಲೋಚನೆಗಳೊಂದಿಗೆ ಸರಿಯಾದ ಮಾರ್ಗವನ್ನು ಅನುಸರಿಸಲು ಜನರನ್ನು ಪ್ರೇರೇಪಿಸಿದ್ದಾರೆ. ಜನರಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ನೀಡುವ ಮೂಲಕ ನಮ್ಮ ಸಾಂಸ್ಕೃತಿಕ ಏಕತೆಯನ್ನು ಬಲಪಡಿಸಿದರು” ಎಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.