![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 1, 2021, 6:05 AM IST
ಹೊಸದಿಲ್ಲಿ: ಎಪ್ರಿಲ್ ತಿಂಗಳಿನಲ್ಲಿ ರವಿವಾರ ಸಹಿತ ಎಲ್ಲ ಸರಕಾರಿ ರಜಾ ದಿನಗಳಲ್ಲೂ ಲಸಿಕೆ ವಿತರಣೆ ನಡೆಸಬೇಕು ಎಂದು ಕೇಂದ್ರ ಸರಕಾರ ಆದೇಶ ನೀಡಿದೆ. ದೇಶಾದ್ಯಂತ ಎಲ್ಲ ಸರಕಾರಿ ಮತ್ತು ಲಸಿಕೆಗೆ ನಿಗದಿಪಡಿಸಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಎ. 30ರ ವರೆಗೆ ಈ ಸೌಲಭ್ಯ ಸಿಗಲಿದೆ. ಅದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಸೂಚಿಸಿದೆ.
ಹೊಸ ಎಟಿಎಂ ತಂತ್ರಜ್ಞಾನ :
ಹೊಸದಿಲ್ಲಿ: ಎಟಿಎಂ ಉತ್ಪಾದಕ ಎನ್‌ಸಿಆರ್ ಕಾರ್ಪೊರೇಶನ್ ಸುಧಾರಿತ ಎಟಿಎಂ ರೂಪಿಸಿದ್ದು, ಇವುಗಳಿಂದ ಹಣ ಪಡೆಯಲು ಕಾರ್ಡ್ ಅಗತ್ಯವೇ ಇಲ್ಲ. ಬದಲಾಗಿ ಮೊಬೈಲ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು. ಯುಪಿಐ ಮೂಲಕ ಇದು ಕೆಲಸ ಮಾಡುತ್ತದೆ. ಕ್ಯುಆರ್ ಕೋಡ್‌ಗಳು ಸತತವಾಗಿ ಬದಲಾಗುವುದರಿಂದ ಇದು ಸುರಕ್ಷಿತವಾಗಿದ್ದು, ಸ್ಕಿಮ್ಮಿಂಗ್‌ನಂಥ ವಂಚನೆಗೆ ಅವಕಾಶ ಇರುವುದಿಲ್ಲ ಎಂದು ಎನ್‌ಸಿಆರ್ ಹೇಳಿದೆ. ಭವಿಷ್ಯದಲ್ಲಿ ಎಲ್ಲ ಬ್ಯಾಂಕ್ ಎಟಿಎಂಗಳೂ ಇದೇ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.
You seem to have an Ad Blocker on.
To continue reading, please turn it off or whitelist Udayavani.