450ಕ್ಕೂ ಹೆಚ್ಚು ಮದ್ಯದಂಗಡಿ ಬಂದ್: ಪಂಜಾಬ್ ಸರಕಾರ
Team Udayavani, Mar 19, 2017, 3:50 AM IST
ಚಂಡಿಗಢ: ಚುನಾವಣಾ ಪೂರ್ವ ಆಶ್ವಾಸನೆ ಯಂತೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಸರಕಾರವು ಮದ್ಯದಂಗಡಿಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ರಾಜ್ಯದಾದ್ಯಂತ ಸುಮಾರು 450ಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ಮುಚ್ಚಿಸುವುದಾಗಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದ ಸರಕಾರ ನಿರ್ಧರಿಸಿದೆ. ಸರಕಾರ ತನ್ನ ಹೊಸ ಅಬಕಾರಿ ನೀತಿ 2017-18ರ ಅಡಿಯಲ್ಲಿ ಮದ್ಯ ಕೋಟಾ ರದ್ದು ಮಾಡುವುದಾಗಿ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ ಅಕ್ಕಪಕ್ಕ 500 ಅಡಿಗಳ ಒಳಗೆ ಮದ್ಯ ಮಾರಾಟ ನಿಷೇಧಿಸುವುದಾಗಿ ಮೊದಲ ಸಂಪುಟ ಸಭೆಯಲ್ಲಿ ಘೋಷಿಸಿದೆ. ಸಭೆಯಲ್ಲಿ 100ಕ್ಕೂ ಹೆಚ್ಚು ನಿರ್ಧಾರ ಕೈಗೊಳ್ಳಲಾಗಿದೆ.
ಡ್ರಗ್ ಮಾಫಿಯಾ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಶೇಷ ಕಾರ್ಯಪಡೆ, ಇನ್‌ಸ್ಪೆಕ್ಟರ್ ರಾಜ್ ಹಾಗೂ ವಿಐಪಿ ಸಂಸ್ಕೃತಿಯ ನಿರ್ಮೂಲನೆ, ಕೃಷಿ ಸಾಲ ಮನ್ನಾ, ಶಿಕ್ಷಣ ಮತ್ತು ಆರೋಗ್ಯ ಸುಧಾರಣೆ, ಉದ್ಯೋಗ ಸೃಷ್ಟಿ, ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ವಿವಿಧ ಅನುಕೂಲಗಳನ್ನು ಕಲ್ಪಿಸುವ ಕುರಿತೂ ನಿರ್ಣಯ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.