ದೇಗುಲಕ್ಕೆ ಹೋದವರು ಇನ್ನೂ ಮನೆಗೆ ಬಂದಿಲ್ಲ!
Team Udayavani, Jan 11, 2019, 12:30 AM IST
ತಿರುವನಂತಪುರ/ಕೊಚ್ಚಿ: ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಜ.2ರಂದು ಮೊದಲ ಬಾರಿಗೆ ಪ್ರವೇಶಿಸಿದ್ದ ಬಿಂದು ಅಮ್ಮಿಣಿ (40) ಹಾಗೂ ಕನಕದುರ್ಗಾ (39) ಜೀವ ಬೆದರಿಕೆಗಳು ಇರುವುದರಿಂದ ಅವರಿನ್ನೂ ತಮ್ಮ ಮನೆಗಳಿಗೆ ಹಿಂದಿರುಗಲು ಸಾಧ್ಯವಾಗಿಲ್ಲ. ಹಾಗಾಗಿ, ಅವರು ಅಜ್ಞಾತ ಸ್ಥಳಗಳಲ್ಲಿಯೇ ಅವಿತಿದ್ದಾರೆ. ಕಳೆದ ವರ್ಷ, ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡ ಎಬಹುದೆಂದು ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ, ಜ. 2ರಂದು ಅಮ್ಮಿಣಿ ಹಾಗೂ ಕನಕದುರ್ಗಾ ಅವರು ದೇಗುಲ ಪ್ರವೇಶಿಸಿದ್ದರು. ಅಜ್ಞಾತ ಸ್ಥಳದಿಂದಲೇ ಮಾಧ್ಯಮವೊಂದರ ಜತೆ ಮಾತನಾಡಿರುವ ಬಿಂದು, “”ದೇಗುಲ ಪ್ರವೇಶಿಸುವಾಗಲೂ ವಿರೋಧವಿದ್ದರೂ, ಆ ಬಗ್ಗೆ ದೃಢ ನಿಶ್ಚಯ ಹೊಂದಿದ್ದೆವು. ಎಲ್ಲಾ ಪ್ರತಿಭಟನೆಗಳನ್ನು ಬಿಜೆಪಿಯೇ ನಿಯಂತ್ರಿಸುತ್ತಿದೆ” ಎಂದಿದ್ದಾರೆ.
ಜಾಮೀನು ನಕಾರ: ಮಹಿಳೆಯರ ವಿರುದ್ಧ ಕೀಳು ಹೇಳಿಕೆ ನೀಡಿರುವ ಆರೋಪ ಹೊತ್ತಿರುವ ಮಲಯಾಳಂ ನಟ ಕೊಲ್ಲಂ ತುಳಸಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.
ಯಾತ್ರಾರ್ಥಿ ಸಾವು: ಶಬರಿಮಲೆ ಯಾತ್ರಿಕರೊಡನೆ ಎರುಮಲೆಯಿಂದ ಪಂಪಾಗೆ ಅರಣ್ಯ ಮಾರ್ಗವಾಗಿ ತೆರಳುತ್ತಿದ್ದ ಪರಮಶಿವಂ (35) ಎಂಬ ಯುವಕನೊಬ್ಬ ಕಾಡಾನೆಯ ತುಳಿತಕ್ಕೆ ಬಲಿಯಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಟ್ಟಾಯಂ ಪ್ರಾಂತ್ಯದಲ್ಲಿ ನಡೆದಿದೆ. ತಮಿಳುನಾಡಿನ ಸೇಲಂನಿಂದ ತನ್ನ 7 ವರ್ಷದ ಮಗನೊಂದಿಗೆ ಶಬರಿಮಲೆ ಯಾತ್ರೆಗಾಗಿ ಈತ ಬಂದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.