ಬಿಜೆಪಿಯ ಅಭೂತಪೂರ್ವ ಜನಬಲದ ಹಿಂದಿನ ರಹಸ್ಯ
Team Udayavani, Mar 4, 2018, 8:30 AM IST
ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸಿಕ್ಕಿರುವ ಭರ್ಜರಿ ಯಶಸ್ಸು, ನಾಯಕರ ತಂತ್ರಗಾರಿಕೆ, ಆರೆಸ್ಸೆಸ್‌ನ ದೂರಗಾಮಿ ಉದ್ದೇಶದ ಸೇವೆ, ಕಾರ್ಯಾಚರಣೆ ದಳದ ಕ್ಷಮತೆಯ ಫಲ. ಈ ಅಭೂತಪೂರ್ವ ಜನಬಲದ ಹಿಂದಿನ ರಹಸ್ಯ, ಶ್ರಮಿಸಿದವರ ಮಾಹಿತಿ ಇಲ್ಲಿದೆ.
ಹಿಮಂತ ಬಿಸ್ವಾ ಶರ್ಮ: ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‌ಗಳಲ್ಲಿನ ಬಿಜೆಪಿ ಪ್ರಚಾರ ಉಸ್ತುವಾರಿ ವಹಿ ಸಿದ್ದು ಇವರೇ. ಮೂಲತಃ ಕಾಂಗ್ರೆಸ್‌ನವರು. ಹಾಗಾ ಗಿಯೇ, ಕಾಂಗ್ರೆಸ್‌ನ ಪ್ರಭಾವಿ ನಾಯಕರನ್ನು ಬಿಜೆಪಿಗೆ ಕರೆತಂದು ಮಜಬೂತಾದ ತಂಡ ಕಟ್ಟಿದರು. ಹೊಸ ಪ್ರಭಾವಿಗಳ ಆಗಮನ ಬಿಜೆಪಿಗೆ ಹೆಚ್ಚು ಶಕ್ತಿ ತಂದುಕೊಟ್ಟಿತು.
ರಾಮ್ ಮಾಧವ್: 3 ರಾಜ್ಯಗಳಲ್ಲಿನ ಪ್ರಚಾರ ತಂತ್ರಗಾರಿಕೆ ಹೊಣೆ ಹೊತ್ತಿದ್ದು ಇವ ರೇ. ಪ್ರಚಾರಗಳ ರೂಪು ರೇಷೆ ನಿರ್ಧರಿಸು ವಲ್ಲಿ ಚಾಣಾಕ್ಷ ನಡೆ ಇವರದ್ದು. ಸ್ಥಳೀಯ ಸಮಸ್ಯೆಗಳು, ನಿರುದ್ಯೋಗ ಸಮಸ್ಯೆ, ಮೂಲ ಸೌಕರ್ಯ, ಬುಡಕಟ್ಟು ಜನಾಂಗದ ಕಲ್ಯಾಣ ಗಳನ್ನೇ ಮುಂದಿಟ್ಟುಕೊಂಡು ಪ್ರಚಾರ ತಂತ್ರ ರೂಪಿಸಿ ಯಶಸ್ಸು ಕಂಡಿದ್ದಾರೆ.
ಬಿಪ್ಲಬ್ ಕುಮಾರ್ ದೇಬ್: ತ್ರಿಪು ರ ಬಿಜೆಪಿ ಅಧ್ಯಕ್ಷರಾಗಿ ಆ ರಾಜ್ಯದಲ್ಲಿ ಬಿಜೆಪಿಯ ಮುಖವಾಣಿ ಎನಿಸಿಕೊಂಡವರು. ರಾಮ್‌ಮಾಧವ್ ರೂಪಿಸಿದ್ದ ಪ್ರಚಾರ ತಂತ್ರಗಾರಿಕೆ ಯನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಿ ದರು. ಕಾಂಗ್ರೆಸ್‌ನ ಅನೇಕ ಪ್ರಭಾವಿ ನಾಯ ಕರನ್ನು ಬಿಜೆಪಿಗೆ ತರುವಲ್ಲಿ ಯಶಸ್ವಿಯಾದರು.
