ಶಕ್ತಿಮಾನ್ ನಂತೆ ಸಾಹಸ ಪ್ರದರ್ಶನ ಮಾಡಲು ಹೋಗಿ ಜೈಲುಪಾಲಾದ ಮೂವರು ಯುವಕರು: ಇಲ್ಲಿದೆ ವಿಡಿಯೋ
Team Udayavani, May 29, 2022, 9:31 AM IST
ನೋಯ್ಡಾ: ಮೋಟಾರ್ ಬೈಕ್ ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿ ಕೃತ್ಯದ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಮೂವರು ಯುವಕರನ್ನು ನೋಯ್ಡಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಈ ಯುವಕರು ಕಾಲ್ಪನಿಕ ಸೂಪರ್ ಹೀರೋ ‘ಶಕ್ತಿಮಾನ್’ನನ್ನು ಅನುಕರಿಸುವ ಸಾಹಸ ಪ್ರದರ್ಶಿನ ಮಾಡಿದ್ದಾರೆ. ಅಲ್ಲದೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ದ್ವಿಚಕ್ರವಾಹನದ ಸ್ಟಂಟ್ ನ ವಿಡಿಯೋ ಮಾಡಿದ ಆತನ ಸಹಚರರೊಂದಿಗೆ ಆರೋಪಿಗಳನ್ನು ಬಂಧಿಸಿ ಅವರ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಯುವಕರನ್ನು ವಿಕಾಸ್, ಅನಿಲ್ ಮತ್ತು ಮೆಹಕ್ ಎಂದು ಗುರುತಿಸಲಾಗಿದ್ದು, ರಸ್ತೆಗಳಲ್ಲಿ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಭಾರತವು ಠಾಕ್ರೆ- ಮೋದಿಗೆ ಸೇರಿದ್ದಲ್ಲ, ಭಾರತವು..: ಅಸಾದುದ್ದೀನ್ ಓವೈಸಿ
ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೌತಮ್ ಬುದ್ಧನಗರದ ಪೊಲೀಸ್ ಕಮಿಷನರೇಟ್, “ವಿಕಾಸ್ ಎಂಬ ಯುವಕ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಮಾಡುತ್ತಿದ್ದು ಮತ್ತು ವಿಡಿಯೋ ಮಾಡಿದ ಅವನ 2 ಸಹಚರರನ್ನು (ಗೌರವ್, ಸೂರಜ್) ನೋಯ್ಡಾ ಪೊಲೀಸ್ ಠಾಣೆ ಸೆಕ್ಟರ್ -63 ರವರು ಬಂಧಿಸಿದ್ದಾರೆ. ಮತ್ತು ಸ್ಟಂಟ್‌ಗೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.” ಎಂದಿದ್ದಾರೆ.
बाइक पर खतरनाक स्टंट करने वाले युवक विकास तथा वीडियो बनाने वाले उसके 02 साथियों (गौरव, सूरज) को थाना सेक्टर-63 नोएडा पुलिस द्वारा गिरफ्तार कर स्टंट में प्रयुक्त बाइक को सीज किया गया।#UPPolice pic.twitter.com/d94nvcfK01
— POLICE COMMISSIONERATE GAUTAM BUDDH NAGAR (@noidapolice) May 28, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.