ಈ ಲೆಕ್ಕಕ್ಕೆ ಟ್ವಿಟರ್ ಲೋಕ ಇಬ್ಭಾಗ
Team Udayavani, Aug 2, 2019, 5:42 AM IST
ನವದೆಹಲಿ: ಟ್ವಿಟರ್‌ನ ಖಾತೆದಾರರೊಬ್ಬರು ನೀಡಿದ ಒಂದು ಸರಳ ಲೆಕ್ಕದ ಪಂಥವೊಂದು ಟ್ವಿಟರ್ ಬಳಕೆದಾರರ ನಡುವೆ ಜಗಳ ತಂದಿಟ್ಟು ಅವರನ್ನು ಇಬ್ಭಾಗವಾಗಿಸಿದ ಕುತೂಹಲಕಾರಿ ಘಟನೆ ಗುರುವಾರ ನಡೆದಿದೆ.
8/2 (2+2) ಎಂಬ ಸಮೀಕರಣವೊಂದನ್ನು ಕೊಟ್ಟಿದ್ದ ಆ ವ್ಯಕ್ತಿ ಇದನ್ನು ಸರಳೀಕರಣಗೊಳಿಸಬೇಕು. ಇದರ ಉತ್ತರ 16 ಅಥವಾ 1, ಇವುಗಳಲ್ಲೊಂದು ಆಗಿರಬೇಕು ಎಂದು ಹೇಳಿದ್ದರು.
ಸಾಮಾನ್ಯವಾದ, ಹೈಸ್ಕೂಲು ಮಾದರಿಯ ಗಣಿತದ ನಿಯಮಗಳ ಪ್ರಕಾರ, ಇದನ್ನು ಸರಳೀಕರಿಸಿದರೆ 1 ಎಂಬ ಉತ್ತರ ಬರುತ್ತದೆ. ಅನೇಕರು ಈ ಉತ್ತರವೇ ಸರಿ ಎಂದರು. ಆದರೆ, ಮತ್ತೂಂದು ಗುಂಪು ’16’ ಸರಿ ಉತ್ತರ ಎಂದರು. ಇದರಿಂದ ಸಿಟ್ಟಿಗೆದ್ದ 1 ಉತ್ತರ ‘ವಾದಿ’ಗಳು, ’16’ ಸರಿ ಉತ್ತರ ಎನ್ನುವವರು ಮತ್ತೆ ಗಣಿತ ಕಲಿಯಿರಿ ಎಂದು ಟಾಂಗ್ ಕೊಟ್ಟರೆ, ಅತ್ತ, ’16’ ಉತ್ತರವೇ ಸರಿ ಎನ್ನುವವರು ‘1 ಉತ್ತರ ಸರಿ ಎನ್ನುವವರು ಪುನಃ ಶಾಲೆಗೆ ಸೇರಿರಿ’ ಎಂದು ಟೀಕಿಸಿದರು. ಆದರೆ, ಗಣಿತ ಲೋಕದ ಪ್ರಕಾರ, ಈ ಎರಡೂ ಉತ್ತರಗಳೂ ಸರಿ. ಸಾಮಾನ್ಯ ಗಣಿತದ ನಿಯಮಗಳ ಮೂಲಕ ಇದನ್ನು ಸರಳೀಕರಿಸಿದರೆ 1 ಅಂಕಿ ಬರುತ್ತದೆ. ಆದರೆ, ಬೋಡ್ಮಾಸ್ (BODMAS) ನಿಯಮದ ಮೂಲಕ ಸರಳೀಕರಿಸಿದರೆ 16 ಉತ್ತರ ಬರುತ್ತದೆ ಎಂದು ಕೆಲವು ಅಂತರ್ಜಾಲ ವಾಹಿನಿಗಳು ಉತ್ತರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.