ಇದು ಬಾಹ್ಯಾಕಾಶದಲ್ಲಿನ ಸರ್ಜಿಕಲ್‌ ಸ್ಟ್ರೈಕ್‌

ಪಿಎಂ ಮೋದಿ ನಿರ್ಧಾರ ಕೊಂಡಾಡಿದ ದೇಶದ ವೈಜ್ಞಾನಿಕ ಸಮೂಹ

Team Udayavani, Mar 28, 2019, 6:00 AM IST

s-11

ಹೊಸದಿಲ್ಲಿ/ಹೈದರಾಬಾದ್‌: ಶತ್ರುದೇಶಗಳ ಉಪಗ್ರಹಗಳನ್ನು ಹೊಡೆದುರುಳಿಸುವ ತಂತ್ರಜ್ಞಾನವನ್ನು (ಎ-ಸ್ಯಾಟ್‌)ಸ್ವದೇಶಿ ಯಾಗಿಯೇ ಅಭಿವೃದ್ಧಿಪಡಿಸಲಾಗಿದ್ದು, ಬುಧವಾರದ ಸಾಧನೆ ಬಾಹ್ಯಾಕಾಶದಲ್ಲಿನ ಸರ್ಜಿಕಲ್‌ ಸ್ಟ್ರೈಕ್‌ ಎಂದು ದೇಶದ ವಿಜ್ಞಾನಿಗಳ ಸಮೂಹ ಕೊಂಡಾಡಿದೆ. ಇತ್ತೀಚೆಗಷ್ಟೇ ಇಸ್ರೋ 48 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ದಾಖಲೆ ಸ್ಥಾಪಿಸಿತ್ತು. ಅದರ ಬೆನ್ನಿಗೇ ಇಂಥ ಪರಾಕ್ರಮ ನಡೆದಿರುವುದು ಹೆಮ್ಮೆಯ ವಿಚಾರ ಎಂದು ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ (ಡಿಆರ್‌ಡಿಒ)ದ ಹೆಸರು ಬಹಿರಂಗಪಡಿಸಲಿಚ್ಛಿಸದ ವಿಜ್ಞಾನಿಯೊಬ್ಬರು ಹೇಳಿದ್ದಾರೆ. 2012ರಲ್ಲಿಯೇ ಒಡಿಶಾದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ದ್ವೀಪದಿಂದ ಅಗ್ನಿ -5 ಕ್ಷಿಪಣಿಯನ್ನು ಉಡಾಯಿಸಿದ್ದಾಗಲೇ ಭಾರತಕ್ಕೆ ಶತ್ರು ರಾಷ್ಟ್ರಗಳ ಉಪಗ್ರಹಗಳನ್ನು ಹೊಡೆದು ಉರುಳಿಸಲು ಶಕ್ತಿ ಇದೆ ಎಂದು ಸಾಬೀತಾಗಿತ್ತು. 5 ಸಾವಿರ ಕಿಮೀ ದೂರದಲ್ಲಿ ಇರುವ ನೆಲೆಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಇರುವ ಈ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಿದ್ದು ಡಿಆರ್‌ಡಿಒದ ಮುಖ್ಯಸ್ಥರಾಗಿದ್ದ ವಿ.ಕೆ. ಸಾರಸ್ವತ್‌. ತುರ್ತು ಪರಿಸ್ಥಿತಿಯಲ್ಲಿ ಉಪಗ್ರಹಗಳನ್ನು ಹೊಡೆದು ಉರುಳಿಸಲು ಅಥವಾ ನಭಕ್ಕೆ ಉಡಾಯಿಸಲು ಸಾಧ್ಯವಾಗಬಹುದು ಎಂದು ಹೇಳಿದ್ದರು.

