ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ಥಾನೀಯರು: ಬಿಜೆಪಿ ಶಾಸಕ
Team Udayavani, Feb 26, 2018, 11:39 AM IST
ಹೊಸದಿಲ್ಲಿ : “ಭಾರತ್ ಮಾತಾ ಕೀ ಜೈ ಎಂದು ಹೇಳದವರನ್ನು ಭಾರತೀಯರೆಂದು ಒಪ್ಪಲು ನಾನು ತಯಾರಿಲ್ಲ” ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಇನ್ನೊಮ್ಮೆ ವಿವಾದವನ್ನು ಸೃಷ್ಟಿಸಿದ್ದಾರೆ.
“ಭಾರತ್ ಮಾತಾ ಕೀ ಜೈ ಎಂದು ಹೇಳಲು ಸಂಕೋಚಿಸುವವರನ್ನು ನಾನು ಪಾಕಿಸ್ಥಾನೀಯರೆಂದು ಕರೆಯುತ್ತೇನೆ” ಎಂದು ಬೈರಿಯಾ ಶಾಸಕ ಸುರೇಂದ್ರ ಸಿಂಗ್ ಹೇಳುವ ವಿಡಿಯೋ ಈಗ ವೈರಲ್ ಆಗಿದೆ. ಅವರು ಈ ವಿವಾದಿತ ಹೇಳಿಕೆಯನ್ನು ನಿನ್ನೆ ಭಾನುವಾರ ಮಾಡಿದರು.
ಇದೇ ಶಾಸಕ ಸುರೇಂದ್ರ ಸಿಂಗ್ ವರು ಈ ವರ್ಷ ಜನವರಿಯಲ್ಲಿ “ಭಾರತವು 2024ರೊಳಗೆ ಹಿಂದೂ ರಾಷ್ಟ್ರವಾಗುತ್ತದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
“ಮುಸ್ಲಿಮರಲ್ಲಿ ಕೆಲವೇ ಕೆಲವರು ಮಾತ್ರವೇ ದೇಶಪ್ರೇಮಿಗಳು. ಭಾರತವು ಹಿಂದೂ ರಾಷ್ಟ್ರವಾದಾಗ ಭಾರತೀಯ ಸಂಸ್ಕೃತಿಯೊಂದಿಗೆ ಸಮ್ಮಿಳಿತಗೊಳ್ಳುವವರು ಮಾತ್ರವೇ ಭಾರತದಲ್ಲಿ ಉಳಿಯುತ್ತಾರೆ. ಹಾಗೆ ಸಮ್ಮಿಳಿತರಾಗದವರು ಬೇರೆ ಯಾವುದೇ ದೇಶಕ್ಕೆ ಹೋಗಲು ಸ್ವತಂತ್ರರಿರುತ್ತಾರೆ’ ಎಂದು ಬೈರಿಯಾ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದರು.
#WATCH Ballia: Bairia BJP MLA Surendra Singh said’ aise logon ko Pakistani kehta hun jo Bharat Mata ki jai bolne se katrate hain’ (25.02.18) pic.twitter.com/lZX3D3MIZ2
— ANI UP (@ANINewsUP) February 26, 2018
ಸಿಂಗ್ ಅವರು ಮುಂದುವರಿದು “ಪ್ರಧಾನಿ ನರೇಂದ್ರ ಮೋದಿ ಅವರು ಓರ್ವ ಅವತಾರೀ ಪುರುಷ’ ಎಂದು ವರ್ಣಿಸಿದ್ದರು.
“ರಾಹುಲ್ ಗಾಂಧಿಯವರಲ್ಲಿ ಎರಡು ರೀತಿಯ ಮೌಲ್ಯಗಳಿವೆ : ಒಂದು ಇಟಾಲಿಯನ್ ಮೌಲ್ಯ; ಇನ್ನೊಂದು ಭಾರತೀಯ ಮೌಲ್ಯ. ಆದುದರಿಂದ ಅವರು ಎಂದೂ ಭಾರತೀಯ ಚಿಂತನೆಗಳ ಜ್ಯೋತಿಯನ್ನು ಕೊಂಡೊಯ್ಯಲಾರರು’ ಎಂದು ಸಿಂಗ್ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.