ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರದಲ್ಲಿ ವೇತನ ಪಾವತಿಸಲು ಹಣವಿಲ್ಲ!
Team Udayavani, Mar 7, 2019, 11:41 AM IST
ಮುಂಬಯಿ: ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿರುವ ಟಾಟಾ ಇಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ಕೇಂದ್ರದ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳಿನ ವೇತನವನ್ನು ಅರ್ಧ ಪಾವತಿಸಲಾಗುವುದು ಎಂದು ಟಿ.ಐ.ಎಫ್.ಆರ್. ರಿಜಿಸ್ಟ್ರಾರ್ ವಿಂಗ್ ಕಮಾಂಡರ್ (ನಿವೃತ್ತ) ಜಾರ್ಜ್ ಆಂಟೋನಿ ತಿಳಿಸಿದ್ದಾರೆ. ವೇತನ ಪಾವತಿಗೆ ಅಗತ್ಯವಿರುವಷ್ಟು ನಿಧಿ ಸಂಗ್ರಹ ಇಲ್ಲದಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.
‘ವೇತನ ಪಾವತಿಸಲು ಸಾಕಷ್ಟು ನಿಧಿ ನಮ್ಮ ಬಳಿ ಇಲ್ಲದಿರುವುದರಿಂದ ನಮ್ಮೆಲ್ಲಾ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳಿನ ಮೂಲವೇತನದ ಅರ್ಧದಷ್ಟನ್ನು ಮಾತ್ರ ಪಾವತಿಸಲಾಗುವುದು ಮತ್ತು ಸೂಕ್ತ ನಿಧಿ ಸಂಗ್ರಹಗೊಂಡ ಬಳಿಕ ಉಳಿದ ಮೊತ್ತವನ್ನು ಪಾವತಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.
ಅಣು ಶಕ್ತಿ ಸಚಿವಾಲಯದಡಿಯಲ್ಲಿ ಬರುವ ಟಿ.ಐ.ಎಫ್.ಆರ್. ಭಾರತ ಸರಕಾರದ ಅಧೀನಕ್ಕೊಳಪಡುವ ಸಂಸ್ಥೆಯಾಗಿದೆ ಮತ್ತು ಡಾಕ್ಟರೇಟ್ ಪದವಿಗಳನ್ನು ಪ್ರಧಾನಿಸುವ ಸ್ವಾಯತ್ತ ವಿಶ್ವವಿದ್ಯಾನಿಲಯವಾಗಿದೆ. ಡಾ. ಹೋಮಿ ಬಾಬಾ ಅವರ ದೂರದರ್ಶಿತ್ವದಲ್ಲಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಬೆಂಬಲದೊಂದಿಗೆ 1945ರಲ್ಲಿ ಟಿ.ಐ.ಎಫ್.ಆರ್. ಸಂಸ್ಥೆಯು ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಮತ್ತು ವಿಜ್ಞಾನ ಶಿಕ್ಷಣ ವಿಷಯಗಳಲ್ಲಿ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯ ಪ್ರಧಾನ ಕ್ಯಾಂಪಸ್ ಮುಂಬಯಿಯಲ್ಲಿದೆ ಮತ್ತು ಪುಣೆ, ಬೆಂಗಳೂರು ಹಾಗೂ ಹೈದ್ರಾಬಾದ್ ಗಳಲ್ಲಿಯೂ ಈ ಸಂಸ್ಥೆಯು ತನ್ನ ಕೇಂದ್ರಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.