ಸುನಿಲ್ ದೇವಧರ್: ಆರೆಸ್ಸೆಸ್‌ನ ಮಾಜಿ ಪ್ರಚಾರಕರೂ ಆಗಿರುವ ಇವರು, ತ್ರಿಪು ರದಲ್ಲಿ ಮನೆ-ಮನೆ ಪ್ರಚಾರ ನಡೆಸಿ, ಮತದಾರನತ್ತ ಬಿಜೆಪಿ ಯನ್ನು ಕೊಂಡೊ ಯ್ದರು. ಬಿಪ್ಲಬ್ ದೇಬ್‌ರನ್ನು ಬಿಜೆಪಿಗೆ ತಂದ ಹೆಗ್ಗಳಿಕೆ ಇವರದ್ದು.
ಆರೆಸ್ಸೆಸ್‌ನ ಪರೋಕ್ಷ ಸಹಾಯ: ಈಶಾನ್ಯ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಸಲೀಸಾಗಿರಲಿಲ್ಲ. ಈಶಾನ್ಯ ಭಾಗ ಕ್ರೈಸ್ತ್ರರ ಅಧಿಪತ್ಯ ಇರುವ ಪ್ರದೇಶ. ಬುಡಕಟ್ಟು ಜನಾಂಗಗಳು ಹೆಚ್ಚಾಗಿರುವ ನಾಡು. ಹಾಗಾಗಿ, ಎಚ್ಚರಿಕೆಯ ಹೆಜ್ಜೆಯಿಟ್ಟ ಆರೆಸ್ಸೆಸ್, ತನ್ನ ಕಾರ್ಯಕರ್ತರ ಮೂಲಕ ಅಲ್ಲಿನ ಜನರ ಸೇವೆಗೆ ಮುಂದಾಯಿತು. ಅಪ್ಪಿತಪ್ಪಿಯೂ ಕ್ರೈಸ್ತ ಮಿಷನರಿಗಳ ಮತಾಂತರ ವಿಚಾರ ಎತ್ತಲಿಲ್ಲ. ಗೋ ಮಾಂಸ ವಿರುದ್ಧ ಮಾತಾಡಲಿಲ್ಲ. ಇದು, ಬಿಜೆಪಿ-ಆರೆಸ್ಸೆಸ್ ಎಂದರೆ ಹಿಂದುತ್ವ ಹೇರುವವರು ಎಂಬ ಪೂರ್ವಗ್ರಹವನ್ನು ಅಳಿಸುವಲ್ಲಿ ಸಹಾಯವಾಯಿತು.
ಸಮರ್ಪಕ ಅನುಷ್ಠಾನ: ಈ ದಳದ ಪರಿಶ್ರಮ ತಳ್ಳಿಹಾಕುವಂತಿಲ್ಲ. ಬಿಜೆಪಿ ಚಿಂತಕರ ಚಾವಡಿ ನೀಡಿದ ಅಷ್ಟೂ ಸೂಚನೆ, ತಂತ್ರಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹೆಗ್ಗಳಿಕೆ ಇದರದ್ದು. ಅಂತರ್ಜಾಲ ತೀರಾ ಸೀಮಿತ ಎಂಬಂತಿರುವ ಮೇಘಾಲಯದಲ್ಲಿ ಸಾಂಪ್ರದಾಯಿಕ ಶೈಲಿಯ ಪ್ರಚಾರವನ್ನೇ ಹೆಚ್ಚಾಗಿ ಉಪಯೋಗಿಸಿ ಬಿಜೆಪಿಗೆ ಯಶಸ್ಸು ತಂದುಕೊಟ್ಟಿತು ಈ ತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.