ಸಮಾಜದಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಹೀಗೆ ಮುಂದುವರಿದರೆ 3ನೇ ಮಹಾಯುದ್ದ ನಡೆಯಬಹುದು: ಭಾಗವತ್
Team Udayavani, Feb 16, 2020, 10:45 AM IST
ಅಹಮದಾಬಾದ್: ಸಮಾಜದಲ್ಲಿ ಹೆಚ್ಚುತ್ತಿರುವ ‘ಹಿಂಸಾಚಾರ ಮತ್ತು ಅಸಮಾಧಾನ’ದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೂರನೇ ಮಹಾಯುದ್ಧದ ಭೀತಿ ಹೆಚ್ಚುತ್ತಿದೆ ಎಂದು ಹೇಳಿದರು.
ಈಗಾಗಲೇ ಎರಡು ವಿಶ್ವ ಯುದ್ಧಗಳು ನಡೆದಿದ್ದು ಮತ್ತು ಮೂರನೆಯ ಯುದ್ಧ ನಡೆಯುವ ಕುರಿತು ಬೆದರಿಕೆಗಳು ಹೆಚ್ಚಾಗುತ್ತಿದೆ. ಮೂರನೇ ಯುದ್ದಧ ಹಿಂದೆ ಹಿಂಸೆ ಮತ್ತು ಅಸಮಾಧಾನವಿದೆ. ಮಾಲೀಕರು, ಕಾರ್ಮಿಕರು, ಸರ್ಕಾರ, ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು, ಎಲ್ಲರೂ ಆಂದೋಲನ ನಡೆಸುತ್ತಿದ್ದಾರೆ ಎಂದು ಭಾಗವತ್ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಸಮಾಜದಲ್ಲಿ ಯಾರೂ ಕೂಡ ಸಂತುಷ್ಟರಾಗಿಲ್ಲ. ಮಾಲಿಕರು ಮತ್ತು ಕಾರ್ಮಿಕರು, ಉದ್ಯೋಗದಾತರು ಮತ್ತು ಉದ್ಯೋಗಿಗಳು, ಸರ್ಕಾರ ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ.
ನಾವೀಗ ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ನೆಲೆಸಿದ್ದೇವೆ. ದಶಕದ ಹಿಂದೆ ಸಿಗದ ಸೌಲಭ್ಯಗಳೆಲ್ಲಾ ಈಗ ಸಿಗುತ್ತಿವೆ. ಆದರೂ ಆಂದೋಲನಗಳು ನಡೆಯುತ್ತಿವೆ. ಹೀಗಾದರೇ ಮುಂದಿನ 100 ವರ್ಷಗಳಲ್ಲಿ ಆಗುವ ಬದಲಾವಣೆಗಳನ್ನು ಊಹಿಸಲು ಸಾಧ್ಯವಾಗದು. ಪಾಣಿಪತ್ ಕದನದಲ್ಲಿ ಏನಾಯಿತು ? ಮರಾಠರು ಗೆಲುವನ್ನು ಪಡೆದರೆ ಅಥವಾ ಸೋಲನುಭವಿಸಿದರೆ ? ಈ ಸುದ್ದಿ ಪೂನಾವನ್ನು ತಲುಪಲು ಅಂದು ಒಂದು ತಿಂಗಳು ಏಕಾಯಿತು. ಆದರೇ ಈ ಕಾಲದಲ್ಲಿ ಹಾಗಿಲ್ಲ. ಒಂದು ಈ ಮೇಲ್ ಕಳುಹಿಸಿದರೆ ಸೆಕೆಂಡ್ ಗಳಲ್ಲಿ ಉತ್ತರ ಬರುತ್ತದೆ ಎಂದರು.
ಪ್ರಸ್ತುತ ಜಗತ್ತಿನಲ್ಲಿ ಧರ್ಮಾಂಧತೆ, ಹಿಂಸೆ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ. ಮಾನವರು ರೋಬೋಟ್ ಗಳಾಗುವುದನ್ನು ತಡೆಯಬೇಕು ಎಂದು ಆರ್‌ಎಸ್‌ಎಸ್ ಮೋಹನ್ ಭಾಗವತ್ ಮುಖ್ಯಸ್ಥರು ಪ್ರತಿಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.