ನೀರನ್ನು ಸಮವರ್ತಿ ಪಟ್ಟಿಗೆ ವರ್ಗಾಯಿಸುವ ಪ್ರಸ್ತಾಪವಿಲ್ಲ : ಕೇಂದ್ರ ಸ್ಪಷ್ಟನೆ
ಏನಿದು ಸಮವರ್ತಿ ಪಟ್ಟಿ? ಏನಿದರ ವಿಶೇಷತೆ ಇಲ್ಲಿದೆ ಓದಿ
Team Udayavani, Dec 10, 2019, 8:58 PM IST
ಹೊಸದಿಲ್ಲಿ: ಈಗಾಗಲೇ ರಾಜ್ಯ ಪಟ್ಟಿಯಲ್ಲಿರುವ ನೀರಾವರಿಯನ್ನು ಸಮವರ್ತಿ ಪಟ್ಟಿಗೆ ವರ್ಗಾಯಿಸುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸ್ಪಷ್ಟಪಡಿಸಿದ್ದಾರೆ.
ಹಣಕಾಸಿನ ಸಮಸ್ಯೆ ಇರುವ ಕಾರಣದಿಂದ ಪಶ್ಚಿಮಬಂಗಾಳದ ಟೀಸ್ತ ಬ್ಯಾರೇಜ್ ಅಣೆಕಟ್ಟು ಪೂರ್ಣಗೊಳ್ಳುತ್ತಿಲ್ಲ. ಕೇಂದ್ರದ ಸರಕಾರ ಹಣಕಾಸಿನ ನೆರವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದರು ಆಗ್ರಹಿಸಿದ್ದರು. ಈ ಕುರಿತು ನೀರಾವರಿ ಸಚಿವಾಲಯವನ್ನು ಸಮವರ್ತಿ ಪಟ್ಟಿಗೆ ಸೇರಿಸಬೇಕು ಎಂದು ಕೆಲವು ಸಂಸದರು ಆಗ್ರಹಿಸಿದ್ದರು.
ಇದಕ್ಕೆ ಉತ್ತರಿಸಿದ ಸಚಿವರು ನೀರಾವರಿಯನ್ನು ಈಗಾಗಲೇ ರಾಜ್ಯಗಳೇ ನೋಡಿಕೊಳ್ಳುತ್ತಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವುದು ರಾಜ್ಯದ ಕರ್ತವ್ಯವಾಗಿದೆ. ಎರಡು ರಾಜ್ಯಗಳ ನಡುವೆ ನೀರಿಗೆ ಸಂಬಂಧ ಪಟ್ಟ ವಿವಾದಗಳು ಕೇಳಿಬಂದರೆ ಅವುಗಳನ್ನು ಕೇಂದ್ರ ಮಧ್ಯಪ್ರವೇಶಿಸಿ ಬಗೆಹರಿಸಲಿದೆ ಎಂದು ಶೇಖಾವತ್ ಹೇಳಿದರು.
ಏನಿದು ಸಮವರ್ತಿ ಪಟ್ಟಿ?
ದೇಶದಲ್ಲಿ ಸುಲಭ ಅಧಿಕಾರಕ್ಕಾಗಿ ಹಲವು ವಿಂಗಡನೆಗಳನ್ನು ಸಂವಿಧಾನಬದ್ಧವಾಗಿ ಮಾಡಲಾಗಿದೆ. ಸಂಯುಕ್ತ ರಾಷ್ಟ್ರ ಪದ್ಧತಿಗೆ ಅನುಗುಣವಾಗಿ 248ನೇ ವಿಧಿಯ ಅನ್ವಯ ಸಂವಿಧಾನವು ಕೇಂದ್ರ-ರಾಜ್ಯಗಳ ನಡುವೆ ಅಧಿಕಾರಗಳನ್ನು ಹಂಚಿಕೊಟ್ಟಿದೆ. ಈ ಆಧಿಕಾರಗಳನ್ನು ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗು ಸಮವರ್ತಿ ಪಟ್ಟಿಗಳಾಗಿ ವಿಂಗಡಿಸಲಾಗಿದೆ.