ಮುಂದಿನ ದಿನಗಳಲ್ಲಿ ಬಾಹ್ಯಾಕಾಶದಲ್ಲಿಯೇ ಹೆಚ್ಚಿನ ರೀತಿಯಲ್ಲಿ ಯುದ್ಧಗಳು ನಡೆಯುವ ಹಿನ್ನೆಲೆಯಲ್ಲಿ ಈ ಸಾಧನೆ ಅಮೂಲ್ಯವಾದದ್ದು ಎಂದು ಇನ್ಸ್ಟಿಟ್ಯೂಟ್‌ ಫಾರ್‌ ಡಿಫೆನ್ಸ್‌ ಸ್ಟಡೀಸ್‌ ಆ್ಯಂಡ್‌ ಅನಾಲಿಸಿಸ್‌ (ಐಡಿಎಸ್‌ಎ)ನ ವಿಜ್ಞಾನಿ ಅಜಯ್‌ ಲೀಲೆ ಹೇಳಿದ್ದಾರೆ. ಒಂದು ವೇಳೆ ಬಾಹ್ಯಾಕಾಶದಲ್ಲಿರುವ ನಮ್ಮ ದೇಶದ ಉಪಗ್ರಹಗಳು ಇತರ ದೇಶಗಳ ದಾಳಿಯಿಂದ ಹಾನಿಗೀಡಾದರೆ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದಂತಾಗಿದೆ ಎಂದು ಹೇಳಿದ್ದಾರೆ. ಜತೆಗೆ ಹಾನಿ ಉಂಟಾಗುವುದು ಮತ್ತೂಂದು ದೇಶಕ್ಕೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ ಈಗಾಗಲೇ ಖಂಡಾತರ ಬಾಲಿಸ್ಟಿಕ್‌ ಮಿಸೈಲ್‌ (ಐಸಿಬಿಎಂ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಲೋ ಅರ್ತ್‌ ಆರ್ಬಿಟ್‌ನ 300 ಕಿಮೀ ವ್ಯಾಪ್ತಿಯಲ್ಲಿ ಉಪಗ್ರಹಗಳನ್ನು ಉಡಾಯಿಸುವ ಕ್ಷಿಪಣಿ ಪರೀಕ್ಷೆ ನಡೆಸಿರುವುದು ದೇಶದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಉಪಗ್ರಹಗಳಿಂದ ಸಿಗುವ ಮಾಹಿತಿಯನ್ನು ಆಧರಿಸಿ ಸೇನಾ ಪಡೆಗಳು ಇತ್ತೀಚಿನ ವರ್ಷಗಳಲ್ಲಿ ದೇಶದ ಭದ್ರತೆಯ ಬಗ್ಗೆ ಹೆಚ್ಚಿನ ರೀತಿಯಲ್ಲಿ ಕಾರ್ಯವೆಸಗುತ್ತಿವೆ. ಗುಪ್ತಚರ ಮಾಹಿತಿ ಸಂಗ್ರಹಣೆಗೂ ಅವುಗಳನ್ನೇ ಬಳಕೆ ಮಾಡಲಾಗುತ್ತದೆ. ಈ ಹಂತದಲ್ಲಿ ಉಪಗ್ರಹ ಹೊಡೆದು ಉರುಳಿಸುವ ತಂತ್ರಜ್ಞಾನ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಖಂಡಾತರ ಬಾಲಿಸ್ಟಿಕ್‌ ಮಿಸೈಲ್‌ (ಐಸಿಬಿಎಂ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಲೋ ಅರ್ತ್‌ ಆರ್ಬಿಟ್‌ನ 300 ಕಿಮೀ ವ್ಯಾಪ್ತಿಯಲ್ಲಿ ಉಪಗ್ರಹಗಳನ್ನು ಉಡಾಯಿಸುವ ಕ್ಷಿಪಣಿ ಪರೀಕ್ಷೆ ನಡೆಸಿರುವುದು ದೇಶದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಆದರೆ ವಿಜ್ಞಾನಿಗಳ ಸಮುದಾಯದಿಂದ ಕೂಡ ಇಂಥ ಪ್ರಯೋಗದ ಬಗ್ಗೆ ಆಕ್ಷೇಪ ಕೂಡ ಕೇಳಿ ಬಂದಿದೆ. ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಇನ್ಸ್ಟಿಟ್ಯೂಟ್‌ ಫಾರ್‌ ಡಿಸಾರ್ಮಮೆಂಟ್‌ ರಿಸರ್ಚ್‌ (ಯುಎನ್‌ಐಡಿಐಆರ್‌)ನ ಹಿರಿಯ ವಿಜ್ಞಾನಿ ಡ್ಯಾನಿಯನ್‌ ಪೊರ್ರಾಸ್‌ ಪ್ರತಿಕ್ರಿಯೆ ನೀಡಿ, ಲೋ ಅರ್ತ್‌ ಆರ್ಬಿಟ್‌ ವಲಯಕ್ಕೆ ಇಂಥ ಬೆಳವಣಿಗೆ ಒಳ್ಳೆಯದಲ್ಲ. ಈ ಹಂತದಲ್ಲಿ ದೂರಸಂಪರ್ಕ ಮತ್ತು ಭೂಪರಿವೀಕ್ಷಣಾ ಉಪಗ್ರಹಗಳು ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿರುತ್ತವೆ. ಏಕೆಂದರೆ ಅವುಗಳು ಇರುವುದು ಭೂಮಿಯಿಂದ 400 ಕಿಮೀ ವ್ಯಾಪ್ತಿಯಲ್ಲಿಯೇ ಎಂದು ಹೇಳಿದ್ದಾರೆ.

