ಮುಂಬೈ to ಕಾಶ್ಮೀರ್; ಅಪ್ಪನನ್ನು ನೋಡಲು ಸೈಕಲ್ ನಲ್ಲಿ ಹೊರಟ ಆರಿಫ್ ಗೆ ಸೇನಾ ಸಹಾಯ!
Team Udayavani, Apr 6, 2020, 6:02 AM IST
ಶ್ರೀನಗರ: ಅಪ್ಪ ಕಾಶ್ಮೀರದಲ್ಲಿ ಹಾಸಿಗೆ ಹಿಡಿದು, ಜೀವನ್ಮರಣದೊಂದಿಗೆ ಹೋರಾಡುತ್ತಿದ್ದಾನೆ. ಆತನನ್ನು ನೋಡಲು ಮುಂಬೈನಿಂದ ಸೈಕಲ್ ತುಳಿದು ಹೊರಟ ಮಗ 4 ದಿನಗಳ ಬಳಿಕ ಕೊನೆಗೂ ಅಪ್ಪನ ಮುಖ ನೋಡುವಂತಾಯಿತು. ಇದು ಮುಂಬೈನ ಸೆಕ್ಯೂರಿಟಿ ಗಾರ್ಡ್ ಮೊಹಮ್ಮದ್ ಆರೀಫ್ ನ ವ್ಯಥೆಯ ಕಥೆ.
ಮೊನ್ನೆ ಗುರುವಾರದಂದು ಆರಿಫ್ ಗೆ ಬಂದ ಆ ಒಂದು ಕರೆ ಆತನನ್ನು ದಿಗ್ಭ್ರಾಂತಿಗೊಳಿಸಿದೆ. ರಜೌರಿಯಲ್ಲಿರುವ ತನ್ನ ಸ್ವಂತ ಮನೆಯಲ್ಲಿದ್ದ ಅಪ್ಪ ಇದ್ದಕ್ಕಿದ್ದಂತೆ ಪಾರ್ಶ್ವವಾಯುಪೀಡಿತರಾಗಿದ್ದಾರೆ. ಮುಂದಿನ ಕೆಲ ಗಂಟೆಗಳವರೆಗೆ ಆರಿಫ್ ತನ್ನ ಗೆಳೆಯರಿಗೆ, ಮನೆ ಪಕ್ಕದವರಿಗೆ ಕರೆಗಳ ಮೇಲೆ ಕರೆಗಳನ್ನು ಮಾಡಿ ತನ್ನ ತಂದೆಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ಯಾರಿಗೂ ರಫೀಕ್ ಮನೆಗೆ ಸಕಾಲದಲ್ಲಿ ತಲುಪಲಾಗಿರಲೇ ಇಲ್ಲ.
ಆದರೆ ಬಳಿಕ ಸಾಯಂಕಾಲದ ಸಮಯದಲ್ಲಿ ರಫೀಕ್ ನ ಸ್ನೇಹಿತರಲ್ಲಿ ಒಬ್ಬರಿಗೆ ಆತನ ಮನೆಗೆ ತಲುಪಿ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗಿದೆ. ಇತ್ತ ಅನಾರೋಗ್ಯಪೀಡಿತ ತನ್ನ ತಂದೆಯನ್ನು ಕಾಣಲೇಬೇಕೆಂದು ಹಂಬಲಿಸಿ ರಫೀಕ್ ಸುಮಾರು 2 ಸಾವಿರ ಕಿಲೋಮೀಟರ್ ದೂರದ ಅಸಾಧ್ಯ ಸೈಕಲ್ ಪ್ರಯಾಣವನ್ನು ಕೈಗೊಂಡಿದ್ದ.
ಆರೀಫ್ ಸೈಕಲ್ ಹೊಡೆಯುತ್ತಾ ಗುಜರಾತ್ ತಲುಪುತ್ತಿದ್ದಂತೆಯೇ, ಅಲ್ಲಿನ ಪೊಲೀಸರು ಈತನ ಸ್ಥಿತಿ ತಿಳಿದು, ನೆರವಾಗಿದ್ದಾರೆ. ಕಾಶ್ಮೀರದೆಡೆಗೆ ಹೋಗುವ ಸೇನಾ ಟ್ರಕ್‌ನಲ್ಲಿ ಆತನಿಗೆ ತೆರಳಲು ವ್ಯವಸ್ಥೆ ಮಾಡಿ, ಅಗತ್ಯ ಆಹಾರದ ಪೊಟ್ಟಣಗಳನ್ನು ನೀಡಿ, ಮಾನವೀಯತೆ ಮೆರೆದಿದ್ದಾರೆ. ಆರೀಫ್ ನ ಮನೆ ಇರುವುದು, ಶ್ರೀನಗರದಿಂದ 155 ಕಿ.ಮೀ. ದೂರದ ರಾಜೌಲಿಯಲ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.