ಗುಜರಾತ್‌ನಲ್ಲಿ ಹುಲಿ ಪತ್ತೆ!
Team Udayavani, Feb 11, 2019, 12:30 AM IST
ಅಹಮದಾಬಾದ್: ಅಧಿಕ ಸಂಖ್ಯೆಯಲ್ಲಿ ಸಿಂಹಗಳನ್ನು ಹೊಂದಿರುವ ಗುಜರಾತ್‌ನಲ್ಲಿ 25 ವರ್ಷಗಳ ನಂತರ ಹುಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದೆ. ದಟ್ಟ ಕಾನನದಿಂದ ತುಂಬಿರುವ ಡಂಗ್ ಅರಣ್ಯ ಪ್ರದೇಶದ ರಸ್ತೆಯೊಂದನ್ನು ಹುಲಿಯೊಂದು ದಾಟುತ್ತಿರುವ ದೃಶ್ಯಗಳನ್ನು ಮಹೇಶ್ ಮಹೇರಾ ಎಂಬ ಶಿಕ್ಷಕರೊಬ್ಬರು ತಮ್ಮ ಮೊಬೈಲಿನಿಂದ ಸೆರೆ ಹಿಡಿದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹೊತ್ತಿಸಿವೆ. ಸಂಪೂರ್ಣವಾಗಿ ನಶಿಸಿ ಹೋಗಿದೆಯೆಂದೇ ತೀರ್ಮಾನಿಸಲಾಗಿದ್ದ ಗುಜರಾತ್‌ನಲ್ಲಿ ಹುಲಿ ಸಂತತಿ ಮತ್ತೆ ಕುಡಿಯೊಡೆದಿರುವುದು ವನ್ಯಜೀವಿ ಪ್ರೇಮಿಗಳಿಗೆ ಸಂತಸ ತಂದಿದೆ.
ಹುಲಿಯೊಂದು ಈ ಪ್ರದೇಶದಲ್ಲಿ ಅಡ್ಡಾಡುತ್ತಿದೆಯೆಂದು ಕಳೆದ ವರ್ಷದ ಮಧ್ಯಭಾಗದಲ್ಲೇ ಗುಲ್ಲೆದ್ದಿತ್ತು. ಆದರೆ, ಇದನ್ನು ಖುದ್ದು ಅರಣ್ಯ ಇಲಾಖೆಯೇ ನಂಬಿರಲಿಲ್ಲ. ಅಷ್ಟರ ಮಟ್ಟಿಗೆ, ಗುಜರಾತ್‌ನಲ್ಲಿ ಹುಲಿ ಸಂತತಿ ಇಲ್ಲ ಎಂಬ ನಿರ್ಧಾರಕ್ಕೆ ಇಲಾಖೆಯೂ ಬಂದಿತ್ತು. ಆದರೀಗ, ಶಿಕ್ಷಕ ಮಹೇಶ್ ಮೊಬೈಲ್ ಚಿತ್ರಗಳು ಹುಲಿ ಬಗೆಗಿನ ಮಾಹಿತಿಗಳಿಗೆ ಪುಷ್ಟಿ ನೀಡಿವೆ.
ಅಸಲಿಗೆ, ಮೊದಲಿನಿಂದಲೂ ಡಂಗ್ ಅರಣ್ಯ ಪ್ರದೇಶವೇ ಹುಲಿಗಳ ಆವಾಸ ಸ್ಥಾನ. ಹಾಗಿದ್ದರೂ ಅಲ್ಲಿ 80-90ರ ದಶಕದಲ್ಲೇ ಬೆರಳೆಣಿಕೆಯಷ್ಟು ಹುಲಿಗಳಿದ್ದವು. 1985ರಲ್ಲಿ ರಸ್ತೆ ಅಪಘಾತದಲ್ಲಿ ಹುಲಿಯೊಂದು ಪ್ರಾಣ ತೆತ್ತಿತ್ತು. ಇನ್ನು, 1993-94ರಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಹುಲಿಯೂ ಜನರಿಗೆ ಕಾಣಿಸಿಕೊಂಡ ಉದಾಹರಣೆಯಿರಲಿಲ್ಲ.
ಹುಲಿ ಇರುವಿಕೆಗೆ ಸಾಕ್ಷ್ಯ ಸಿಕ್ಕಿದೆ. ಮತ್ತಷ್ಟು ನಿಖರತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಹುಲಿಯ ಇರುವಿಕೆ ಖಾತ್ರಿ ಆದರೆ, ಅದರ ಸಂರಕ್ಷಣೆ, ವಂಶಾವಭಿವೃದ್ಧಿಗೆ ಹೊಸ ಯೋಜನೆ ಹಮ್ಮಿಕೊಳ್ಳುತ್ತೇವೆ.
– ಅಕ್ಷಯ್ ಸಕ್ಸೇನಾ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.