“ರಾಜಕೀಯ ಇಚ್ಛಾಶಕ್ತಿಯ ಕೊರತೆ ಇತ್ತು’
ಭಾರತ ಕ್ಷಿಪಣಿ ಹೊಡೆದು ಉರುಳಿಸುವ ತಂತ್ರಜ್ಞಾನ (ಎಎಸ್‌ಎಟಿ) ಹೊಂದುವ ಬಗ್ಗೆ 2007ರಲ್ಲಿಯೇ ನಿರ್ಧರಿಸಲಾಗಿತ್ತು. ಆದರೆ ಅದನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಅನುಷ್ಠಾನ ಮಾಡುವ ಬಗ್ಗೆ ರಾಜಕೀಯ ಇಚ್ಛಾಶಕ್ತಿಯನ್ನೇ ಪ್ರದರ್ಶನ ಮಾಡಿರಲಿಲ್ಲ ಎಂದು ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ ಆರೋಪ ಮಾಡಿದ್ದಾರೆ. 2007ರಲ್ಲಿ ಚೀನ ತಾನು ಹೊಂದಿದ್ದ ಹಳೆಯ ಉಪಗ್ರಹವನ್ನು ಹೊಡೆದು ಉರುಳಿಸಿದ ವೇಳೆಯಲ್ಲಿಯೇ ನಮ್ಮ ಬಳಿಯೂ ಅದೇ ಮಾದರಿಯ ತಂತ್ರಜ್ಞಾನ ಹೊಂದುವ ಸಾಮರ್ಥ್ಯ ಇತ್ತು ಎಂದು ಹೇಳಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಇಂಥ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಛಾತಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ. 2018ರಲ್ಲಿ ನಾಯರ್‌ ಬಿಜೆಪಿ ಸೇರ್ಪಡೆಯಾಗಿದ್ದರು. ನಾಯರ್‌ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಡಿಆರ್‌ಡಿಒದ ನಿವೃತ್ತ ಮುಖ್ಯಸ್ಥ ವಿ.ಕೆ.ಸಾರಸ್ವತ್‌ ಹೇಳಿದ್ದಾರೆ. “ಯುಪಿಎ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಶಿವಶಂಕರ ಮೆನನ್‌ ಅವರಿಗೆ ಉಪಗ್ರಹ ಉಡಾಯಿಸುವ ಕ್ಷಿಪಣಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದೆವು. ಆಗಿನ ಸರ್ಕಾರ ಈ ಬಗ್ಗೆ ಮುಂದುವರಿಯಲು ಉತ್ಸಾಹ ತೋರಿಸಿರಲಿಲ್ಲ. ಹೀಗಾಗಿ ನಾವು ಆ ಯೋಜನೆಯಲ್ಲಿ ಮುಂದುವರಿಯಲಿಲ್ಲ’ ಎಂದು ಹೇಳಿದ್ದಾರೆ.

ಚೀನ ಎಚ್ಚರಿಕೆಯ ಪ್ರತಿಕ್ರಿಯೆ
ಭಾರತದ ಮಿಷನ್‌ ಶಕ್ತಿಯ ಬಗ್ಗೆ ನೆರೆಯ ರಾಷ್ಟ್ರವಾದ ಚೀನ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದೆ. “ಭಾರತವು ತನ್ನಲ್ಲಿ ಉಪಗ್ರಹ ನಿಗ್ರಹ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪ್ರಯೋಗಿಸಿರುವುದು ತಿಳಿದುಬಂದಿದೆ. ಇಂಥ ತಂತ್ರಜ್ಞಾನಗಳನ್ನು ಹೊಂದಿರುವ ದೇಶಗಳು ತಮ್ಮ ಬಾಹ್ಯಾಕಾಶದ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣವನ್ನು ಕಾಪಾಡುವಲ್ಲಿ ಬದ್ಧವಾಗಿರಲೆಂದು ಆಶಿಸುತ್ತೇವೆ’ ಎಂದು ಚೀನದ ವಿದೇಶಾಂಗ ಸಚಿವಾಲಯ, ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಪಾಕಿಸ್ಥಾನದ ಪರೋಕ್ಷ ಟೀಕೆ
ಭಾರತವು ಅಳವಡಿಸಿಕೊಂಡಿರುವ “ಮಿಷನ್‌ ಶಕ್ತಿ’ ತಂತ್ರಜ್ಞಾನವನ್ನು ಪಾಕಿಸ್ಥಾನ ಪರೋಕ್ಷವಾಗಿ ಟೀಕಿಸಿದೆ. ಭಾರತದ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ಥಾನದ ವಿದೇಶಾಂಗ ಸಚಿವಾಲಯ, “ಸಮಸ್ತ ಮನುಕುಲದ ಪಾರಂಪರಿಕ ಆಸ್ತಿಯಾಗಿರುವ ಬಾಹ್ಯಾಕಾಶವನ್ನು ಯಾವುದೇ ದೇಶ ತನ್ನ ರಣರಂಗವನ್ನಾಗಿ ಮಾರ್ಪಾಟು ಮಾಡಿಕೊಳ್ಳುವ ನಡೆಯನ್ನು ಹಿಮ್ಮೆಟ್ಟಿಸಲು ವಿಶ್ವದ ಎಲ್ಲಾ ರಾಷ್ಟ್ರಗಳೂ ಕೈ ಜೋಡಿಸಬೇಕು’ ಎಂದಿದೆ.

