ಇದು ಅಂತೆ ಕಂತೆಗಳಲ್ಲೇ ಜನಿಸಿದ ಹಗರಣ
Team Udayavani, Dec 22, 2017, 7:55 AM IST
ಹೊಸದಿಲ್ಲಿ: ಅತ್ತ ದಿಲ್ಲಿಯ ವಿಶೇಷ ಸಿಬಿಐ ಕೋರ್ಟ್ 2ಜಿ ಸ್ಪೆಕ್ಟ್ರಂ ಹಗರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸುತ್ತಲೇ ರಾಜಕೀಯ ವಲಯದಲ್ಲಿ ಈ ವಿಚಾರ ಭಾರೀ ಚರ್ಚೆ, ವಾಕ್ಸಮರ ಹಾಗೂ ಪರಸ್ಪರ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು “ವಿಕ್ಟಿಮ್ ಕಾರ್ಡ್'(ಬಲಿಪಶು) ಪ್ರಯೋಗಿಸಲು ಶುರು ಮಾಡಿದರೆ, ಇದನ್ನು ನಿಮ್ಮ ಜಯವೆಂದು ಹಿಗ್ಗಬೇಕಾಗಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.
ತೀರ್ಪು ಹೊರಬೀಳುತ್ತಿದ್ದಂತೆಯೇ, ಮಾಜಿ ಸಚಿವ ಎ.ರಾಜಾ, ಸಂಸದೆ ಕನಿಮೋಳಿ ಸೇರಿದಂತೆ ಆರೋಪಿಗಳು, ಅವರಿಗೆ ಸಂಬಂಧಿಸಿದ ಪಕ್ಷಗಳು, ಕಾರ್ಯಕರ್ತರು ನಿಟ್ಟುಸಿರು ಬಿಟ್ಟರು. ಜತೆಗೆ, ಯುಪಿಎ ಸರಕಾರಕ್ಕೆ 2ಜಿ ಹಗರಣದ ಮಸಿ ಬಳಿದ ಬಿಜೆಪಿ ಮೇಲೆ ಹರಿಹಾಯಲು ಆರಂಭಿಸಿ ದರು. ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಮಾತನಾಡಿ, “2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಯಾವುದೇ ನಷ್ಟ ಆಗಿಲ್ಲ ಎಂದು ನಾನು ಮೊದಲಿಂ ದಲೂ ಹೇಳುತ್ತಾ ಬಂದಿದ್ದೇನೆ. ಅದಿವತ್ತು ಸಾಬೀತಾಯಿತು. ನಿಜ ಹೇಳಬೇಕೆಂದರೆ, ಇದು ಸುಳ್ಳುಗಳ ಹಗರಣ. ಹಾಗಾಗಿ, ಅಂದಿನ ಸಿಎಜಿ ವಿನೋದ್ ರಾಯ್ ಹಾಗೂ ಬಿಜೆಪಿ ದೇಶದ ಕ್ಷಮೆ ಯಾಚಿಸಬೇಕು,’ ಎಂದು ಆಗ್ರಹಿಸಿದರು. ಜತೆಗೆ, ಸುಪ್ರೀಂ ಕೋರ್ಟ್ ಟೆಲಿಕಾಂ ಲೈಸೆನ್ಸ್‌ಗಳನ್ನು ರದ್ದು ಮಾಡಿದ್ದು ತಪ್ಪು ನಿರ್ಧಾರವಾಗಿತ್ತು ಎಂದೂ ಹೇಳಿದರು.
