ಈ ಅಜ್ಜಿಗೆ 96ನೇ ವಯಸ್ಸಲ್ಲಿ 98 ಅಂಕ
Team Udayavani, Nov 2, 2018, 7:40 AM IST
ತಿರುವನಂತಪುರ: ಕೇರಳದ ಅಲಪ್ಪುಳ ಜಿಲ್ಲೆಯ ಕಾತ್ಯಾಯಿನಿ ಅಮ್ಮರಿಗೆ (96) ಈಗ ಸಂತೋಷವೋ ಸಂತೋಷ. ಅದಕ್ಕೆ ಕಾರಣವಿದೆ. ಕೆಲ ತಿಂಗಳುಗಳ ಹಿಂದೆ ಸಾಕ್ಷರತಾ ಆಂದೋಲನ ಸಮಿತಿ ನಾಲ್ಕನೇ ತರಗತಿಗಾಗಿನ ಪರೀಕ್ಷೆ ನಡೆಸಿತ್ತು. ಅದರ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ 100ರಲ್ಲಿ 98 ಅಂಕಗಳನ್ನು ಗಳಿಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರು ಪರೀಕ್ಷೆ ಬರೆಯುವ ಫೋಟೋಗಳು ದೇವರೊಲಿದ ರಾಜ್ಯದ ಮಾಧ್ಯಮಗಳಲ್ಲಿ ಪ್ರಮುಖವಾಗಿ ಪ್ರಕಟವಾಗಿತ್ತು. ‘ಅಕ್ಷರಲಕ್ಷಂ’ ಎಂಬ ಸಾಕ್ಷರತಾ ಸಮಿತಿ ಆಯೋಜಿಸಿರುವ ಪರೀಕ್ಷೆಯಲ್ಲಿ 43,330 ಮಂದಿಯ ಪೈಕಿ 42,930 ಮಂದಿ ಉತ್ತೀರ್ಣರಾಗಿದ್ದಾರೆ. ಅಷ್ಟೂ ಮಂದಿಯಲ್ಲಿ ಅತ್ಯಂತ ಹಿರಿಯವರು ಎಂದರೆ ಕಾರಿಗೆಯಿನಿ ಅಮ್ಮ. ಗುರುವಾರ ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಆತ್ಮೀಯವಾಗಿ ಸಮ್ಮಾನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Putin: ರಷ್ಯಾ ಅಧ್ಯಕ್ಷ ಪುಟಿನ್ ಮುಂದಿನ ವರ್ಷ ಭಾರತಕ್ಕೆ ಭೇಟಿ ಸಾಧ್ಯತೆ
G20: ಭಾರತ, ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಮಾತುಕತೆ ಪುನಾರಂಭ!
Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.