ರಾಷ್ಟ್ರೀಯ ಕಾಳಜಿ ಇಲ್ಲ
ಮಿಶನ್‌ ಶಕ್ತಿ ಬಗ್ಗೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸುತ್ತಿದ್ದು, ಇವುಗಳಿಗೆ ದೇಶದ ಭದ್ರತೆಯ ಬಗ್ಗೆ ಕಾಳಜಿ ಇಲ್ಲ ಎಂದು ವಿತ್ತ ಸಚಿವ ಅರುಣ್‌ ಜೇಟಿÉ ಹೇಳಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸ್ಯಾಟಲೈಟ್‌ ಹೊಡೆದುರುಳಿಸುವ ಕ್ಷಿಪಣಿಯನ್ನು ತಯಾರಿಸಲು ವಿಜ್ಞಾನಿಗಳಿಗೆ ಅನುಮತಿ ನೀಡಿರಲಿಲ್ಲ. ಭಾರತದ ವಿಜ್ಞಾನಿಗಳಿಗೆ ಈ ಸಾಮರ್ಥ್ಯ ಇಲ್ಲ ಎಂದು ಕಾಂಗ್ರೆಸ್‌ ಭಾವಿಸಿತ್ತು. ಅಷ್ಟೇ ಅಲ್ಲ, ಕಾಂಗ್ರೆಸ್‌ಗೆ ಈ ಬಗ್ಗೆ ಸ್ಪಷ್ಟತೆಯೂ ಇರಲಿಲ್ಲ ಎಂದು ಜೇಟ್ಲಿ ಟೀಕಿಸಿದ್ದಾರೆ. 2012ರಲ್ಲಿ ಅಗ್ನಿ ಕ್ಷಿಪಣಿಯನ್ನು ಉಡಾವಣೆ ಮಾಡಿದಾಗ, ಇನ್ನು ಭಾರತ ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿಯನ್ನು ನಿರ್ಮಿಸಬಹುದು ಎಂದು ಆಗಿನ ಡಿಆರ್‌ಡಿಒ ಮುಖ್ಯಸ್ಥ ವಿ.ಕೆ. ಸಾರಸ್ವತ್‌ ಹೇಳಿದ್ದರು ಎಂದು ಜೇಟ್ಲಿ ವಿವರಿಸಿದ್ದಾರೆ.

ರಾಜಕೀಯ ಪ್ರೇರಿತ: ಚುನಾವಣೆ ಸಂದರ್ಭದಲ್ಲಿಯೇ ಈ ಘೋಷಣೆ ಮಾಡಿದ ಪ್ರಧಾನಿ ಮೋದಿ ಕ್ರಮದ ಬಗ್ಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ವಿಚಾರದಲ್ಲಿ ನರೇಂದ್ರ ಮೋದಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಟಿಎಂಸಿ, ಸಿಪಿಎಂ, ಬಿಎಸ್‌ಪಿ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಪ್ರಧಾನಿ ಭಾಷಣ ಮುಕ್ತಾಯವಾಗುತ್ತಿದ್ದಂತೆ ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌, ಯುಪಿಎ ಸರ್ಕಾರವೇ ಈ ಯೋಜನೆಯನ್ನು ಆರಂಭಿಸಿತ್ತು. ಈಗ ಅದು ಫ‌ಲ ನೀಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ತನಿಖೆಗೆ ಆಯೋಗ ಸಮಿತಿ
ಪ್ರಧಾನಿ ನರೇಂದ್ರ ಮೋದಿ ಮಿಷನ್‌ ಶಕ್ತಿ ಕಾರ್ಯಾಚರಣೆಯ ಬಗ್ಗೆ ಪ್ರಧಾನಿ ಭಾಷಣದ ಪ್ರತಿಯನ್ನು ಪರಿಶೀಲಿಸಿ ತನಿಖೆಗೆ ಚುನಾವಣಾ ಆಯೋಗ ಸಮಿತಿ ರಚಿಸಿದೆ. ಚುನಾವಣೆಗೆ ಇನ್ನು ಕೆಲ ದಿನಗಳಷ್ಟೇ ಬಾಕಿಯಿರುವಾಗ ಪ್ರಧಾನಿ ಮೋದಿಯವರು ಈ ವಿಚಾರವನ್ನು ಪ್ರಕಟಿಸಿರುವ ಔಚಿತ್ಯದ ಬಗ್ಗೆ ವಿಪಕ್ಷಗಳು ಆಕ್ಷೇಪ ಎತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಈ ನಿರ್ಧಾರ ಕೈಗೊಂಡಿದ್ದಾರೆ. ಪ್ರಧಾನಿಯವರ ಭಾಷಣದ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಚುನಾವಣಾ ಆಯುಕ್ತರು, ಈ ಕುರಿತಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮೋದಿ ಭಾಷಣದ ಬೆನ್ನಲ್ಲೇ ಮಧ್ಯಾಹ್ನ ಎದ್ದ ಅಸಮಾಧಾನಗಳಿಗೆ ಉತ್ತರ ನೀಡಿದ್ದ ಆಯೋಗ, “ದೇಶದ ಭದ್ರತಾ ವ್ಯಾಪ್ತಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರಕಟಿಸಲು ಪ್ರಧಾನಿಗೆ ಚುನಾವಣಾ ಆಯೋಗದ ಅನುಮತಿ ಬೇಕಿರುವುದಿಲ್ಲ ಹಾಗೂ ಇಂಥ ವಿಚಾರಗಳು ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದಿತ್ತು.

