ನರಹಂತಕ ಹುಲಿಗೆ “ಶಾಕ್’
Team Udayavani, Oct 15, 2017, 7:50 AM IST
ನಾಗ್ಪುರ: ನಾಲ್ಕು ಮಂದಿಯನ್ನು ಹತ್ಯೆಗೈದಿದ್ದ ನರಹಂತಕ ಹುಲಿ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದೆ. ಎರಡು ವರ್ಷದ ಈ ಹುಲಿ ಬ್ರಹ್ಮಪುರ ಅರಣ್ಯ ಪ್ರದೇಶದಲ್ಲಿತ್ತು. ಇಲ್ಲಿ ಇಬ್ಬರನ್ನು ಸಾಯಿಸಿದ್ದರಿಂದ, ಹಿಡಿದು ನಾಗ್ಪುರಕ್ಕೆ ತರಲಾಗಿತ್ತು. ಇಲ್ಲಿ ಹುಲಿಯನ್ನು ಪುನಶ್ಚೇತನ ಗೊಳಿಸಿ ಬೋರ್ ಅಭಯಾರಣ್ಯ ದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ತನ್ನ ನರಹಂತಕ ಮನಃಸ್ಥಿತಿಯನ್ನು ಬಿಡದ ಹುಲಿ, ಮೂರು ಜಿಲ್ಲೆಗಳನ್ನು ತಿರುಗಾಡಿ ಅಲ್ಲಿ ಇಬ್ಬರನ್ನು ಹತ್ಯೆಗೈದಿದೆ. ವಾರ್ಧಾ ಹಾಗೂ ಅಮರಾವತಿ ಜಿಲ್ಲೆಗಳಿಗೆ ತೆರಳಿ ಅಲ್ಲಿಂದ ಪುನಃ ಬೋರ್ ಅಭಯಾರಣ್ಯಕ್ಕೆ ವಾಪಸಾಗುವ ದಾರಿಯಲ್ಲಿ ವಿದ್ಯುತ್ ಬೇಲಿಗೆ ತಗುಲಿ ಹುಲಿ ಸಾವನ್ನಪ್ಪಿದೆ. ಈ ಹುಲಿಯನ್ನು ಬಿಡುಗಡೆ ಮಾಡಿದ ಅನಂತರ 78 ದಿನಗಳವರೆಗೆ ಟ್ರ್ಯಾಕ್ ಮಾಡಲು ಸುಮಾರು 2 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಕಳೆದ ಆರು ತಿಂಗಳಲ್ಲಿ ಒಟ್ಟು ನಾಲ್ವರನ್ನು ಬಲಿತೆಗೆದುಕೊಂಡ ಈ ಹುಲಿಯನ್ನು ಗುಂಡಿಟ್ಟು ಸಾಯಿಸುವುದಕ್ಕೆ ಅಭಯಾರಣ್ಯದ ವಾರ್ಡನ್ ಆದೇಶಿಸಿದ್ದರು. ಇದರ ವಿರುದ್ಧ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದಲ್ಲಿ ದೂರು ಕೂಡ ದಾಖಲಿಸಲಾಗಿತ್ತು. ಭಗ ವಾನ್ ಟೇಕರ್ ಎಂಬವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಹುಲಿಯ ಕಳೇಬರ ಕಂಡು ಬಂದಿದ್ದು, ಟೇಕರ್ನನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
Ayodhya ರಾಮಮಂದಿರಕ್ಕೆ ಇಂದು ವರ್ಷಪೂರ್ಣ: ಹೇಗಿರಲಿದೆ ಕಾರ್ಯಕ್ರಮ?
Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್
Maha Kumbh; ಜಾಗ ಕೇಳಿದರೆ ಹುಷಾರ್: ವಕ್ಫ್ ಬೋರ್ಡ್ಗೆ ಎಚ್ಚರಿಕೆ ನೀಡಿದ ಯೋಗಿ
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.