10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ರೀತಿಯ ಗಣಿತ ಪರೀಕ್ಷೆ
Team Udayavani, Jan 12, 2019, 12:30 AM IST
ನವದೆಹಲಿ: ಗಣಿತವನ್ನು ಕಬ್ಬಿಣದ ಕಡಲೆಎಂದು ಪರಿಗಣಿಸಿರುವ, ಗಣಿತ ಪರೀಕ್ಷೆ ಬಂತೆಂದರೆ ಹೌಹಾರುವ 10ನೇ ತರಗತಿ ವಿದ್ಯಾರ್ಥಿಗಳಿಗೊಂದು ಸಿಹಿಸುದ್ದಿ. ಮುಂದಿನ ಶೈಕ್ಷಣಿಕ ವರ್ಷದಿಂದ ನೀವು ಸುಲಭದ ಗಣಿತ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಉತ್ತೀರ್ಣರಾಗಿ ವಿದ್ಯಾಭ್ಯಾಸ ಮುಂದುವರಿಸಬಹುದು.
2020ರಿಂದ 10ನೇ ತರಗತಿಗೆ ಎರಡು ಹಂತದ ಗಣಿತ ಪರೀಕ್ಷೆಯನ್ನು ಪರಿಚಯಿಸಲು ಸಿಬಿಎಸ್‌ಇ ನಿರ್ಧರಿಸಿದೆ. ಅದರಂತೆ, ಗಣಿತ-ಸ್ಟಾಂಡರ್ಡ್ ಮತ್ತು ಗಣಿತ-ಬೇಸಿಕ್ ಎಂಬ ಎರಡು ಆಯ್ಕೆಗಳಿರುತ್ತವೆ. ಯಾರು ಗಣಿತದಲ್ಲಿ ನಿಸ್ಸೀಮರಾಗಿದ್ದು, ಅದಕ್ಕೆ ಸಂಬಂಧಿಸಿಯೇ ಮುಂದಿನ ವಿದ್ಯಾಭ್ಯಾಸ ಮಾಡಲು ಇಚ್ಛಿಸುತ್ತಾರೋ, ಅಂಥವರು ಗಣಿತ- ಸ್ಟಾಂಡರ್ಡ್ ಪರೀಕ್ಷೆಯನ್ನು ಬರೆಯಬಹುದು, ಯಾರಿಗೆ ಗಣಿತ ಕಷ್ಟ ಎಂಬ ಭಾವನೆಯಿದೆಯೋ, ಅಂಥವರು ಗಣಿತ-ಬೇಸಿಕ್ ಪರೀಕ್ಷೆ ಬರೆದು, ತಮ್ಮ ಆಯ್ಕೆಯ ಕೋರ್ಸ್ ಆಯ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಬಹುದು.10ನೇ ತರಗತಿಯ ಪರೀಕ್ಷೆ ವೇಳೆ ವಿದ್ಯಾರ್ಥಿಗಳಲ್ಲಿರುವ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಬಿಎಸ್‌ಇ ತಿಳಿಸಿದೆ.
ಇಂಟರ್ನಲ್‌ಗೆ ಅನ್ವಯವಾಗಲ್ಲ:
ಆದರೆ, ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ, ಪರೀಕ್ಷೆಗಳು ಪ್ರತ್ಯೇಕವಾಗಿದ್ದರೂ ಶಾಲೆಗಳಲ್ಲಿನ ಪಠ್ಯಕ್ರಮ, ಆಂತರಿಕ ಮೌಲ್ಯಮಾಪನ ಒಂದೇ ಆಗಿರುತ್ತದೆ. ಮಾನ್ಯತೆ ಪಡೆದ ಶಾಲೆಯು ಆನ್‌ಲೈನ್ ಮೂಲಕ ಅಭ್ಯರ್ಥಿಗಳ ಪಟ್ಟಿಯನ್ನು ಸಿಬಿಎಸ್‌ಇಗೆ ಕಳುಹಿಸುವ ಸಂದರ್ಭದಲ್ಲೇ ವಿದ್ಯಾರ್ಥಿಗಳ ಪರೀಕ್ಷೆಯ ಆಯ್ಕೆಯನ್ನು ನಮೂದಿಸಬೇಕಾಗುತ್ತದೆ.
ಫೇಲಾದರೆ ಮುಂದೇನು?
ಗಣಿತ-ಬೇಸಿಕ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಯು ಅನುತ್ತೀರ್ಣನಾದರೆ, ಆತ ನಂತರ ನಡೆಯುವ ಗಣಿತ-ಬೇಸಿಕ್ ಪೂರಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಆದರೆ, ಗಣಿತ-ಸ್ಟಾಂಡರ್ಡ್ ಪರೀಕ್ಷೆ ಬರೆದು ಅನುತ್ತೀರ್ಣನಾದ ವಿದ್ಯಾರ್ಥಿಯು, ಪೂರಕ ಪರೀಕ್ಷೆ ವೇಳೆ ಗಣಿತ-ಬೇಸಿಕ್ ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅದೇ ರೀತಿ, ಒಬ್ಬ ವಿದ್ಯಾರ್ಥಿ ಆರಂಭದಲ್ಲಿ ಗಣಿತ-ಬೇಸಿಕ್ ಪರೀಕ್ಷೆ ಬರೆದಿದ್ದರೂ, ನಂತರ ಮನಸ್ಸು ಬದಲಿಸಿ ಗಣಿತದಲ್ಲೇ ಉನ್ನತ ಶಿಕ್ಷಣ ಪಡೆಯಬೇಕೆಂದು ಬಯಸಿದರೆ, ಅಂಥ ವಿದ್ಯಾರ್ಥಿಯು ಪೂರಕ ಪರೀಕ್ಷೆ ಕುಳಿತು ಗಣಿತ-ಸ್ಟಾಂಡರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.