ಗೌರವ ಎಂದು ಪರಿಗಣಿಸಬೇಡಿ: ಸಿಬಲ್ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ, “ಯುಪಿಎ ಸರಕಾರದ “ಮೊದಲು ಬಂದವರಿಗೆ ಆದ್ಯತೆ’ ಎಂಬ ನೀತಿಯೇ ಆಯ್ದ ಕೆಲವರಿಗೆ ಲಾಭ ತಂದು ಕೊಡು ವುದಾಗಿತ್ತು. ಈಗ ಕೋರ್ಟ್ ತೀರ್ಪನ್ನು ನಿಮಗೆ ಸಿಕ್ಕ ಗೌರವ ಎಂದು ಭಾವಿಸುವುದು ಬೇಡ. ಕೋರ್ಟ್ ನಿಮ್ಮ ಪರ ತೀರ್ಪು ನೀಡಿರಬಹುದು. ತನಿಖಾ ಸಂಸ್ಥೆಗಳು ಮುಂದೇನು ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳಲಿವೆ’ ಎಂದರು.
ಸ್ವಾಮಿ ವಿರುದ್ಧ ಮುಕುಲ್ ಕಿಡಿ: ಪ್ರಕರಣದ ಅರ್ಜಿದಾ ರರೂ ಆಗಿದ್ದ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಅವರು, ತೀರ್ಪು ಪ್ರಶ್ನಿಸಿ ಸರಕಾರ ದಿಲ್ಲಿ ಹೈಕೋರ್ಟ್ ಮೆಟ್ಟಿ ಲೇರಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ, ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಪ್ರಕರ ಣದ ಹಲವು ಆರೋಪಿಗಳ ಪರ ವಕಾಲತ್ತು ವಹಿಸಿದ್ದರು. ಅವರನ್ನೇ ಅಟಾರ್ನಿಯಾಗಿ ನೇಮಿಸಿದ್ದೇಕೆ ಎಂದೂ ಪ್ರಶ್ನಿಸಿ ದ್ದಾರೆ. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಮುಕುಲ್, “ಸ್ವಾಮಿ ಅವರಿಗೆ ಸುಳ್ಳು ಆರೋಪ ಹೊರಿಸುವುದು ಅಭ್ಯಾಸ. ನಾನು 2012ರಲ್ಲಿ ಕೆಲವು ಆರೋಪಿಗಳ ಜಾಮೀನಿಗೆ ಸಂಬಂ ಧಿಸಿ ಸುಪ್ರೀಂನಲ್ಲಿ ಹಾಜರಾಗಿದ್ದೆ. ಆದರೆ, ನಾನು ಎಜಿಯಾಗಿ ನೇಮಕವಾದ ಬಳಿಕ ಆ ಕೇಸಿಗೂ ನನಗೂ ಸಂಬಂಧವೇ ಇರಲಿಲ್ಲ. ಆರೋಪ ಅರ್ಥಹೀನ’ ಎಂದಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ಆಗಿದ್ದರು ಜಡ್ಜ್ ಸೈನಿ
ಸಿಬಿಐನ ವಿಶೇಷ ಕೋರ್ಟ್ ನ್ಯಾಯಾಧೀಶ ಓಂ ಪ್ರಕಾಶ್ ಸೈನಿ ಹಿಂದೊಮ್ಮೆ ಕಾಮ ನ್ವೆಲ್ತ್ ಹಗರಣದ ವಿಚಾರಣೆಯನ್ನೂ ನಡೆಸಿದ್ದರು. ಮಾಜಿ ಸಚಿವ ಸುರೇಶ್ ಕಲ್ಮಾಡಿ, ಲಲಿತ್ ಭಾನೋಟ್, ವಿ.ಕೆ.ವರ್ಮಾ ಸೇರಿದಂತೆ ಪ್ರಮುಖರನ್ನು ಒಮ್ಮೆ ಕಂಬಿ ಎಣಿಸು ವಂತೆ ಮಾಡಿದ್ದೂ ಇವರೇ. ಇಂಥ ಹೆಗ್ಗಳಿಕೆ ಇರುವ ಸೈನಿ ಆರಂಭದದಲ್ಲಿ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆ³ಕ್ಟರ್ ಆಗಿದ್ದರು. ಪೊಲೀಸ್ ಇಲಾಖೆಗೆ ಸೇರಿ ಆರು ವರ್ಷಗಳ ಬಳಿಕ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಪರೀಕ್ಷೆ ಬರೆದರು. ಅದರಲ್ಲಿ ಉತ್ತೀರ್ಣಗೊಂಡು ನ್ಯಾಯಾಂಗ ಸೇವೆಗೆ ಬಂದರು. ಸೈನಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ.ಕೆ.ಸಿಂ Ì ಮತ್ತು ಎ.ಕೆ.ಗಂಗೂಲಿ ಅವರು ವಿಶೇಷ ಕೋರ್ಟ್‌ಗೆ ನ್ಯಾಯಾಧೀಶರನ್ನಾಗಿ ನೇಮಿಸಿದ್ದರು. ಕೆಂಪು ಕೋಟೆಯಲ್ಲಿ ನಡೆದ ಶೂಟೌಟ್, ನಾಲ್ಕೋ ಲಂಚ ಪ್ರಕರಣಗಳ ವಿಚಾರಣೆಯನ್ನೂ ಅವರು ನಡೆಸಿದ್ದರು.