ಹತ್ತು ಅಂಶಗಳಲ್ಲಿ ಪರೀಕ್ಷೆ ವಿವರ
1. ಏನಿದು ಪರೀಕ್ಷೆ?
ಕೆಳಹಂತದಲ್ಲಿ ಗಸ್ತು ತಿರುಗುವ ವಿದೇಶಿ ಉಪಗ್ರಹಗಳನ್ನು ನಾಶಗೊಳಿಸುವ ತಂತ್ರಜ್ಞಾನವನ್ನು ಭಾರತ, ಬುಧವಾರ ಅನಾವರಣಗೊಳಿಸಿದೆ. ಅಬ್ದುಲ್‌ ಕಲಾಂ ದ್ವೀಪದಲ್ಲಿನ ಉಡ್ಡಯನ ಕೇಂದ್ರದಿಂದ ಉಡಾಯಿಸಲ್ಪಟ್ಟ “ಮಿಷನ್‌ ಶಕ್ತಿ’ಯ ಕ್ಷಿಪಣಿ, 300 ಕಿ.ಮೀ. ದೂರದಲ್ಲಿ ಸುತ್ತುತ್ತಿದ್ದ ಭಾರತದ್ದೇ ಉಪಗ್ರಹವೊಂದನ್ನು ಧ್ವಂಸಗೊಳಿಸಿದೆ. ಕೇವಲ ಮೂರು ನಿಮಿಷಗಳಲ್ಲಿ ಈ ಮಹತ್ವದ ಕಾರ್ಯಾಚರಣೆ ಪೂರ್ಣಗೊಂಡಿರುವುದು ಗಮನಾರ್ಹ.

ಮಿಷನ್‌ ಶಕ್ತಿ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಗೊಳಿಸಲಾಗಿರುವ ತಂತ್ರಜ್ಞಾನವಾಗಿದ್ದು, ಭಾರತೀಯ ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಇಲಾಖೆಗೆ (ಡಿಆರ್‌ಡಿಒ) ಮತ್ತೂಂದು ಹೆಗ್ಗಳಿಕೆ ಬಂದಿದೆ. ಅಮೆರಿಕ, ರಷ್ಯಾ ಮತ್ತು ಚೀನ ದೇಶಗಳ ನಂತರ ಈ ರೀತಿಯ ತಂತ್ರಜ್ಞಾನವನ್ನು ಹೊಂದಿರುವ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

2. ಧ್ವಂಸಗೊಂಡ ಉಪಗ್ರಹ ಯಾವುದು?
ಪರೀಕ್ಷಾರ್ಥವಾಗಿ ಧ್ವಂಸಗೊಳಿಸಲಾದ ಉಪಗ್ರಹ ಭಾರತದ್ದೇ ಆದ ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿದ್ದ ಉಪಗ್ರಹ.

3. ಯಾವ ಕ್ಷಿಪಣಿ ಬಳಕೆ ?
ಬ್ಯಾಲಿಸ್ಟಿಕ್‌ ಮಿಸೈಲ್‌ ಡಿಫೆನ್ಸ್‌ ಇಂಟರ್‌ಸೆಪ್ಟರ್‌ ಮಾದರಿಯ ಕ್ಷಿಪಣಿಯನ್ನು ಈ ಪರೀಕ್ಷೆಗೆ ಬಳಸಲಾಗಿತ್ತು.

