ಜಗತ್ತೇ ಅಳಿದರೂ ಉಳಿವ ಪ್ರಾಣಿ!
Team Udayavani, Jul 18, 2017, 10:19 AM IST
ನವದೆಹಲಿ: ಮೈನಸ್ 272 ಡಿಗ್ರಿ ಸೆಲ್ಸಿಯಸ್ನಷ್ಟು ಅತ್ಯಂತ ಕನಿಷ್ಠ ತಾಪಮಾನವನ್ನು ಎದುರಿಸಿ ಬದುಕಬಲ್ಲ ಸಾಮರ್ಥ್ಯ ಹೊಂದಿರುವ ಟಾರ್ಡಿಗ್ರೇಡ್ ಎಂಬ ವಿಶಿಷ್ಟ ಜೀವಿ, ಭೂಮಿ ಮೇಲಿನ ಅತ್ಯಂತ ಗಟ್ಟಿ ಮುಟ್ಟಾದ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಗತ್ತೇ ವಿನಾಶವಾದರೂ ಬದುಕುಳಿ ಯಬಲ್ಲ ಸಾಮರ್ಥ್ಯ ಈ ಪ್ರಾಣಿಗಿದೆ ಎಂದು ಭೌತಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು 2007ರಲ್ಲಿ 3,000 ಪ್ರಾಣಿಗಳನ್ನು ಭೂ ಕಕ್ಷೆಗೆ ಕಳುಹಿಸಿತ್ತು. ಈ ಪೈಕಿ ಟಾರ್ಡಿ ಗ್ರೇಡ್ಗಳು ಮಾತ್ರ ಕ್ಯಾಪ್ಸೂಲ್ನಿಂದ ಹೊರಗಿದ್ದುಕೋಂಡೇ 12 ದಿನಗಳ ಕಾಲ ಜೀವಂತವಾಗಿದ್ದವು. ಭೌತಶಾಸ್ತ್ರಜ್ಞರ ತಂಡವೊಂದು ಹೇಳುವಂತೆ, “ಟಾರ್ಡಿಗ್ರೇಡ್ಗಳು ಸುಮಾರು 520 ದಶಲಕ್ಷ ವರ್ಷಗಳ ಹಿಂದಿನಿಂದಲೂ ಅಸ್ತಿತ್ವದಲ್ಲಿವೆ. ಅಲ್ಲದೆ ಭೂಮಿ ಮೇಲೆ ಕಡೆವರೆಗೂ ಉಳಿಯಬಲ್ಲ ಜೀವ ಸಂಕುಲ ಇದಾಗಿದೆ. ಒಂದೊಮ್ಮೆ ಸೂರ್ಯ ಬೆಳಗುವುದನ್ನು ನಿಲ್ಲಿಸಿದರೆ ಮಾತ್ರ ಈ ಪ್ರಾಣಿಗಳಿಗೆ ವಿನಾಶ ಕಾಲ ಬರಬಹುದು.
ಕುದಿಯುವ ನೀರಿಗೆ ಹಾಕಿದಾಗ ಅಥವಾ ಶೂನ್ಯ ಡಿಗ್ರಿಯಷ್ಟು ಕೊರೆಯುವ ತಾಪಮಾ ನದಲ್ಲಿ ಇರಿಸಿದಾಗಲೂ ಟಾರ್ಡಿಗ್ರೇಡ್ಗಳಿಗೆ ಏನೂ ಆಗದು. ಹನಿ ನೀರಿಲ್ಲದಿದ್ದರೂ ಇವು ದಶಕಗಳ ಕಾಲ ಬದುಕಬಲ್ಲವು. 2014ರಲ್ಲಿ ಜಪಾನ್ನ ಸಂಶೋಧಕರ ತಂಡವೊಂದು ಸುಮಾರು 30 ವರ್ಷಗಳ ಕಾಲ ಟಾರ್ಡಿಗ್ರೇಡ್ಗಳನ್ನು ಶೈತಾಗಾರದಲ್ಲಿರಿಸಿದ್ದರು. ಅಚ್ಚರಿ ಎಂದರೆ ಅವು ಬದುಕುಳಿದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.