ಇಲ್ಲದ “ಹಗರಣ’ದಲ್ಲಿ “ಹಗರಣ’ವ ಕಂಡರು!
“ಕೆಲವು ವ್ಯಕ್ತಿಗಳೇ ಆಯ್ದ ಸತ್ಯಗಳನ್ನು ಕಲಾತ್ಮಕ ವಾಗಿ ಜೋಡಿಸಿ, ಹಗರಣವೇ ಅಲ್ಲದ್ದನ್ನು “ಹಗರಣ’ವನ್ನಾಗಿ ಸೃಷ್ಟಿಸಿದರು.’ ಹೀಗೆಂದು ಹೇಳಿದ್ದು ಬೇರ್ಯಾರೂ ಅಲ್ಲ. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಕೋಲಾಹಲವೆಬ್ಬಿಸಿದ 2ಜಿ ಲೈಸೆನ್ಸ್ ಹಂಚಿಕೆ ಹಗರಣದ ತೀರ್ಪು ನೀಡಿದ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಒ.ಪಿ.ಸೈನಿ. ಹಗರಣದಿಂದಾಗಿ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ವರದಿ ನೀಡಿದ್ದ ಮಹಾಲೇಖಪಾಲರು ಹಾಗೂ ತನಿಖೆ ನಡೆಸಿದ ಸಿಬಿಐ ವಿರುದ್ಧ ನ್ಯಾಯಾಧೀಶರು ಕಿಡಿ ಕಾರಿದ್ದಲ್ಲದೆ, “ಇಲ್ಲದ ಹಗರಣದಲ್ಲಿ ಹಗರಣ ವನ್ನು ಕಂಡವರಿವರು’ ಎಂದರು. ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳ ವಿವಿಧ ಕ್ರಿಯೆಗಳು ಮತ್ತು ಲೋಪಗಳಿಂದಾಗಿ ಎಲ್ಲರೂ ಇದರಲ್ಲಿ ಹಗರಣವೊಂದಿದೆ ಎಂದು ಭಾವಿಸಿ ದರು. ಇನ್ನು ಕೆಲವರಂತೂ ಕೆಲವೇ ಕೆಲವು ಸತ್ಯಗಳನ್ನು ಜೋಡಿಸಿ, ಎಲ್ಲವನ್ನೂ ವೈಭವೀ ಕರಿಸಿ ಹಗರಣವಿರು ವಂತೆ ಬಿಂಬಿಸಿದರು. ಇಲಾಖೆಯ ಅಧಿಕಾರಿಗಳು ಕಡತಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಿಲ್ಲ. ಒಂದಕ್ಕೊಂದು ಮಿಶ್ರಣ ಮಾಡಿ ಗೊಂದಲ ಸೃಷ್ಟಿಸಿದರು. ಇದೂ ಕೂಡ ಸಮಸ್ಯೆ ಕ್ಲಿಷ್ಟಕರವಾಗಲು ಕಾರಣವಾ ಯಿತು ಎಂದೂ ಹೇಳಿದರು ನ್ಯಾಯಾಧೀಶ ಸೈನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.