ಸಾರ್ವಜನಿಕವಾಗಿ ಮಾಸ್ಕ್ ಕಳಚುವ ಮುನ್ನ ಕೋವಿಡ್ ವಾರಿಯರ್ಸ್ ನೆನಪಿಸಿಕೊಳ್ಳಿ: ಪ್ರಧಾನಿ ಮೋದಿ
ಕೋವಿಡ್ ವಾರಿಯರ್ ಗಳು ನಮ್ಮ ಪ್ರಾಣ ಉಳಿಸಲು ಹೋರಾಡುತ್ತಿದ್ದಾರೆ. 8ರಿಂದ 10 ಗಂಟೆಗಳ ಕಾಲ ಮಾಸ್ಕ್ ಧರಿಸುತ್ತಾರೆ. ಅವರಿಗೆ ತೊಂದರೆಯಾಗುವುದಿಲ್ಲವೇ ?
Team Udayavani, Jul 26, 2020, 2:27 PM IST
ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಜನರು ಸದಾ ಜಾಗರೂಕರಾಗಿರಿ. ಸಾವರ್ಜನಿಕವಾಗಿ ಮಾಸ್ಕ್ ಧರಿಸದೇ ಆಥವಾ ತೆಗೆಯುವ ಮುನ್ನ ಕೋವಿಡ್ ವಾರಿಯರ್ ಗಳ ಶ್ರಮದ ಕುರಿತು ಒಮ್ಮೆ ಅಲೋಚಿಸಿ ಎಂದು ಪ್ರಧಾನಿ ಮೋದಿ ದೇಶದ ಜನರಲ್ಲಿ ವಿನಂತಿಸಿದ್ದಾರೆ.
67ನೇ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿ ಮಾತನಾಡಿದ ಅವರು, ಕೋವಿಡ್ ಸೊಂಕಿನಿಂದ ಹಲವಾರು ಜನರು ಶೀಘ್ರ ಚೇತರಿಸುತ್ತಿದ್ದಾರೆ. ಮಾತ್ರವಲ್ಲದೆ ಸಾವಿನ ಪ್ರಮಾಣ ಕೂಡ ಕಡಿಮೆಯಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಆದಾಗ್ಯೂ ಸೊಂಕಿತರ ಸಂಖ್ಯೆ ಪ್ರತಿನಿತ್ಯ ದಾಖಲೆಯ ಮಟ್ಟದಲ್ಲಿ ಏರುತ್ತಿರುವುದು ಮಾರಕವಾಗಿ ಪರಿಣಮಿಸಿದೆ ಎಂದರು.
ಇಂದು ನಾವು ಲಕ್ಷಾಂತರ ಜನರ ಪ್ರಾಣ ಉಳಿಸಲು ಸಮರ್ಥರಾಗಿದ್ದೇವೆ. ಆದರೆ ವೈರಸ್ ಹರಡುವುದು ನಿಯಂತ್ರಣಕ್ಕೆ ಬರಲಿಲ್ಲ. ಅನೇಕ ಪ್ರದೇಶಗಳಲ್ಲಿ ಸೊಂಕು ವೇಗವಾಗಿ ಹರಡುತ್ತಿದೆ. ಜನರು ಸದಾ ಜಾಗರೂಕರಾಗಿರಬೇಕು ಎಂದು ಹೇಳಿದರು.
ನಾಗರಿಕರು ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ನಿರಂತರವಾಗಿ ಕೈ ತೊಳೆಯಬೇಕು, ಎಲ್ಲಿಯೂ ಉಗುಳಬಾರದು ಮತ್ತು ಸ್ವಚ್ಚತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಏಕೆಂದರೆ ಇವುಗಳು ಕೋವಿಡ್ ಸೊಂಕಿನಿಂದ ನಮ್ಮನ್ನು ರಕ್ಷಿಸಬಲ್ಲ ಶಸ್ತ್ರಾಸ್ತ್ರಗಳಾಗಿವೆ ಎಂದು ತಿಳಿಸಿದರು.
ಕೆಲವರಿಗೆ ಮಾಸ್ಕ್ ಧರಿಸುವುದರಿಮದ ತೊಂದರೆಗಲಾಗುತ್ತಿವೆ. ಮಾತ್ರವಲ್ಲದೆ ಆಗಿಂದ್ದಾಗೆ ಕಳಚುತ್ತಾರೆ, ಮಾಸ್ಕ್ ಧರಿಸದೆ ಇತರರೊಂದಿಗೆ ಮಾತನಾಡುತ್ತಾರೆ. ಅಂತಹ ಸಮಯದಲ್ಲಿ ವೈದ್ಯರನ್ನು, ನರ್ಸ್ ಗಳನ್ನು ಇತರ ಕೋವಿಡ್ ವಾರಿಯರ್ ಗಳ ಸೇವೆಯನ್ನು ನೆನಪು ಮಾಡಿಕೊಳ್ಳಿ !
ಕೋವಿಡ್ ವಾರಿಯರ್ ಗಳು ನಮ್ಮ ಪ್ರಾಣ ಉಳಿಸಲು ಹೋರಾಡುತ್ತಿದ್ದಾರೆ. 8ರಿಂದ 10 ಗಂಟೆಗಳ ಕಾಲ ಮಾಸ್ಕ್ ಧರಿಸುತ್ತಾರೆ. ಅವರಿಗೆ ತೊಂದರೆಯಾಗುವುದಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಕಾರ್ಗಿಲ್ ವಿಜಯ್ ದಿವಸ್ ಹಿನ್ನಲೆಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ 21 ವರ್ಷಗಳ ಹಿಂದೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 48,661 ಜನರಿಗೆ ಮಾರಕ ಕೋವಿಡ್ ಸೋಂಕು ತಗುಲಿದ್ದು 705 ಜನರು ಮೃತಪಟ್ಟಿದ್ದಾರೆ. ಒಟ್ಟು ಸೊಂಕಿತರ ಪ್ರಮಾಣ 13. 85 ಲಕ್ಷಕ್ಕೆ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.