ಇಲ್ಲಿ ಕೇಂದ್ರ ಪಟ್ಟಿಯಲ್ಲಿ ಉಲ್ಲೇಖೀಸಲಾಗಿರುವ 99 ಅಂಶಗಳನ್ನು ಕೇಂದ್ರ ಸರಕಾರ ಮಾತ್ರ ನೋಡಿಕೊಳ್ಳುತ್ತದೆ. ಅದರಲ್ಲಿ ರಾಜ್ಯದ ಪಾಲು ಇಲ್ಲ. ಅದೇ ರೀತಿ ರಾಜ್ಯಪಟ್ಟಿಯಲ್ಲಿ ಉಲ್ಲೇಖೀಸಲಾಗಿರುವ 61 ವಿಷಯಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ರಾಜ್ಯ ಸಂವಿಧಾನಾತ್ಮವಾಗಿ ಗಿಟ್ಟಿಸಿಕೊಂಡಿದೆ. ಇಲ್ಲಿ ರಾಜ್ಯದ ಪಾಲಿನ ವಿಚಯಗಳಲ್ಲಿ ಸಂವಿಧಾನ ಬಿಕ್ಕಟ್ಟು ಎದುರಾದರೆ ಅಂತಹ ಸಂದರ್ಭ ಕೇಂದ್ರ ಸರಕಾರ ಮಧ್ಯಪ್ರವೇಶಿಸಬಹುದಾಗಿದೆ. ಇನ್ನು ಸಮವರ್ತೀ ಪಟ್ಟಿಯಲ್ಲಿ ಕೇಂದ್ರ ಹಾಗೂ ರಾಜ್ಯಕ್ಕೆ ಸಮಾನವಾಗಿ ಅಧಿಕಾರ ಇದೆ. ಇಲ್ಲಿ 51 ವಿಷಯಗಳನ್ನು ನೀಡಲಾಗಿದ್ದು ಈ ರಡೂ ಸರಕಾರಗಳು ಅದರ ಮೇಲೆ ಹಕ್ಕು ಹೊಂದಿದೆ.
ಕೇಂದ್ರ ಪಟ್ಟಿ
ಕೇಂದ್ರ ಪಟ್ಟಿಯಲ್ಲಿ 99 ವಿಷಯಗಳಿದ್ದು ಇವುಗಳ ಬಗ್ಗೆ ಕಾನೂನುಗಳನ್ನು ರಚಿಸುವ ಸಂಪೂರ್ಣ ಅಧಿಕಾರವು ಕೇಂದ್ರ ಸಂಸತ್ತಿಗೆ ಮಾತ್ರ ನೀಡಲಾಗಿದೆ. ಮುಖ್ಯವಾಗಿ ರಕ್ಷಣೆ, ವಿದೇಶ ಸೇವೆ, ಒಪ್ಪಂದಗಳು, ಯುದ್ದ ಹಾಗೂ ಶಾಂತಿ, ನಾಗರಿಕತೆ, ರೈಲ್ವೇ, ಹಡಗು ಮತ್ತು ವಿಮಾನಯಾನ, ಅಂಚೆ-ತಂತಿ, ದೂರವಾಣಿ, ಹಣ-ಚಲಾವಣೆ, ವಿದೇಶ ಸಾಲ, ವಿದೇಶ ವ್ಯಾಪಾರ, ರಿಸರ್ವ್ ಬ್ಯಾಂಕ್, ಅಂತಾರಾಜ್ಯ ವ್ಯಾಪಾರ, ವಾಣಿಜ್ಯ,ಬ್ಯಾಂಕಿಂಗ್, ವಿಮೆ, ಚುನಾವಣೆಗಳು ಇತ್ಯಾದಿಗಳನ್ನು ಕೇಂದ್ರ ಸರಕಾರ ನೋಡಿಕೊಳ್ಳುತ್ತದೆ.