4. ಎ-ಸ್ಯಾಟ್‌ ಪರಿಕಲ್ಪನೆಯಡಿ “ಫ್ಲೈ ಬೈ ಟೆಸ್ಟ್‌’ ಹಾಗೂ “ಜ್ಯಾಮಿಂಗ್‌’ ಎಂಬ ಇನ್ನೆರಡು ತಂತ್ರಗಾರಿಕೆಗಳೂ ಇವೆ. ಆದರೆ, ಇವನ್ನು ಬಿಟ್ಟು “ಕೈನೆಟಿಕ್‌ ಕಿಲ್‌’ ಎಂಬ ತಂತ್ರಜ್ಞಾನವನ್ನೇ ಭಾರತ ಉಪಯೋಗಿಸಿದ್ದೇಕೆ?
ಕೈನೆಟಿಕ್‌ ಕಿಲ್‌ ತಂತ್ರಜ್ಞಾನ ದೇಶೀಯವಾಗಿ ಅಭಿವೃದ್ಧಿಗೊಳಿಸಿದ ತಂತ್ರಜ್ಞಾನ. ಈ ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ಯಶಸ್ವಿ ಸಾಧಿಸಿರುವುದು ಭಾರತದ ಹೆಗ್ಗಳಿಕೆ.

5. ಈಗ ನಾಶಗೊಂಡಿರುವ ಉಪಗ್ರಹದ ಭಗ್ನಾವಶೇಷಗಳು ಬಾಹ್ಯಾಕಾಶದಲ್ಲೇ ಉಳಿದುಕೊಳ್ಳುತ್ತವೆಯೇ?
ಈ ಉಪಗ್ರಹದ ಭಗ್ನಾವಶೇಷಗಳು ವಾರದ ನಂತರ ಭೂಮಿಗೆ ಬಂದು ಬೀಳುತ್ತವೆ.

6. ಭಾರತ ಈ ಪರೀಕ್ಷೆಯನ್ನು ಕೈಗೊಂಡಿದ್ದೇಕೆ?
ಕಳೆದ ಐದು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲಿ ಕ್ಷಿಪ್ರ ಅಭಿವೃದ್ಧಿಗಳಾಗಿವೆ. ಮಂಗಳಯಾನ ಯೋಜನೆಯಿಂದ ಮಂಗಳನಲ್ಲಿಗೆ ಮನುಷ್ಯರನ್ನು ಕೊಂಡೊಯ್ಯುವ ಮಹತ್ವದ ಯೋಜನೆಗಳವರೆಗೆ ಭಾರತ ತನ್ನ ಸಂಶೋಧನಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇಂಥ ಸಂದರ್ಭದಲ್ಲೇ ಭಾರತವು ತನ್ನ ವಾಯು ಮಂಡಲದ ವ್ಯಾಪ್ತಿಯ ಸುರಕ್ಷತೆಯ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಅನಿವಾರ್ಯವಿದ್ದಿದ್ದರಿಂದ ಈ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ.

7. ಈಗ ಇಂಥ ಪರೀಕ್ಷೆಯ ಅಗತ್ಯ ಇತ್ತೇ?
ಕೆಲವಾರು ವರ್ಷಗಳಿಂದ ಈ ತಂತ್ರಜ್ಞಾನವನ್ನು ಸಿದ್ಧಪಡಿಸಲಾಗುತ್ತಿತ್ತಾದರೂ, ತಂತ್ರಜ್ಞಾನದ ಯಶಸ್ಸಿನ ಬಗ್ಗೆ ಆತ್ಮವಿಶ್ವಾಸ ಮೂಡಿದ್ದು ಈಗಲೇ. ಹಾಗಾಗಿ, ವಿಜ್ಞಾನಿಗಳು ಅದನ್ನು ಈಗ ಪರೀಕ್ಷಿಸಿದ್ದಾರೆ. 2014ರಿಂದೀಚೆಗೆ ಕೇಂದ್ರ ಸರ್ಕಾರ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿರುವ ಕಾರಣದಿಂದಲೇ ಈ ಯೋಜನೆ ಕಾರ್ಯಸಾಧುವಾಗಿದೆ.

