ಎರಡನೇ ಮನೆಗೆ ಇನ್ನು ಸಿಗಲ್ಲ ತೆರಿಗೆ ವಿನಾಯ್ತಿ!
Team Udayavani, Feb 5, 2017, 3:45 AM IST
ನವದೆಹಲಿ: ಈಗಾಗಲೇ ಒಂದು ಮನೆ ಇದೆ.. ಇನ್ನೊಂದು ಮನೆ ಖರೀದಿಗೆ ಹೊರಟಿದ್ದೀರಿ.. ಆದರೆ ಜೋಕೆ ಅದಕ್ಕೂ ಇನ್ನು ತೆರಿಗೆ ವಿನಾಯಿತಿ ಸಿಗಲಾರದು!
ಇಂತಹದ್ದೊಂದು ನೂತನ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮಂಡಿಸಿದ್ದು, ಅದನ್ನು ಯಾವುದೇ ಕಾರಣಕೂ ವಾಪಸ್ ಪಡೆವ ಪ್ರಶ್ನೆಯೇ ಇಲ್ಲ ಎಂದೂ ಅದು ಹೇಳಿದೆ.
2 ಲಕ್ಷ ಮೇಲ್ಪಟ್ಟು ಆದಾಯ ಹೊಂದಿದವರಿಗೆ ಎರಡನೇ ಮನೆ ಖರೀದಿ ವೇಳೆ ತೆರಿಗೆ ವಿನಾಯ್ತಿ ನೀಡುವುದಿಲ್ಲ. ಈ ವಿನಾಯ್ತಿಯನ್ನು ವಾಪಸ್ ಪಡೆವ ಪ್ರಸ್ತಾಪವೂ ಇಲ್ಲ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸು¾ಖ್ ಅಧಿಯಾ ಸ್ಪಷ್ಟಪಡಿಸಿದ್ದಾರೆ.
ಎರಡನೇ ಮನೆ ಖರೀದಿ ವೇಳೆ ತೆರಿಗೆ ವಿನಾಯ್ತಿಯನ್ನು ಸಾಲಗಾರರು ಬಹುತೇಕ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಈ ತೆರಿಗೆ ವಿನಾಯ್ತಿ ಮೊದಲ ಬಾರಿ ಮನೆ ಖರೀದಿದಾರರಿಗೆ ಸೀಮಿತವಾಗಿದೆ ಎಂದವರು ಹೇಳಿದ್ದಾರೆ.
2017ರ ಹಣಕಾಸು ಮಸೂದೆಯಡಿ ಹೊಸ ಶಿಫಾರಸು ಮಂಡಿಸಲು ಯೋಜಿಸಲಾಗಿದೆ. ಆದಾಯ ತೆರಿಗೆ ಸೆ.71ರ ಅನ್ವಯ 2 ಲಕ್ಷ ಮೇಲ್ಪಟ್ಟು ಆದಾಯ ಹೊಂದಿದವರು ಎರಡನೇ ಮನೆ ಖರೀದಿ ವೇಳೆ ತೆರಿಗೆ ವಿನಾಯ್ತಿ ನೀಡುವುದನ್ನು ನಿಷೇಧಿಸಲಾಗುತ್ತದೆ ಎಂದವರು ಹೇಳಿದ್ದಾರೆ.
ಸರ್ಕಾರದ ಬಳಿ ಸಂಪನ್ಮೂಲಗಳು ಕಡಿಮೆ ಇವೆ. ಸರ್ಕಾರ ಮೊದಲ ಬಾರಿಗೆ ಮನೆ ಖರೀದಿದಾರರಿಗೆ ಮಾತ್ರ ತೆರಿಗೆ ವಿನಾಯ್ತಿ ನೀಡುತ್ತದೆ. ಎರಡನೇ ಬಾರಿ ಮನೆ ಖರೀದಿ ಮಾಡುವವರು ಅಗತ್ಯಕ್ಕೆ ಮಾಡುವುದರ ಹೊರತಾಗಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಉದ್ದೇಶಕ್ಕೇ ಮಾಡಿರುತ್ತಾರೆ ಎಂದು ಬೊಟ್ಟು ಮಾಡಿದ್ದಾರೆ.
ಪ್ರಸ್ತುತ ಎರಡನೇ ಮನೆ ಖರೀದಿದಾರರಿಗೆ ತೆರಿಗೆ ವಿನಾಯ್ತಿ ನೀಡಲಾಗುತ್ತಿಲ್ಲ. ಇದರಿಂದ ವ್ಯಕ್ತಿ ತೆರಿಗೆ ವಿನಾಯ್ತಿಯೊಂದಿಗೆ, ಮನೆಯನ್ನು ಬಾಡಿಗೆ ನೀಡಿ ಸಾಲದ ಮೇಲಿನ ಬಡ್ಡಿಯನ್ನು ಚುಕ್ತಾಮಾಡಿ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು. ಇದರಿಂದಾಗಿ ಪರೋಕ್ಷವಾಗಿ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಪ್ರಮಾಣ ಮೂರನೇ ಒಂದರಷ್ಟು ಆಗುತ್ತದೆ ಎಂದು ಅಧಿಯಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.