ರಾಜ್ಯ ಪಟ್ಟಿ
ರಾಜ್ಯ ಪಟ್ಟಿಯಲ್ಲಿ 61 ವಿಷಯಗಳಿದ್ದು ರಾಜ್ಯ ಶಾಸಕಾಂಗಗಳಿಗೆ ಸ್ವತಂತ್ರವಾಗಿ ಈ ವಿಷಯಗಳ ಬಗ್ಗೆ ಕಾನೂನುಗಳನ್ನು ರಚಿಸುವ ಅಧಿಕಾರವಿದೆ. ಸಾರ್ವಜನಿಕ ಶಾಂತಿ, ಪೊಲೀಸ್, ನ್ಯಾಯದ ಅಡಳಿತ, ಜೈಲುಗಳು, ಸœಳೀಯ ಸರಕಾರಗಳು, ಸಾರ್ವಜನಿಕ ಆರೋಗ್ಯ, ನಿರ್ಮಲೀಕರಣ, ಗ್ರಂಥಾಲಯಗಳು, ನೀರು ಸರಬರಾಜು, ನೀರಾವರಿ, ಮೀನುಗಾರಿಕೆ, ಸಿನಿಮಾ ಮಂದಿರಗಳು, ಸœಳೀಯ ಚುನಾವಣೆಗಳು, ಕಂದಾಯ ಇತ್ಯಾದಿಗಳನ್ನು ನೋಡಿಕೊಳ್ಳುವ ಜಬಾಬ್ದಾರಿಗಳನ್ನು ರಾಜ್ಯಕ್ಕೆ ವಹಿಸಲಾಗಿದೆ.
ಸಮವರ್ತಿ ಪಟ್ಟಿ
ಈ ಪಟ್ಟಿಯಲ್ಲಿ 51 ವಿಷಯಗಳಿದ್ದು ಇವುಗಳ ಮೇಲೆ ಸಂಸತ್ತು ಹಾಗು ರಾಜ್ಯ ಶಾಸಕಾಂಗಗಳು ಕಾನೂನು ರಚಿಸುವ ಆಧಿಕಾರ ಪಡೆದಿವೆ. ರಾಜ್ಯದ ಭದ್ರತೆ, ವಿವಾಹ, ವಿವಾಹ ವಿಚ್ಛೇದನ, ಅಸ್ತಿಯ ವರ್ಗಾವಣೆ, ಒಕ್ಕುಲುತನ, ಭೂಮಿ, ನಿಕ್ಷೇಪ, ನ್ಯಾಯಾಲಯ ನಿಂದನೆ, ಕಲಬೆರಕೆ, ಸಾಮಾಜಿಕ ಹಾಗು ಆರ್ಥಿಕ ಯೋಜನೆ, ಸಾಮಾಜಿಕ ಭದ್ರತೆ, ಶಿಕ್ಷಣ, ಅರಣ್ಯ, ವೈದ್ಯಕೀಯ ಹಾಗು ಇತರ ವೃತ್ತಿಗಳು. ಬೆಲೆನಿಯಂತ್ರಣ, ಕಾರ್ಖಾನೆಗಳು, ವಿದ್ಯುತ್ತ್ ಶಕ್ತಿ, ಸಮಾಚಾರ ಪತ್ರಿಕೆಗಳು, ಪುಸ್ತಕ ಹಾಗು ಮುದ್ರಣ ಮುಂತಾದವುಗಳನ್ನು ಈ ಎರಡೂ ಸರಕಾರಗಳು ನಿಯಂತ್ರಿಸಬಹುದಾಗಿದೆ. ಇಲ್ಲಿಯೂ ಕೇಂದ್ರದ ಪಾಲು ಹೆಚ್ಚು ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.