ದೇಶದಲ್ಲೀಗ ಬರೋಬ್ಬರಿ 97 ಕೋಟಿ ಮತದಾರರು;2019ಕ್ಕೆ ಹೋಲಿಸಿದರೆ ಮತದಾರರ ಪ್ರಮಾಣ ಶೇ.6 ಹೆಚ್ಚು
Team Udayavani, Feb 10, 2024, 7:30 AM IST
ಹೊಸದಿಲ್ಲಿ: ದೇಶದಲ್ಲಿ ಈಗ 96.88 ಕೋಟಿ ಅರ್ಹ ಮತದಾರರಿದ್ದಾರೆ.ದೇಶದ ಚುನಾವಣ ಆಯೋಗ ಶುಕ್ರವಾರ ನೀಡಿದ ಮಾಹಿತಿಯಿದು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನಕ್ಕೆ 96.88 ಕೋಟಿ ಭಾರತೀಯರು ಅರ್ಹರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.
18ರಿಂದ 29 ವರ್ಷ ವಯೋ ಮಾನದ 2 ಕೋಟಿಗೂ ಅಧಿಕ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ನೋಂದಾಯಿತ ಮತದಾರರ ಸಂಖ್ಯೆ ಶೇ.6ರಷ್ಟು ಏರಿಕೆಯಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ. 2019ರಲ್ಲಿ ಮತದಾರರ ಸಂಖ್ಯೆ 91.20 ಕೋಟಿ ಆಗಿತ್ತು.
ವಿಶ್ವದಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ದೇಶ ನಮ್ಮದಾಗಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಗಾಗಿ 96.88 ಕೋಟಿ ಭಾರತೀಯರು ಮತದಾನ ಮಾಡಲು ನೋಂದಣಿಯಾಗಿದ್ದಾರೆ. ಲಿಂಗ ಅನುಪಾತನವು 2023ರಲ್ಲಿ 940 ಇದ್ದದ್ದು, 2024ರಲ್ಲಿ 948ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 1 ಸಾವಿರ ಪುರುಷರಿಗೆ 948 ಮಹಿಳೆಯರಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಚುನಾವಣ ಆಯೋಗವು ಪಾರದರ್ಶಕತೆಗೆ ವಿಶೇಷ ಒತ್ತು ನೀಡಿದೆ ಎಂದು ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಮಹಿಳೆಯರೇ ಹೆಚ್ಚು
ಸುಮಾರು 2.63 ಕೋಟಿ ಮಂದಿ ಯನ್ನು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಗೊಳಿಸ ಲಾಗಿದೆ. ಈ ಪೈಕಿ 1.41 ಕೋಟಿ ಮಹಿಳೆಯರಾಗಿದ್ದರೆ, 1.22 ಕೋಟಿ ಪುರುಷರು. ಅಂದರೆ ಪುರುಷ ಮತದಾರರಿಗೆ ಹೋಲಿಸಿದರೆ ಹೊಸದಾಗಿ ಸೇರ್ಪಡೆಗೊಂಡ ಮಹಿಳೆ ಯರ ಪ್ರಮಾಣ ಶೇ. 15ರಷ್ಟು ಹೆಚ್ಚಳವಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ. 88.35 ಲಕ್ಷ ದಿವ್ಯಾಂಗರನ್ನೂ ಪಟ್ಟಿಗೆ ಸೇರಿಸಲಾಗಿದ್ದು, ಇದು ಹಕ್ಕು ಚಲಾವಣೆಯಲ್ಲಿ ಎಲ್ಲರನ್ನೂ ಪಾಲ್ಗೊಳ್ಳು ವಂತೆ ಮಾಡುವಲ್ಲಿ ನೆರವಾಗಲಿದೆ ಎಂದಿದೆ. 2019ರ ಚುನಾವಣೆಯ ವೇಳೆ ದಿವ್ಯಾಂಗ ಮತದಾರರ ಸಂಖ್ಯೆ 45.64 ಲಕ್ಷವಾಗಿತ್ತು.
1.65 ಲಕ್ಷ ಹೆಸರು ಡಿಲೀಟ್
ಈ ಬಾರಿ ಮನೆ-ಮನೆಗೆ ತೆರಳಿ ದೃಢೀಕರಣ ಪ್ರಕ್ರಿಯೆ ಕೈಗೊಂಡು, ಸುಮಾರು 1.65 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಮೃತಪಟ್ಟವರು, ಖಾಯಂ ಆಗಿ ಬೇರೆಡೆಗೆ ವಲಸೆ ಹೋದವರು ಮತ್ತು ಡುಪ್ಲಿಕೇಟ್ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದೂ ಆಯೋಗ ತಿಳಿಸಿದೆ.
ಇನ್ನು ತೃತೀಯ ಲಿಂಗಿ ಮತದಾರರ ಸಂಖ್ಯೆ 2014ರಲ್ಲಿ 39 ಸಾವಿರ ಇದ್ದದ್ದು, ಈ ಬಾರಿ 48 ಸಾವಿರಕ್ಕೆ ಏರಿಕೆಯಾಗಿದೆ ಎಂದೂ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್ ಕಡ್ಡಾಯ: ಪ್ರಾಧಿಕಾರ
Sabarimala: ಮೂರು ಅನ್ನದಾನ ಮಂಟಪ ಆರಂಭ
Lokasabha: ಸ್ಪೀಕರ್ ಅನುಮತಿ ಬಳಿಕ ಸಂಸದರ ಪ್ರಶ್ನೆಗೆ ಉತ್ತರಿಸಿ: ಕೇಂದ್ರ ಸಚಿವರಿಗೆ ಸೂಚನೆ
Happy Time: ಕೋತಿಯೊಂದಿಗೆ ಹೃದಯಸ್ಪರ್ಶಿ ಕ್ಷಣ ಕಳೆದ ಸಂಸದ ಶಶಿ ತರೂರ್
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
Toll: ವರ್ಷದಲ್ಲೇ 438 ಕೋ.ರೂ. ಟೋಲ್ ಶುಲ್ಕ ಸಂಗ್ರಹ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.