ವಿಶ್ವದ ಎತ್ತರದ ಶಿವ ಮೂರ್ತಿ ಇಂದು ಲೋಕಾರ್ಪಣೆ
Team Udayavani, Oct 29, 2022, 6:55 AM IST
ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ “ವಿಶ್ವಾಸ ಸ್ವರೂಪಂ’ ಶನಿವಾರ ಲೋಕಾರ್ಪಣೆಗೊಳ್ಳಲಿದೆ.ರಾಜಸ್ಥಾನದ ರಾಜಸ್‌ಮಂಡ್ ಜಿಲ್ಲೆಯ ನಾಥ್‌ದ್ವಾರ ಪಟ್ಟಣದಲ್ಲಿ ಈ ಪ್ರತಿಮೆ ತಲೆಎತ್ತಿದೆ. ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಸಿಎಂ ಅಶೋಕ್ ಗೆಹೊÉàಟ್, ಸ್ಪೀಕರ್ ಸಿ.ಪಿ. ಜೋಷಿ ಮತ್ತಿತರರು ಭಾಗಿಯಾಗಲಿದ್ದಾರೆ.
9 ದಿನ ಕಾರ್ಯಕ್ರಮ
ಉದಯಪುರದಿಂದ 45 ಕಿ.ಮೀ. ದೂರದಲ್ಲಿ ಧ್ಯಾನಸ್ಥನಾಗಿರುವಂತೆ ಶಿವನ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿಮೆ ಲೋಕಾರ್ಪಣೆಗೊಂಡ ಬಳಿಕ ಅ. 29ರಿಂದ ನ. 6ರ ವರೆಗೆ 9 ದಿನಗಳ ಕಾಲ ಸರಣಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. 250 ವರ್ಷ ಬಾಳಿಕೆ ಬರು ವಂತೆ ಮತ್ತು ಗಂಟೆಗೆ 250 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ ತಡೆಯು ವಂಥ ಸಾಮರ್ಥ್ಯವಿರುವಂತೆ ಪ್ರತಿಮೆ ನಿರ್ಮಾಣಗೊಂಡಿದೆ.
ಪ್ರತಿಮೆಯ ಎತ್ತರ- 369 ಅಡಿ
ಪ್ರತಿಮೆಯ ಒಟ್ಟು ತೂಕ – 30,000 ಟನ್
ಬಳಕೆಯಾದ ಉಕ್ಕು, ಕಬ್ಬಿಣ – 3000 ಟನ್
ಬಳಸಲಾದ ಕಾಂಕ್ರೀಟ್- 2.5 ಲಕ್ಷ ಕ್ಯೂಬಿಕ್ ಟನ್
ಎಷ್ಟು ದೂರದಿಂದ ಪ್ರತಿಮೆ ಗೋಚರಿಸುತ್ತದೆ?- 20 ಕಿ.ಮೀ.
ಕಾಮಗಾರಿಗೆ ತಗುಲಿದ
ಅವಧಿ- 10 ವರ್ಷ
ಎಷ್ಟು ವರ್ಷ ಬಾಳಿಕೆ?- 250
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.