ಇನ್ನು ಮುಂದೆ ಹಿರಿಯ ನಾಗರಿಕರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಸುಲಭ
Team Udayavani, Nov 24, 2022, 7:25 AM IST
ತಿರುಪತಿ: ಹಿರಿಯ ನಾಗರಿಕರಿಗೆ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಇನ್ನು ಸುಲಭವಾಗಲಿದೆ.
ಹಿರಿಯ ನಾಗರಿಕರಿಗಾಗಿಯೇ ಎರಡು ಸ್ಲಾಟ್‌ಗಳನ್ನು ಟಿಟಿಡಿ ಮೀಸಲಿಟ್ಟಿದೆ. ಪ್ರತಿ ದಿನ ಬೆಳಗ್ಗೆ 10 ಗಂಟೆ, ಮಧ್ಯಾಹ್ನ 3 ಗಂಟೆ ಸ್ಲಾಟ್‌ನಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ವಯಸ್ಸು ನಮೂದಿಸಿರುವ ಪೋಟೋ ಇರುವ ಗುರುತಿನ ಪತ್ರ(ಆಧಾರ್)ವನ್ನು ಕೌಂಟರ್‌ನಲ್ಲಿ ಅವರು ತೋರಿಸಬೇಕಾಗುವುದು ಕಡ್ಡಾಯ.
ದರ್ಶನ ಉಚಿತವಾಗಿದೆ. ಜತೆಗೆ ಒಬ್ಬರಿಗೆ ಎರಡು ಲಾಡು ಪ್ರಸಾದಕ್ಕೆ 20 ರೂ. ಹಾಗೂ ಹೆಚ್ಚುವರಿ ಪ್ರತಿ ಲಾಡುಗೆ 25 ರೂ. ನೀಡಬೇಕಾಗುತ್ತದೆ.
ಹಿರಿಯ ನಾಗರಿಕರಿಗಾಗಿ ವಿಶೇಷ ಪಥ ನಿರ್ಮಿಲಾಗಿದೆ. ಅವರು ಮೆಟ್ಟಿಲು ಹತ್ತಬೇಕಾಗಿಲ್ಲ. ಜತೆಗೆ ದರ್ಶನದ ವೇಳೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಕಾರ್ ಪಾರ್ಕಿಂಗ್‌ನಿಂದ ದೇಗುಲ ಬಾಗಿಲಿಗೆ ಕರೆತರಲು ಬ್ಯಾಟರಿ ಕಾರ್ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರ ಸ್ಲಾಟ್ 30 ನಿಮಿಷಗಳು ಇದ್ದು, ಅಲ್ಲಿಯವರೆಗೆ ಇತರರ ದರ್ಶನ ಸ್ಥಗಿತಗೊಳಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.