8. ಈ ಮೂಲಕ ಭಾರತವು, ಶಸ್ತ್ರಾಸ್ತ್ರ ಸಂಗ್ರಹದ ಉನ್ಮಾದತೆ ಹೊಂದಿರುವ ದೇಶಗಳ ಪಟ್ಟಿಗೆ ಸೇರಿದೆಯೇ?
ಹಾಗೇನಿಲ್ಲ. ಅಸಲಿಗೆ, ಭಾರತಕ್ಕೆ ಅಪಾರ, ಅತ್ಯಾಧುನಿಕಶಸ್ತ್ರಾಸ್ತ್ರ ಸಂಗ್ರಹಿಸುವ ಉನ್ಮಾದತೆ ಏನಿಲ್ಲ. ನಾವು ನಮ್ಮ ಬಾಹ್ಯಾಕಾಶವನ್ನು ಶಾಂತಿಯುವ ಪ್ರಯೋಗಗಳಿಗಾಗಿಯೇ ಬಳಸಲು ಉದ್ದೇಶ ಹೊಂದಿದ್ದೇವೆ. “ಔಟರ್‌ ಸ್ಪೇಸ್‌’ ಒಪ್ಪಂದಕ್ಕೆ ಭಾರತ ಬದ್ಧವಾಗಿದೆ. ಬಾಹ್ಯಾಕಾಶದ ಶಸ್ತ್ರೀಕರಣ ಪರಿಕಲ್ಪನೆಯನ್ನು ಭಾರತದ ವಿರೋಧವಿದೆ. ಹಾಗಾಗಿ, ಭಾರತ ಅಳವಡಿಸಿಕೊಂಡಿರುವ ಎ-ಸ್ಯಾಟ್‌ ತಂತ್ರಜ್ಞಾನವು ಕೇವಲ ಸ್ವಯಂ ರಕ್ಷಣೆಗಾಗಿ ಮಾತ್ರ.

9. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕಾನೂನು ಏನನ್ನು ಹೇಳುತ್ತದೆ?
1967ರಲ್ಲಿ ಜಾರಿಗೆ ಬಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಒಪ್ಪಂದವಾದ “ಔಟರ್‌ ಸ್ಪೇಸ್‌ ಟ್ರಿಟಿ’ಗೆ ಭಾರತವೂ ಸಹಿ ಹಾಕಿದೆ. 1982ರಿಂದ ಈ ಒಪ್ಪಂದವನ್ನು ಭಾರತ ಅಳವಡಿಸಿಕೊಂಡಿದೆ. ಸಮೂಹ ವಿನಾಶದ ಉದ್ದೇಶದಿಂದ ಬಾಹ್ಯಾಕಾಶ ಪ್ರವೇಶಿಸುವ ಗಗನನೌಕೆಗಳು, ಉಪಗ್ರಹಗಳನ್ನು ಮಾತ್ರ ಧ್ವಂಸ ಮಾಡಲು ಈ ಒಪ್ಪಂದದಲ್ಲಿ ಅವಕಾಶವಿದೆ. ಆದರೆ, ಸಾಮಾನ್ಯ ಶಸ್ತ್ರಾಸ್ತ್ರಗಳುಳ್ಳ ಆಕಾಶಕಾಯಗಳನ್ನು ಧ್ವಂಸ ಮಾಡಲು ಇಲ್ಲಿ ಅನುಮತಿಯಿಲ್ಲ. ಈಗ ಕೈಗೊಂಡಿರುವ ಕಾರ್ಯಾಚರಣೆಯಿಂದ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದದ ಉಲ್ಲಂಘನೆಯಾಗಿಲ್ಲ.

10. ಇದು ಯಾವುದೇ ದೇಶದ ವಿರುದ್ಧ ಮಾಡಲಾಗಿರುವ ಕಾರ್ಯಾಚರಣೆಯೇ?
ಇದು ಯಾವುದೇ ದೇಶದ ವಿರುದ್ಧ ಕೈಗೊಳ್ಳಲಾದ ಕಾರ್ಯಾಚರಣೆಯಲ್ಲ. ಇದು ಕೇವಲ ದೇಶೀಯ ಸುರಕ್ಷೆ ಮತ್ತು ವಿದೇಶಗಳಿಂದ ಬಾಹ್ಯಾಕಾಶದಲ್ಲಿ ಬರಬಹುದಾದ ತೊಂದರೆಗಳನ್ನು ಸಮರ್ಥವಾಗಿ ನಿಭಾಯಿಸಲು ಭಾರತ ಎಷ್ಟರಮಟ್ಟಿಗೆ ತಾಕತ್ತು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಕೈಗೊಳ್ಳಲಾದ ಪ್ರಾತ್ಯಕ್ಷಿಕೆಯಷ್ಟೆ.

