ರಾಜಕಾರಣಿಗಳೇ ಟಾರ್ಗೆಟ್!; ಸುರಸುಂದರ ದರೋಡೆಕೋರ ಸೆರೆ
Team Udayavani, Aug 22, 2017, 10:35 AM IST
ಹೊಸದಿಲ್ಲಿ : ದೇಶವನ್ನು ಅತೀ ಹೆಚ್ಚು ಲೂಟಿ ಹೊಡೆದದ್ದು ಯಾರು ಎಂದರೆ ರಾಜಕಾರಣಿಗಳು ಎನ್ನುವುದು ಹೆಚ್ಚಿನವರ ಅಂಬೋಣ. ಆದರೆ ಈ ಖತರ್ನಾಕ್ ಕಳ್ಳ ಮಾತ್ರ ಹಾಗಲ್ಲ ರಾಜಕಾರಣಿಗಳನ್ನೇ ಗುರಿಯಾಗಿರಿಸಿಕೊಂಡು ದರೋಡೆ ಮಾಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಗ್ರಾಫಿಕ್ ಡಿಸೈನರ್ ಆಗಿರುವ 27 ರ ಹರೆಯದ ಸಿದ್ಧಾರ್ಥ್ ಮೆಹರೋತ್ರಾ ಎಂಬ ಬ್ಯಾಂಕ್ ಮ್ಯಾನೇಜರ್‌ವೊಬ್ಬರ ಮಗ ದೆಹಲಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳ ಆರೋಪಿಯಾಗಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಬಾಲಿವುಡ್ ನಟರಂತೆ ಅಂಗ ಸೌಷ್ಟವವುಳ್ಳ ಸಿದ್ದಾರ್ಥ್ ನ ತನ್ನ ಐಷಾರಾಮಿ ಜೀವನಕ್ಕಾ ಗಿ ಕಳ್ಳತನ ಮತ್ತು ದರೋಡೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಕಾರಣಿಗಳು,ಅಧಿಕಾರಿಗಳು, ಉದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳೇ ಈತನ ಟಾರ್ಗೆಟ್ ಆಗಿದ್ದು , ಜನವರಿಯಿಂದ ನಡೆದ ಹಲವು ಪ್ರಕರಣ ಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ದೆಹಲಿಯ ದಕ್ಷಿಣ ವಲಯ ಡಿಜಿಪಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಶ್ರೀಮಂತರ ಮನೆಗಳಲ್ಲಿ ನಡೆದ ಹಲವು ಕಳವು ಪ್ರಕರಣಗಳಿಗೆ ಸಂಬಂಧಿಸಿ ವಸಂತ್‌ಕುಂಜ್‌ನ ಪೊಲೀಸ್ ತಂಡ ಕಾರ್ಯಾಚರಣೆಗಿಳಿದ ವೇಳೆ ಸಿದ್ಧಾರ್ಥ್ ಬಲೆಗೆ ಬಿದ್ದಿದ್ದಾನೆ.
ಸಿದ್ದಾರ್ಥ್ ನ ಫೇಸ್ ಬುಕ್ ಪರಿಶೀಲಿಸಿದಾಗ ಪೊಲೀಸರು ಆಘಾತಗೊಂಡಿದ್ದು, ಐಷಾರಾಮಿ ಕಾರಾದ ಫೋರ್ಡ್ ಇಕೋಸ್ಫೋರ್ಟ್ಸ್ ಕಾರಿನ ಎದುರು ಕುಳಿತಿದ್ದು ,ಅಲ್ಲಿ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಲೇಹ್‌ನಲ್ಲಿ ಕ್ಲಿಕ್ಕಿಸಿಕೊಂಡ ಚಿತ್ರ ಇದಾಗಿತ್ತು. ಕಾರು ವಿಕಾಸ್ ಎಂಬ ಸಿದ್ದಾರ್ಥ್ ನ ಸ್ನೇಹಿತನದ್ದಾಗಿದ್ದು ಪ್ರವಾಸಕ್ಕೆ ಜೊತೆಯಲ್ಲಿ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಿತಾಂಪುರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಿದ್ಧಾರ್ಥ್ನನ್ನು ದಾಳಿ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧನದ ವೇಳೆ ಶೆವರ್ಲೆಟ್ ಕ್ರೂಝ ಕಾರು, ಅಮೆರಿಕದ ನೋಟುಗಳು ಸೇರಿದಂತೆ 10 ದೇಶಗಳ ವಿದೇಶಿ ನೋಟುಗಳು,11 ಚಿನ್ನದ ಸರಗಳು, 4 ಉಂಗುರಗಳು, 2 ಜೊತೆ ಕಿವಿಯೋಲೆಗಳು,2 ಚಿನ್ನದ ಬಳೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದೆಲ್ಲವನ್ನೂ ಕಳ್ಳತನ ಮಾಡಿರುವುದಾಗಿ ಸಿದ್ದಾರ್ಥ್ ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2015 ರಲ್ಲೂ ಸಿದ್ದಾರ್ಥ್ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.ಆದರೂ ತನ್ನ ಚಾಳಿ ಮುಂದುವರಿಸಿದ್ದ.
ಈತನ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ಜಿತೇಂದರ್ ಮತ್ತು ಅನುರಾಗ್ ಸಿಂಗ್ ಎನ್ನುವವರನ್ನೂ ವಶಕ್ಕೆ ಪಡೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.