ಜಲ ಸಂರಕ್ಷಣೆಗೆ ಮೂರು ಮನವಿ
ಮನ್ ಕಿ ಬಾತ್ 2ರಲ್ಲಿ ಪ್ರಧಾನಿ ಮೋದಿ
Team Udayavani, Jul 1, 2019, 6:00 AM IST
ನವದೆಹಲಿ: ‘ಸ್ಪರ್ಶ ಮಾತ್ರದಿಂದಲೇ ಬದುಕನ್ನು ಬದಲಿಸಬಲ್ಲ ಪಾರಸ್ ಮಣಿಯಂಥ ಶಕ್ತಿಯನ್ನು ನೀರು ಹೊಂದಿದ್ದು, ಅದನ್ನು ಸಂರಕ್ಷಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ’ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಜಲ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಮೂರು ಮನವಿಗಳನ್ನು ಮಾಡಿದ್ದಾರೆ.
ಎರಡನೇ ಬಾರಿ ಪ್ರಧಾನಿಯಾದ ನಂತರ ತಮ್ಮ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್ ಕೀ ಬಾತ್’ ಅನ್ನು ಪುನರಾರಂಭಿಸಿರುವ ಅವರು, ಭಾನುವಾರ 2ನೇ ಸರಣಿಯ ಮೊದಲ ಕಂತಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಗುರವಾಗಿ ಪರಿಗಣಿಸದಿರಿ: 1975ರಲ್ಲಿ ದೇಶದಲ್ಲಿ ಜಾರಿಯಾಗಿದ್ದ ತುರ್ತು ಪರಿಸ್ಥಿತಿಗೆ ಇದೇ ಜೂ. 24ಕ್ಕೆ 44 ವರ್ಷಗಳು ಸಂದ ಹಿನ್ನೆಲೆಯಲ್ಲಿ ಪ್ರಧಾನಿ, ಆ ವಿಚಾರವನ್ನೂ ಉಲ್ಲೇಖೀಸಿ, ತುರ್ತು ಪರಿಸ್ಥಿತಿಗೆ ಕಾರಣರಾದವರು ಪ್ರಜಾಪ್ರಭುತ್ವವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದರು. ”ಹಾಗೆಯೇ, ನಮ್ಮಲ್ಲಿರುವ ಅನೇಕ ಸೌಕರ್ಯಗಳ ಮಹತ್ವ ಅವು ನಮ್ಮ ಜತೆಗಿರುವವರೆಗೆ ನಮಗೆ ತಿಳಿಯುವುದಿಲ್ಲ. ಯಾರಾದರೂ ಅವನ್ನು ಅಪಹರಿಸಿದಾಗ ಅಥವಾ ಕಿತ್ತುಕೊಂಡಾಗ ಮಾತ್ರ ಅವುಗಳ ಮಹತ್ವ ನಮಗೆ ತಿಳಿಯುತ್ತದೆ” ಎಂದ ಅವರು, ”ತುರ್ತು ಪರಿಸ್ಥಿತಿ ವೇಳೆಯಲ್ಲೂ ಜನರಿಗೆ ತಮಗೆ ಹತ್ತಿರವಾದ ಕೆಲವು ವಿಚಾರ, ಸ್ವಾತಂತ್ರ್ಯಗಳನ್ನು ಯಾರೋ ಅಪಹರಿಸಿದರು ಎಂಬ ಭಾವನೆ ನೆಲೆಸಿತು. ಹಾಗಾಗಿಯೇ 1977ರ ಮಹಾಚುನಾವಣೆಯಲ್ಲಿ ಅವರು ಪ್ರಜಾಪ್ರಭುತ್ವದ ಉಳಿವಿಗಾಗಿಯೇ ಮತ ಹಾಕಿದರು. ದೇಶದ ಇತಿಹಾಸದಲ್ಲಿ ಅದೊಂದು ಮಹತ್ವದ ಚುನಾವಣೆ” ಎಂದು ಮೋದಿ ಅಭಿಪ್ರಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.