ಒಂದೇ ದಿನದಲ್ಲಿ ಹಳಿತಪ್ಪಿದ ಮೂರು ರೈಲುಗಳು
Team Udayavani, Sep 8, 2017, 7:45 AM IST
ಹೊಸದಿಲ್ಲಿ: ನಿರಂತರ ರೈಲು ದುರಂತಗಳು ನಡೆದ ಹಿನ್ನೆಲೆಯಲ್ಲಿ ರೈಲ್ವೆ ಸಚಿವರನ್ನೇ ಬದಲಾಯಿಸಲಾಯಿತಾದರೂ ಅಪಘಾತಗಳು ತಪ್ಪುತ್ತಿಲ್ಲ. ಇದಕ್ಕೆ ಸ್ಪಷ್ಟ ಸಾಕ್ಷ್ಯವೆಂಬಂತೆ, ಗುರುವಾರ ಒಂದೇ ದಿನ ಮೂರು ರೈಲು ಅವಘಡಗಳು ಸಂಭವಿಸಿವೆ.
ದಿಲ್ಲಿ, ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಮೂರು ರೈಲುಗಳು ಹಳಿ ತಪ್ಪಿವೆ. ಆದರೆ, ಒಬ್ಬ ಪ್ರಯಾಣಿಕನಿಗೆ ಗಾಯವಾಗಿದ್ದು ಬಿಟ್ಟರೆ, ಹೆಚ್ಚಿನ ಅನಾಹುತ ಆಗಿಲ್ಲ. ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್ಪ್ರೆಸ್ನ 2 ಬೋಗಿಗಳು ಹಳಿ ತಪ್ಪಿದರೆ, ಉತ್ತರಪ್ರದೇಶದಲ್ಲಿ ಶಕ್ತಿಪುಂಜ್ ಎಕ್ಸ್ಪ್ರೆಸ್ನ 7 ಬೋಗಿಗಳು ಹಳಿ ತಪ್ಪಿವೆ. ಇನ್ನೊಂದೆಡೆ, ಸಂಜೆ ವೇಳೆಗೆ ಮಹಾರಾಷ್ಟ್ರದ ಖಂಡಾಲಾದಲ್ಲಿ ಸರಕು ಸಾಗಣೆ ರೈಲಿನ 2 ಬೋಗಿಗಳು ಹಳಿ ತಪ್ಪಿದ್ದು, ಒಂದೇ ದಿನ ಮೂರು ಅಪಘಾತ ನಡೆದಂತಾಗಿದೆ. ನೂತನ ರೈಲ್ವೆ ಸಚಿವರಾಗಿ ಪಿಯೂಷ್ ಗೋಯಲ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲನೇ ಅವಘಡ ಇದಾಗಿದೆ. ಕಳೆದ ತಿಂಗಳು ಪದೇ ಪದೆ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ರಾಜೀನಾಮೆಗೆ ಮುಂದಾಗಿದ್ದರು. ಸಂಪುಟ ಪುನಾರಚನೆ ವೇಳೆ ಅವರ ಖಾತೆ ಬದಲಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.