ಮತ ಹಾಕಲಿದ್ದಾರೆ ಶತಾಯುಷಿಗಳು
Team Udayavani, Nov 22, 2017, 6:05 AM IST
ಅಹ್ಮದಾಬಾದ್: ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಅಹ್ಮದಾಬಾದ್ ನಗರ ಮತ್ತು ಜಿಲ್ಲೆಯ ಮತದಾರರ ಪೈಕಿ ಕುತೂಹಲಕಾರಿ ಅಂಶವೊಂದಿದೆ. 90 ಮತ್ತು 100ರ ನಡುವಿನ ವಯೋಮಾನದ 7,181 ಮಂದಿ ಮತದಾರರಿದ್ದಾರೆ.
ಗುಜರಾತ್ ಮಾಹಿತಿ ಕೇಂದ್ರದ ಅಂಕೆ-ಸಂಖ್ಯೆಗಳ ಪ್ರಕಾರ ಅಹ್ಮದಾಬಾದ್‌ನಲ್ಲಿಯೇ 660 ಮಂದಿ ಶತಾಯುಷಿಗಳು ಡಿ. 14 ರಂದು ಹಕ್ಕು ಚಲಾಯಿಸಲಿದ್ದಾರೆ. ಇನ್ನು 90-100 ವರ್ಷ ವಯಸ್ಸಿನವರು ಜಿಲ್ಲೆಯಲ್ಲಿ 7,181 ಮಂದಿ ಇದ್ದಾರೆ. “1977ರಲ್ಲಿ ಪತಿ ನಿಧನ ಹೊಂದಿದರು. ಅದರ ಮಾರನೇ ದಿನ ಮತದಾನ ವಿತ್ತು. ಕುಟುಂಬದಲ್ಲಿ ದುಃಖದ ವಾತಾವರಣ ಇದ್ದರೂ ಹಕ್ಕು ಚಲಾವಣೆಗಾಗಿ ತೆರಳಿದ್ದೆ’ ಎಂದು ಶತಾಯುಷಿ ಮಹಿಳೆ ಉಮಿಯಾ ಬೆನ್ ಹೇಳುತ್ತಾರೆ. ಅಹ್ಮದಾಬಾದ್ ಜಿಲ್ಲೆಯಲ್ಲಿ 21 ಕ್ಷೇತ್ರಗಳಿದ್ದು, ಈ ಪೈಕಿ ಶತಾಯುಷಿಗಳು ಅತಿ ಹೆಚ್ಚು ಇರುವ ಕ್ಷೇತ್ರ ವಿರಾಮ್‌ಗಮ್ (35). ಸಾನಂದ್‌ನಲ್ಲಿ 29, ಘಾಟೊÉàಡಿಯಾ 23, ನಾರನ್‌ಪುರ 42 ಮತ್ತು ವೆಜಾಲ್ಪುರ್‌ನಲ್ಲಿ 27 ಮಂದಿ ಇದ್ದಾರೆ.
ಐವರ ಬದಲು: ಈ ನಡುವೆ ಕಾಂಗ್ರೆಸ್ 2 ಪಟ್ಟಿ ಸೇರಿಸಿ 90 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಐದು ಸ್ಥಾನಗಳಿಗೆ ಬದಲಾವಣೆ ತಂದಿದೆ. ಇದೊಂದು ವ್ಯೂಹಾತ್ಮಕ ಬದಲಾವಣೆ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿನ್ಹ ಸೋಲಂಕಿ ಹೇಳಿದ್ದಾರೆ.
ಹೋರಾಟ: ಈ ನಡುವೆ ಭಾವಾನಗರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜ್ಯ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ನ ಜಾತಿ ಮತ್ತು ವಂಶ ಪಾರಂಪರ್ಯ ರಾಜಕಾರಣದ ವಿರುದ್ಧ ಹೋರಾಟ ಎಂದಿದ್ದಾರೆ. ಗುಜರಾತ್ ಅನ್ನು ಪ್ರವಾಸಿ ಸ್ಥಳ ಎಂದು ಭಾವಿಸಿ ರಾಹುಲ್ ಗಾಂಧಿ ಪದೇ ಪದೆ ಭೇಟಿ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ ಶಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.