ಶ್ರೀನಗರ ಎನ್‌ಕೌಂಟರ್: 3 ಉಗ್ರರ ಹತ್ಯೆ, ಓರ್ವ ಪೊಲೀಸ್ ಸಾವು
Team Udayavani, Oct 17, 2018, 11:14 AM IST
ಜಮ್ಮು : ಇಂದು ಬುಧವಾರ ನಸುಕಿನ ವೇಳೆ ಶ್ರೀನಗರದ ಫತೇ ಕದಾಲ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಗುಂಡಿನ ಕಾಳಗದಲ್ಲಿ ಕನಿಷ್ಠ ಮೂವರು ಉಗ್ರರು ಪೊಲೀಸರ ಗುಂಡಿಗೆ ಬಲಿಯಾದರು.
ಎಎನ್‌ಐ ವರದಿಯ ಪ್ರಕಾರ ಈ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಮತ್ತು ಓರ್ವ ಪೊಲೀಸ್ ಸಿಬಂದಿ ಮೃತಪಟ್ಟಿದ್ದಾರೆ.
ತಾಜಾ ವರದಿಗಳ ಪ್ರಕಾರ ಸೇನೆ, ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ನಡೆಸಿರುವ ಈ ಜಂಟಿ ಕಾರ್ಯಾಚರಣೆ ಇದೀಗ ಮುಗಿದಿದ್ದು ಬದುಕುಳಿದಿರಬಹುದಾದ ಇನ್ನಷ್ಟು ಉಗ್ರರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.
ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿರುವುದನ್ನು ಶ್ರೀನಗರದ ಎಸ್‌ಎಸ್‌ಪಿ ಇಮಿ¤ಯಾಜ್ ಇಸ್ಮಾಯಿಲ್ ಪಾರೇ ದೃಢೀಕರಿಸಿದ್ದಾರೆ. ಅಂತೆಯೇ ಪೊಲೀಸ್ ಸಿಬಂದಿ ಓರ್ವರು ಮೃತಪಟ್ಟಿರುವುದನ್ನೂ ಅವರು ದೃಢೀಕರಿಸಿದ್ದಾರೆ.
ಎನ್‌ಕೌಂಟರ್ ತಾಣದಲ್ಲಿ ಇನ್ನೂ ಅಡಗಿಕೊಂಡಿರುವ ಉಗ್ರರಲ್ಲಿ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಓರ್ವ ಉನ್ನತ ಕಮಾಂಡರ್ ಕೂಡ ಸೇರಿದ್ದಾನೆ ಎಂದು ವರದಿಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.