ಉಪಗ್ರಹ ನಾಶ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಡಿ.ಆರ್‌.ಡಿ.ಒ. ವಿಜ್ಞಾನಿಗಳು ಮತ್ತೂಂದು ಜಾಣ್ಮೆಯ ಹೆಜ್ಜೆಯನ್ನಿಟ್ಟಿದ್ದಾರೆ. “ಮಿಷನ್‌ ಶಕ್ತಿ’ಯ ಈ ಯಶಸ್ಸು, ಭಾರತೀಯರಿಗೆ ಹೆಮ್ಮೆ ತಂದಿದೆ ಇದು ದೇಶದ ಭದ್ರತಗೆ ಸಹಾಯಕಾರಿ.
ಪ್ರಣಬ್‌ ಮುಖರ್ಜಿ, ಮಾಜಿ ರಾಷ್ಟ್ರಪತಿ

ಇದು ಭಾರತೀಯರಿಗೆ ಹೆಮ್ಮೆಯ ದಿನ. ಮಿಶನ್‌ ಶಕ್ತಿಯಲ್ಲಿ ಭಾಗವಹಿಸಿದ್ದ ಎಲ್ಲ ಡಿಆರ್‌ಡಿಒ ವಿಜ್ಞಾನಿಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ನನ್ನ ಅಭಿನಂದನೆಗಳು. ದೇಶದ ಹಿತಾಸಕ್ತಿ ಕಾಪಾಡಲು ಇದು ಮಹತ್ವದ್ದು.
ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಡಿಆರ್‌ಡಿಒ ಹಾಗೂ ಅದರ ವಿಜ್ಞಾನಿಗಳ ಸಾಧನೆಗೆ ಇಡೀ ದೇಶ ಹೆಮ್ಮೆ ಹೊಂದಿದೆ. ಈ ಸಾಧನೆಯ ಮೂಲಕ ವಿಶಿಷ್ಟ ಸಾಮರ್ಥ್ಯವನ್ನು ಗಳಿಸಿದ ಕೆಲವೇ ದೇಶಗಳ ಪೈಕಿ ಭಾರತವೂ ಒಂದಾಗಿದೆ. ಇದು ದೇಶದ ಅತ್ಯಂತ ಹೆಮ್ಮೆಯ ಸನ್ನಿವೇಶ.
ನಿತೀಶ್‌ ಕುಮಾರ್‌, ಬಿಹಾರ ಸಿಎಂ

ಸ್ವತಂತ್ರ ತಂತ್ರಜ್ಞಾನವನ್ನು ರೂಪಿಸಿದ ರಕ್ಷಣಾ ವಿಜ್ಞಾನಿಗಳಿಗೆ ಅಭಿನಂದ ನೆಗಳು. ಆದರೆ, ಇದನ್ನು ಪ್ರಧಾನಿ ಮೋದಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಲಿ.
ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮತ್ತೂಂದು ಹೆಜ್ಜೆಯನ್ನಿಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಇಂಥ ವ್ಯವಸ್ಥೆಯನ್ನು ರೂಪಿಸಿ ಯಶಸ್ಸು ಗಳಿಸುವುದು ಸಾಮಾನ್ಯವೇನಲ್ಲ.
ಕಸ್ತೂರಿ ರಂಗನ್‌, ವಿಜ್ಞಾನಿ

1958- ಅಮೆರಿಕದಿಂದ ಎಎಸ್‌ಎಟಿ ತಂತ್ರಜ್ಞಾನ ಮೊದಲ ಪರೀಕ್ಷೆ
1964, 2015- ರಷ್ಯಾದಿಂದ ಪರೀಕ್ಷೆ
2007 ಚೀನದಿಂದಲೂ ಇದೇ ಮಾದರಿ ಸಾಧನೆ
2010- ಡಿಆರ್‌ಡಿಒದಿಂದ ಉಪಗ್ರಹ ನಿರೋಧಕ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಘೋಷಣೆ

ಆ ಕ್ಷಣಗಳು.
ಬೆ.9 ಗಂಟೆ- ಭದ್ರತಾ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಭೆ
11.20 11.45 12 ರೊಳಗೆ ಭಾಷಣ ಮಾಡುವ ಬಗ್ಗೆ ಪಿಎಂ ಟ್ವೀಟ್‌
12.00 12.23  ಎಲ್ಲೆಲ್ಲೂ ಪ್ರಧಾನಿ ಮಾತಾಡುವ ಬಗ್ಗೆ ಚರ್ಚೆ
12.23 ಪ್ರಧಾನಿ ಭಾಷಣ ಶುರು
12.39  ಪ್ರಧಾನಿ ಮಾತು ಮುಕ್ತಾಯ

1,000 ಪಿಎಂ ಟ್ವೀಟ್‌ಗೆ ಪ್ರತಿ ನಿಮಿಷಕ್ಕೆ ಇಷ್ಟು ಲೈಕ್‌ಗಳು
20,663 ರಿಟ್ವೀಟ್‌ಗಳು
57,674 ಲೈಕ್‌ಗಳು
15,000 ಕಮೆಂಟ್‌ಗಳು

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.