ಅಗತ್ಯವಿದ್ದವರಿಗೆ ಮಾತ್ರ ಮೂರನೇ ಡೋಸ್
ಡಬ್ಲ್ಯುಎಚ್‌ಒ ಸಲಹಾ ಸಮಿತಿ ಶಿಫಾರಸು
Team Udayavani, Oct 12, 2021, 6:20 AM IST
ಹೊಸದಿಲ್ಲಿ: ಅರವತ್ತು ವರ್ಷ ಮೇಲ್ಪಟ್ಟವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಕೋವಿಡ್ ಲಸಿಕೆಯ ಮೂರನೇ ಡೋಸ್ ಪಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಲಸಿಕೆ ಸಲಹಾ ಸಮಿತಿಯ ತಜ್ಞರು ಶಿಫಾರಸು ಮಾಡಿದ್ದಾರೆ.
ಈ ಶಿಫಾರಸು ಮಾಡಿರುವ ಡಬ್ಲ್ಯುಎಚ್‌ಒ ಸಂಸ್ಥೆಯ ಸ್ಟ್ರಾಟೆಜಿಕ್ ಅಡ್ವೆ„ಸರಿ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್ ಆನ್ ಇಮ್ಯೂನೈಸೇಶನ್ (ಎಸ್‌ಎಜಿಇ) ತಜ್ಞರು, ಮೂರನೇ ಡೋಸ್ ಎಲ್ಲರಿಗೂ ಅಗತ್ಯವಿಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದೆ. ಚೀನದ ಸಿನೊವ್ಯಾಕ್ ಹಾಗೂ ಸಿನೊಫಾರ್ಮ್ ಲಸಿಕೆಗಳನ್ನು ಪಡೆದವರು ಮೂರನೇ ಡೋಸ್ ಅನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದ್ದಾರೆ. ಈ ನಡುವೆ, ಭಾರತದಲ್ಲಿ ತಯಾರಿಸಲಾಗಿರುವ ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಅವಕಾಶ ನೀಡುವ ಬಗ್ಗೆ ಎಸ್‌ಎಜಿಇ ಸಮಿತಿ ಚರ್ಚಿಸುತ್ತಿದೆ.
2,500 ಕೋಟಿ ರೂ. ಮೊತ್ತದ ಔಷಧಿ ಖರೀದಿ!
ಕಳೆದ 15 ತಿಂಗಳು ಗಳಲ್ಲಿ ಭಾರತೀಯರು ಕೊರೊನಾ ಚಿಕಿತ್ಸೆಗೆ ಬಳಸುವ ರೆಮಿಡಿಸೀವರ್ ಔಷಧಿಗೆ ಸಂಬಂಧಿಸಿದ 2,500 ಕೋಟಿ ರೂ. ಮೊತ್ತದ 25 ಕೋಟಿ ಮಾತ್ರೆಗಳು, 50 ಲಕ್ಷ ಔಷಧ ಸೀಸೆಗಳನ್ನು ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಚಿಕಿತ್ಸೆಗೆ ಬಳಸುವ ಈ ಔಷಧಗಳನ್ನು 2020ರ ಜೂನ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಆಗಿನಿಂದಲೇ ಅಪಾರ ಬೇಡಿಕೆ ಗಳಿಸಿದ್ದ ಇವುಗಳ ಕೊರತೆ ಮಾರು ಕಟ್ಟೆಯಲ್ಲಿ ಅಗಾಧವಾಗಿ ಉಂಟಾಗಿತ್ತು. ಆಗ, ಇವುಗಳ ಬೇಡಿಕೆ ಶೇ. 2000ರಷ್ಟು ಹೆಚ್ಚಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮುಳುಗಡೆಯಾದ ಸೇತುವೆ ಮೇಲೆ ಬೈಕ್ ಓಡಿಸಲು ಹೋಗಿ ಸಿಕ್ಕಿಬಿದ್ದ ಬೈಕ್ ಸವಾರರು
ಏಳು ತಿಂಗಳಲ್ಲೇ ಅತೀ ಕಡಿಮೆ ಕೇಸ್: ರವಿವಾರದಿಂದ ಸೋಮವಾರದ ಅವಧಿಯಲ್ಲಿ ದೇಶದಲ್ಲಿ 18,132 ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಏಳು ತಿಂಗಳುಗಳಲ್ಲಿ ಒಂದು ದಿನದಲ್ಲಿ ದಾಖಲಾದ ಅತೀ ಕಡಿಮೆ ಪ್ರಕರಣವಾಗಿದೆ. ಇದೇ ಅವಧಿಯಲ್ಲಿ, 21,563 ಮಂದಿ ಗುಣಮುಖ ರಾಗಿದ್ದು, 2020ರ ಮಾರ್ಚ್‌ನಿಂದ ಇಲ್ಲಿಯವರೆಗೆ ಗುಣಮುಖ ರಾದವರ ಪ್ರಮಾಣ ಶೇ. 98ಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.