ರಾಜ್ಯದ ಮೇಲೆ ಸಮಿತಿ ಕಣ್ಣು
Team Udayavani, Mar 13, 2019, 12:30 AM IST
ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶಾದ್ಯಂತ ನಡೆಯಬಹುದಾದ ಅಕ್ರಮ ಹಣದ ಹರಿವನ್ನು ಪತ್ತೆ ಹಚ್ಚಲು ಹಾಗೂ ಮತದಾರರ ಮೇಲೆ ಹಣದ ಪ್ರಭಾವ ಬೀರುವುದನ್ನು ತಡೆಗಟ್ಟಲು ಜಾರಿ ನಿರ್ದೇಶನಾಲಯ, ಸರಕಾರಿ ಸ್ವಾಮ್ಯದ ವಿವಿಧ ಹಣ ಕಾಸು ಸಂಸ್ಥೆಗಳು, ಭದ್ರತಾ ಸಂಸ್ಥೆಗಳ ಮಹಾ ನಿರ್ದೇಶಕರುಳ್ಳ ಉನ್ನತಾಧಿಕಾರದ ಸಮಿತಿಯೊಂದನ್ನು ಕೇಂದ್ರ ಚುನಾವಣ ಆಯೋಗ ರಚಿಸಿದೆ. ಅಕ್ರಮ ಹಣದ ಹರಿವಿನ ಜತೆಗೆ, ಅಭ್ಯರ್ಥಿಗಳ ವೆಚ್ಚದ ಮೇಲೆಯೂ ನಿಗಾ ವಹಿಸಲಿರುವ ಈ ಸಮಿತಿ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಮೇಲೆ ವಿಶೇಷ ಗಮನ ಇಡಲಿದೆ. ಈ ಸಮಿತಿಯ ಮೊದಲ ಸಭೆ ಮಾ. 15ರಂದು ನಡೆಯಲಿದೆ.
ಯಾರ್ಯಾರಿದ್ದಾರೆ ಸಮಿತಿಯಲ್ಲಿ ?
ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಮುಖ್ಯಸ್ಥ ಪಿ.ಸಿ. ಮೋದಿ, ಕೇಂದ್ರೀಯ ಪರೋಕ್ಷ ತೆರಿಗೆಗಳ ಸಂಸ್ಥೆಯ ಮುಖ್ಯಸ್ಥ ಪ್ರಣವ್ ಕುಮಾರ್ ದಾಸ್, ಜಾರಿ ನಿರ್ದೇಶನಾಲಯದ ನಿರ್ದೇಶಕ ದೇವಿಪ್ರಸಾದ್ ದಾಸ್, ಕೇಂದ್ರೀಯ ವಿತ್ತೀಯ ಗುಪ್ತಚರ ಸಂಸ್ಥೆಯ ಮಹಾ ನಿರ್ದೇಶಕ ಮಿಥಾಲಿ ಮಧುಸ್ಮಿತ ಮತ್ತು ಹಣಕಾಸು ಗುಪ್ತಚರ ವಿಭಾಗದ ಮುಖ್ಯಸ್ಥ ಪಂಕಜ್ ಕುಮಾರ್ ಮಿಶ್ರಾ ಈ ಸಮಿತಿಯಲ್ಲಿ ಇದ್ದಾರೆ. ಇತರ ಸದಸ್ಯರಾಗಿ ಬಿಎಸ್‌ಎಫ್ ಮಹಾ ನಿರ್ದೇಶಕ (ಡಿಜಿ) ರಜನಿಕಾಂತ್ ಮಿಶ್ರಾ, ಸಿಆರ್‌ಪಿಎಫ್ ಡಿಜಿ ರಾಜೀವ್ ಭಟ್ನಾಗರ್, ಸಿಐಎಸ್‌ಎಫ್ ಡಿಜಿ ರಾಜೇಶ್ ರಂಜನ್, ಸಶಸ್ತ್ರ ಸೀಮಾಬಲದ ಡಿಜಿ ಎಸ್. ದೇಸ್ವಾಲ್, ಮಾದಕವಸ್ತುಗಳ ನಿಯಂ ತ್ರಣ ಸಂಸ್ಥೆಯ ಡಿಜಿ ಅಭಯ್ ಕುಮಾರ್, ಆರ್‌ಪಿಎಫ್ ಡಿಜಿ ಅರುಣ್ ಕುಮಾರ್, ನಾಗರಿಕ ವಿಮಾನ ಯಾನ ಭದ್ರತಾ ಸಂಸ್ಥೆಯ ಡಿಜಿ ರಾಕೇಶ್ ಅಸ್ತಾನಾ, ಭಾರತೀಯ ರಿಸರ್ವ್ ಬ್ಯಾಂಕ್‌ನ ಹೆಚ್ಚುವರಿ ಮುಖ್ಯಸ್ಥ ಸುನಿಲ್ ಮೆಹ್ತಾ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.