ತೂತುಕುಡಿ ವೇದಾಂತ ಘಟಕದಲ್ಲಿ ಆ್ಯಸಿಡ್ ಸೋರಿಕೆ
Team Udayavani, Jun 21, 2018, 6:00 AM IST
ತೂತುಕುಡಿ: ತಮಿಳುನಾಡಿನ ತೂತ್ತುಕುಡಿಯಲ್ಲಿ ಇತ್ತೀಚೆಗೆ ತೀವ್ರ ಹಿಂಸಾತ್ಮಕ ಪ್ರತಿಭಟನೆಯನ್ನು ಎದುರಿಸಿದ ವೇದಾಂತ ಸಂಸ್ಥೆಯ ಸ್ಟೀಲ್ ಘಟಕದಲ್ಲಿ ಆಸಿಡ್ ಸೋರಿಕೆ ಉಂಟಾಗಿದೆ. ಈ ಸಂಬಂಧ ಮದ್ರಾಸ್ ಹೈಕೋಟ್ಗೆ ವೇದಾಂತ ಸಂಸ್ಥೆ ದಾವೆ ಸಲ್ಲಿಸಿದ್ದು, ಸನ್ನಿವೇಶವನ್ನು ನಿಯಂತ್ರಿಸಲು ವಿದ್ಯುತ್ ಮರುಸಂಪರ್ಕಗೊಳಿಸಬೇಕು ಎಂದು ಕೋರಿದೆ. ಆದರೆ ಸೋರಿಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ತೂತುಕುಡಿ ಜಿಲ್ಲಾಡಳಿತ ಹೇಳಿದೆ.
ಕೆಲವು ದಿನಗಳ ಹಿಂದಷ್ಟೇ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದು, ಪೊಲೀಸರ ಗುಂಡೇಟಿನಿಂದ 13 ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸ್ಟೀಲ್ ಘಟಕಕ್ಕೆ ವಿದ್ಯುತ್ ಸಂಪರ್ಕವನ್ನು ತೂತ್ತುಕುಡಿ ಸ್ಥಳೀಯಾಡಳಿತ ಕಡಿತಗೊಳಿಸಿತ್ತು. ಸ್ಟೊರೇಜ್ ಟ್ಯಾಂಕ್ನ ಸುತ್ತ ಆಸಿಡ್ ಹರಿದಿದೆ. ಇದರಿಂದ ಇತರ ಟ್ಯಾಂಕ್ಗಳೂ ಕೂಡ ಸೋರಿಕೆಯಾಗುವ ಅಪಾಯವಿದೆ. ಇಲ್ಲಿ ಅಪಾಯಕಾರಿ ಮತ್ತು ದಹನಕಾರಿ ಆ್ಯಸಿಡ್ಗಳಿವೆ ಎಂದು ಹೈಕೋರ್ಟ್ಗೆ ಸಲ್ಲಿಸಿದ ದಾವೆಯಲ್ಲಿ ವೇದಾಂತ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway; 2 ವರ್ಷದಲ್ಲಿ 50 ಅಮೃತ್ ಭಾರತ ರೈಲು ಉತ್ಪಾದನೆ: ಅಶ್ವಿನಿ ವೈಷ್ಣವ್
Cardiac arrest: ಗುಜರಾತ್ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು
Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Industrial production ಕಳೆದ ನವೆಂಬರ್ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.