ಇನ್ನೊಂದೇ ರಫೇಲ್ ಬಾಕಿ; 3 ಹೊಸ ವಿಮಾನ ಆಗಮನ
ಈವರೆಗೆ ಒಟ್ಟು 35 ಸೇರ್ಪಡೆ
Team Udayavani, Feb 24, 2022, 7:55 AM IST
ಹೊಸದಿಲ್ಲಿ: ಭಾರತ-ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಒಪ್ಪಂದದಡಿ ಭಾರತಕ್ಕೆ ಬರಬೇಕಿದ್ದ ಯುದ್ಧ ವಿಮಾನಗಳ ಪೈಕಿ, ಮೂರು ಹೊಸ ರಫೇಲ್ ಯುದ್ಧ ವಿಮಾನಗಳು ಬುಧವಾರ ಭಾರತಕ್ಕೆ ಆಗಮಿಸಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ, 2016ರಲ್ಲಿ ಎರಡೂ ದೇಶಗಳ ನಡುವೆ ಮಾಡಿಕೊಂಡಿದ್ದ 59 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದದ ಪ್ರಕಾರ ಭಾರತಕ್ಕೆ ಫ್ರಾನ್ಸ್‌ನಿಂದ 36 ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಬರಬೇ ಕಿತ್ತು. ಬುಧವಾರ ಆಗಮಿಸಿರುವ ಮೂರು ವಿಮಾನಗಳು ಸೇರಿದಂತೆ ಈವರೆಗೆ 35 ಯುದ್ಧ ವಿಮಾನಗಳು ಭಾರತೀಯ ವಾಯು ಪಡೆಯನ್ನು ಸೇರ್ಪಡೆಗೊಂಡಿವೆ. ಇನ್ನೊಂದು ವಿಮಾನ ಸೇರ್ಪಡೆ ಬಾಕಿ ಯಿದ್ದು, ಮಾರ್ಚ್ ಅಥವಾ ಎಪ್ರಿಲ್ ಕೊನೆಯ ಭಾಗದಲ್ಲಿ ಹಸ್ತಾಂತರಗೊಳ್ಳುವ ನಿರೀಕ್ಷೆಯಿದೆ” ಎಂದು ತಿಳಿಸಿದೆ.
ಸಚಿವ ಜೈಶಂಕರ್ ಹರ್ಷ: ಒಪ್ಪಂದ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವುದಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಯುದ್ಧ ಭೀತಿ ಸೇರಿದಂತೆ ಅನೇಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರಪಂಚ ಮುನ್ನಡೆಯುತ್ತಿದೆ. ಭಾರತ ಕೂಡ ಕಳೆದೆ ರಡು ದಶಕಗಳಲ್ಲಿ ಇಂಥದ್ದೇ ಪ್ರಯತ್ನಗಳನ್ನು ಮಾಡಿದ್ದು, ಅದರ ಭಾಗವೇ ಭಾರತ-ಫ್ರಾನ್ಸ್ ನಡುವೆ ರಫೇಲ್ ಯುದ್ಧ ವಿಮಾನಗಳ ಒಪ್ಪಂದವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಸಮಯ ಬದಲಾವಣೆ
ಭಾರತ- ಫ್ರಾನ್ಸ್ ಹೊಸ ಒಪ್ಪಂದ?
36 ರಫೇಲ್ ಯುದ್ಧ ವಿಮಾನಗಳ ಹಸ್ತಾಂತರಿಸುವ ಒಪ್ಪಂದ ಅಂತ್ಯಗೊಳ್ಳುತ್ತಿರುವ ಹೊತ್ತಿಗೆ ಭಾರತದೊಂದಿಗೆ ಹೊಸತೊಂದು ಒಪ್ಪಂದ ಮಾಡಿಕೊಳ್ಳಲು ಫ್ರಾನ್ಸ್ ಚಿಂತನೆ ನಡೆಸಿದೆ. ಭಾರತೀಯ ವಾಯುಪಡೆಗೆ 36 ಮಲ್ಟಿರೋಲ್ ಫೈಟರ್ ಜೆಟ್‌ಗಳನ್ನು (ಎಂಆರ್‌ಎಫ್ಎ) ಒದಗಿಸುವ ನಿಟ್ಟಿನಲ್ಲಿ ಮಾತುಕತೆಗಳು ಸಾಗಿವೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ವಾಯುಪಡೆಗೆ ಯುದ್ಧ ವಿಮಾನಗಳ 42 ಸ್ಕ್ವಾಡ್ರನ್‌ಗಳನ್ನು ನಿರ್ವಹಿಸಲು ಅವಕಾಶವಿದೆ. ಆದರೆ ವಾಯುಪಡೆ 32 ಸ್ಕ್ವಾಡ್ರನ್‌ಗಳನ್ನು ಮಾತ್ರ ಮುನ್ನಡೆಸುತ್ತಿದೆ. ಹಾಗಾಗಿ ಹೊಸ ಯುದ್ಧ ವಿಮಾನಗಳ ಸೇರ್ಪಡೆ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದ್ದು, ಎಂಆರ್‌ಎಫ್ಎಗಳನ್ನು ಒದಗಿಸುವ ಹೊಸ ಒಪ್ಪಂದ ಮಾಡಿಕೊಳ್ಳಲು ಫ್ರಾನ್ಸ್-ಭಾರತ ಚಿಂತನೆ ನಡೆಸಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.