ಟಿಕೆಟ್ ಬುಕಿಂಗ್‌ಗೆ ಅಂತರ ಭಯವಿಲ್ಲ; ಯುಟಿಎಸ್ ನಿಯಮಗಳಲ್ಲಿ ಭಾರೀ ಬದಲು
Team Udayavani, Nov 12, 2022, 7:35 AM IST
ನವದೆಹಲಿ:ರೈಲು ಹೊರಡುವ ಸಮಯ… ಸರದಿಯಲ್ಲಿ ನಿಂತು ಟಿಕೆಟ್ ತೆಗೆದುಕೊಳ್ಳುವಷ್ಟು ಸಮಯ ಇಲ್ಲ… ಇಂಥ ಸಮಯದಲ್ಲಿ ಏನು ಮಾಡಬೇಕು?ಇದಕ್ಕಾಗಿಯೇ ರೈಲ್ವೆ ಇಲಾಖೆ, ನಿಮ್ಮ ಮೊಬೈಲ್ ಮೂಲಕವೇ ರೈಲು ನಿಲ್ದಾಣದಿಂದ 20 ಕಿಮೀ ದೂರದಿಂದಲೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ರೂಪಿಸಿದೆ.
ಅನ್‌ರಿಸರ್ವ್ ಟಿಕೆಟ್ ಬುಕಿಂಗ್ ಸಿಸ್ಟಮ್ (ಯುಟಿಎಸ್) ವ್ಯವಸ್ಥೆಯ ಅನ್ವಯ ಮೊಬೈಲ್ ಆ್ಯಪ್ ಮೂಲಕ ಈವರೆಗೆ ಐದು ಕಿಮೀ ವ್ಯಾಪ್ತಿಯೊಳಗೆ ಟಿಕೆಟ್ ಖರೀದಿಸಬಹುದಾಗಿತ್ತು. ಇನ್ನು ದೂರದ ಆಂತಕ ಬೇಕಾಗಿಲ್ಲ. ಹೊಸ ನಿರ್ಧಾರದ ಪ್ರಕಾರ ಇನ್ನು ಮುಂದೆ 20 ಕಿಮೀ ದೂರದ ವ್ಯಾಪ್ತಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪರಿಷ್ಕೃತ ನಿರ್ಧಾರದ ಪ್ರಕಾರ ಉಪನಗರ ವ್ಯಾಪ್ತಿಯಲ್ಲಿ ಇಲ್ಲದ ರೈಲು ನಿಲ್ದಾಣ ಅಲ್ಲದ ಪ್ರದೇಶದಲ್ಲಿ ಸದ್ಯ ಇರುವ 5 ಕಿಮೀ ವ್ಯಾಪ್ತಿಯಿಂದ 20 ಕಿಮೀ, ಉಪನಗರದ ವ್ಯಾಪ್ತಿಯಲ್ಲಿ ಬರುವ ರೈಲು ನಿಲ್ದಾಣಗಳಲ್ಲಿ ಹಾಲಿ 2 ಕಿಮೀನಿಂದ 5 ಕಿಮೀಗೆ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ವಿಸ್ತರಿಸಲಾಗಿದೆ.
ಪ್ಯಾಸೆಂಜರ್ ರೈಲು ಮತ್ತು ದೂರದ ಸ್ಥಳಗಳಿಗೆ ಪ್ರಯಾಣಿಸುವವರು ಹಲವು ಸಮಯದಿಂದ ಟಿಕೆಟ್ ಕಾಯ್ದಿರಿಸುವ ಅಂತರ ಹೆಚ್ಚಿಸುವ ಬಗ್ಗೆ ಮನವಿ ಮಾಡುತ್ತಿದ್ದರು. ಅದಕ್ಕೆ ಅನುಸಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಾವತಿ ಹೇಗೆ?:
ಆರ್- ವ್ಯಾಲೆಟ್, ಪೇಟಿಎಂ, ಮೊಬಿಕ್ಲಿಕ್ ಅಥವಾ ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ನಿಗದಿತ ಟಿಕೆಟ್ ಖರೀದಿಸಿ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಸೌಲಭ್ಯದಿಂದಾಗಿ ಪ್ರಯಾಣಿಕರಿಗೆ ಕ್ಷಿಪ್ರವಾಗಿ ಟಿಕೆಟ್ ಕಾಯ್ದಿರಿಸಲು ಅನುಕೂಲವಾಗಲಿದೆ.
ಸದ್ಯ
ಉಪನಗರ ವ್ಯಾಪ್ತಿಯಲ್ಲಿ ಇಲ್ಲದ ರೈಲು ನಿಲ್ದಾಣ 5 ಕಿಮೀ
ಪರಿಷ್ಕರಣೆ- 20 ಕಿಮೀ
ಉಪ ನಗರ ವ್ಯಾಪ್ತಿಯಲ್ಲಿ ಇರುವ ನಿಲ್ದಾಣ 2 ಕಿಮೀ
ಪರಿಷ್ಕರಣೆ- 5 ಕಿಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.