ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ
Team Udayavani, Apr 22, 2021, 6:24 PM IST
ಮುಂಬೈ : ಮುಂಬೈನ ನಿವಾಸಿ ಶೆಹನಾಜ್ ಶೇಖ್ ಎಂಬವರು ರೋಗಿಗಳಿಗೆ ಕೃತಕ ಆಮ್ಲಜನಕ ಪೂರೈಕೆಯ ವ್ಯವಸ್ಥೆ ಮಾಡ್ತಿದ್ದಾರೆ. ಇದಕ್ಕಾಗಿ ತನ್ನ ನೆಚ್ಚಿನ ದುಬಾರಿ ಕಾರು ಮಾರಾಟ ಮಾಡಿದ್ದಾರೆ.
ʼಆಕ್ಸಿಜನ್ ಮ್ಯಾನ್ʼ ಎಂಬ ಬಿರುದು ಪಡೆದಿರುವ ಶೆಹನಾಜ್, ಸಂಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ ಮಾಡಬೇಕು ಅಂತಾ ತಮ್ಮ 22 ಲಕ್ಷದ ಎಸ್ಯುವಿ ಕಾರನ್ನ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾರಾಟ ಮಾಡಿದ್ದಾರೆ. ಈ ಹಣದಿಂದ 160 ಆಮ್ಲಜನಕ ಸಿಲಿಂಡರ್ಗಳನ್ನ ಖರೀದಿಸಿದ್ದಾರೆ.
ಪತ್ನಿ ಸಾವು :
ಶೆಹನಾಜ್ ಅವರ ಈ ಸಾಮಾಜಿಕ ಕಳಕಳಿಯ ಹಿಂದೆ ಕಣ್ಣೀರಿನ ಕಹಾನಿ ಇದೆ. ಕಳೆದ ವರ್ಷ ಶೆಹನಾಜ್ ಪತ್ನಿ ಆಮ್ಲಜನಕದ ಕೊರತೆಯಿಂದಾಗಿ ಆಟೋರಿಕ್ಷಾದಲ್ಲೇ ಪ್ರಾಣವನ್ನ ಬಿಟ್ಟಿದ್ದರು. ಈ ಘಟನೆ ಬಳಿಕ ಜೀವದ ಮಹತ್ವವನ್ನ ಅರಿತ ಶೆಹನಾಜ್ ಮುಂಬೈನಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಕೆ ಕಾರ್ಯವನ್ನ ಮಾಡ್ತಿದ್ದಾರೆ.
ಸಹಾಯವಾಣಿ :
ಸದ್ಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟವಾಗಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್ ಪ್ರಕಣಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಅಗತ್ಯ ಇರುವವರಿಗೆ ಆಕ್ಸಿಜನ್ ಪೂರೈಸುವ ನಿಟ್ಟಿನಲ್ಲಿ ಶೆಹನಾಜ್ ಸಹಾಯವಾಣಿ ಸಂಖ್ಯೆ ಹಾಗೂ ಕಂಟ್ರೋಲ್ ರೂಮ್ನ್ನೂ ತೆರೆದಿದ್ದಾರೆ.
ಹಣಕಾಸಿನ ಸಮಸ್ಯೆ:
ಕೋವಿಡ್ ಸಮಯದಲ್ಲಿ ಪರೋಪಕಾರಿ ಕೆಲಸಕ್ಕೆ ಕೈ ಹಾಕಿದ ಶೆಹನಾಜ್ ಅವರ ಬಳಿ ಇದ್ದ ಹಣ ಖಾಲಿ ಆಗಿದೆಯಂತೆ. ಇದೇ ಕಾರಣಕ್ಕೆ ಅವರು ತಮ್ಮ ಕಾರು ಮಾರಿ, ಹಣ ಹೊಂದಿಸಿ ಆಕ್ಸಿಜನ್ ಖರೀದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.