ತಂದೆಗೇ ಪುನರ್ಜನ್ಮ ನೀಡಿದ ಪುತ್ರಿ
Team Udayavani, Nov 11, 2017, 6:10 AM IST
ನವದೆಹಲಿ: ಪಿತ್ತಕೋಶದ ವೈಫಲ್ಯದಿಂದಾಗಿ ಸಾವಿನಂಚಿಗೆ ಸರಿದಿದ್ದ ತನ್ನ ತಂದೆಯನ್ನು ತನ್ನ ಪಿತ್ತಕೋಶವನ್ನು ನೀಡಿ ಬದುಕಿಸಿಕೊಂಡಿರುವ ಯುವತಿಯ ಧೈರ್ಯವನ್ನು ವೈದ್ಯರೊಬ್ಬರು ಫೇಸ್‌ಬುಕ್ ಬರಹವೊಂದರ ಮೂಲಕ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಹೊಂದಿರುವವರ ಕಣ್ತೆರೆಯುವ ಪ್ರಯತ್ನ ಮಾಡಿರುವುದು ಈಗ ವೈರಲ್ ಆಗಿದೆ. ಸುಮಾರು 10 ಸಾವಿರ ಜನರು ಈ ಪುಟ್ಟ ಬರಹವನ್ನು ಮೆಚ್ಚಿಕೊಂಡಿದ್ದು (ಲೈಕ್ಸ್) ವೈದ್ಯರ ಅನಿಸಿಕೆಗೆ ತಲೆದೂಗಿದ್ದಾರೆ.
ಇತ್ತೀಚೆಗೆ, ಪೂಜಾ ಬಿಜಾರ್ನಿಯಾ ಎಂಬ ಯುವತಿ ಪಿತ್ತಕೋಶ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಗೆ ತನ್ನ ಪಿತ್ತಕೋಶ ದಾನ ಮಾಡಿ ಅವರನ್ನು ಬದುಕಿಸಿ ಕೊಂಡಿದ್ದಳು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿ ಕೊಂಡ ಅಪ್ಪ- ಮಗಳ ಫೋಟೋದೊಂದಿಗೆ ಈ ಸುದ್ದಿ ವೈರಲ್ ಆಗಿತ್ತು.
ಇದೀಗ, ಡಾ. ರಚಿತ್ ಭೂಷಣ್ ಶ್ರೀವಾಸ್ತವ ಎಂಬ ವೈದ್ಯರೊಬ್ಬರು ಈ ಫೋಟೋ ಉಪಯೋಗಿಸಿ ಮನಮುಟ್ಟುವ ಅಡಿಬರಹ ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ನಿಜ ಜೀವನಗಳಲ್ಲಿ ಹೀರೋಗಳನ್ನು ತುಂಬಾ ಅಪರೂಪವಾಗಿ ನೋಡುತ್ತೇವೆ. ಪಿತ್ತಕೋಶ ದಾನ ಮಾಡಿ ತಂದೆಯನ್ನು ಉಳಿಸಿಕೊಂಡ ಈ ಯುವತಿಯು, ಹೆಣ್ಣೆಂದರೆ ಅಸಡ್ಡೆ ತೋರುವ ಅದೆಷ್ಟೋ ಹೆತ್ತವರಿಗೆ, ಹೆಣ್ಣು ಏನು ತಾನೇ ಮಾಡಿಯಾಳು ಎಂದು ಪ್ರಶ್ನಿಸುವ ವ್ಯಕ್ತಿಗಳಿಗೆ ಉತ್ತರ ನೀಡಿದ್ದಾಳೆ. ಈಕೆ ವೈಯಕ್ತಿಕವಾಗಿ ಪರಿಚಯವಿಲ್ಲದಿದ್ದರೂ, ಈಕೆಗೆ ನಾನು ಅಭಿನಂದನೆ ಅರ್ಪಿಸುತ್ತೇನೆ. ದೇವರು ಆಕೆಗೆ ಒಳ್ಳೆಯದನ್ನು ಮಾಡಲಿ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.