![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 25, 2020, 9:16 AM IST
ಹೊಸದಿಲ್ಲಿ: “ಯೋಗಗುರು ಬಾಬಾ ರಾಮ್‌ದೇವ್ ಒಡೆತನದ ಪತಂಜಲಿ ಸಂಸ್ಥೆಯು ಔಷಧಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಎಲ್ಲೂ “ಕೋವಿಡ್’ ಅಥವಾ “ಕೋವಿಡ್ ಔಷಧ’ ಎಂಬ ಪ್ರಸ್ತಾವವೇ ಇರಲಿಲ್ಲ’ ಎಂದು ಉತ್ತರಾಖಂಡ ಸರಕಾರ ಕೇಂದ್ರಕ್ಕೆ ಮಾಹಿತಿ ನೀಡಿದೆ.
“ಕೊರೊನಿಲ್’ ಎಂಬ ಔಷಧವನ್ನು ಮಂಗಳವಾರ ಬಿಡುಗಡೆ ಮಾಡಿದ್ದ ಪತಂಜಲಿ, ಇದು ಕೋವಿಡ್ ಸೋಂಕಿತರನ್ನು ಕೇವಲ 7 ದಿನಗಳಲ್ಲಿ ಗುಣಮುಖ ರನ್ನಾಗಿ ಮಾಡುತ್ತದೆ ಎಂದು ಹೇಳಿಕೊಂಡಿತ್ತು. ಬಿಡುಗಡೆ ಬೆನ್ನಲ್ಲೇ ಈ ಕುರಿತು ಅಧಿಸೂಚನೆ ಹೊರಡಿಸಿದ್ದ ಆಯುಷ್ ಇಲಾಖೆ, ಇದು “ಕೋವಿಡ್ ಔಷಧ’ ಎಂದು ಪ್ರಚಾರ ನಡೆಸದಂತೆ ಸಂಸ್ಥೆಗೆ ಸೂಚನೆ ನೀಡಿತ್ತು. ಜೊತೆಗೆ ಪರವಾನಗಿ ವಿವರಗಳನ್ನು ಸಲ್ಲಿಸುವಂತೆ ಉತ್ತರಾಖಂಡ ಸರಕಾರಕ್ಕೆ ತಿಳಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡ ಸರಕಾರ, ಪತಂಜಲಿ ಸಲ್ಲಿಸಿದ್ದ ಅರ್ಜಿಯಲ್ಲಿ “ಕೋವಿಡ್ ವೈರಸ್ ಸೋಂಕಿನ ಔಷಧ’ ಎಂಬ ಪ್ರಸ್ತಾಪ ಇರಲಿಲ್ಲ.
ರೋಗನಿರೋಧಕ ಶಕ್ತಿ ಹೆಚ್ಚಳ, ಕೆಮ್ಮು ಮತ್ತು ಜ್ವರ ಕಡಿಮೆ ಮಾಡುವ ಔಷಧಕ್ಕೆ ಮಾತ್ರ ನಾವು ಪರವಾನಗಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಈ ಸಂಬಂಧ ಪತಂಜಲಿ ಆಯುರ್ವೇದ ಸಂಸ್ಥೆಗೆ ನೋಟಿಸ್ ನೀಡುವುದಾಗಿಯೂ ಸರಕಾರ ಹೇಳಿದೆ.
ಒಳ್ಳೆಯ ಕೆಲಸವೇ, ಆದರೆ…
“ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಕೊರೊನಾದಿಂದ ಬಳಲುತ್ತಿರುವ ದೇಶಕ್ಕೆ ಒಂದು ಔಷಧವನ್ನು ನೀಡಿರುವುದು ಒಳ್ಳೆಯ ಕಾರ್ಯವೇ. ಆದರೆ, ಅದಕ್ಕೆ ಆಯುಷ್ ಇಲಾಖೆ ಯಿಂದ ಸೂಕ್ತ ಅನುಮತಿ ಪಡೆಯಬೇಕಾದ್ದು ಕೂಡ ಅಷ್ಟೇ ಮುಖ್ಯ’ ಎಂದು ಆಯುಷ್ ಸಚಿವ ಶ್ರೀಪಾದ್ ನಾಯ್ಕ ಹೇಳಿದ್ದಾರೆ. ಹಾಗೇ, ಔಷಧಿ ಮತ್ತು ಪರವಾನಗಿಗೆ ಸಂಬಂಧಿಸಿದ ದಾಖಲೆಗಳನ್ನು ಪತಂಜಲಿ ಸಂಸ್ಥೆಯು ಮಂಗಳವಾರ ಇಲಾಖೆಗೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.
ಸಂವಹನದ ಕೊರತೆಯಿಂದಾಗಿ ಇಷ್ಟೆಲ್ಲಾ ಗೊಂದಲ ಸೃಷ್ಟಿಯಾಗಿದೆ. ಔಷಧದ ಸಂಶೋಧನೆಯಿಂದ ಪ್ರಯೋಗದವರೆಗೆ ಎಲ್ಲ ಹಂತಗಳಲ್ಲೂ ನಾವು ಅನುಮತಿ ಪಡೆದಿದ್ದೇವೆ. ಸಂಸ್ಥೆಯು ಯಾವುದೇ ಕಾನೂನು ಉಲ್ಲಂಘಿಸಿಲ್ಲ.
ಬಾಬಾ ರಾಮ್‌ದೇವ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.