Tirupati ಭೇಟಿ; ಜಗನ್ vs ಚಂದ್ರಬಾಬು: ನನ್ನ ”ಧರ್ಮ” ಮಾನವೀಯತೆ
ಕಲಾಂ ತಿರುಪತಿಯಲ್ಲಿ ಧರ್ಮ ಘೋಷಿಸಿದ್ದರು!
Team Udayavani, Sep 28, 2024, 6:50 AM IST
ಅಮರಾವತಿ: ವೈ.ಎಸ್.ಆರ್.ಪಿ. ನಾಯಕ ಜಗನ್ ಮೋಹನ್ ರೆಡ್ಡಿ ಅವರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ವಿಷಯ ಸರಕಾರ ಮತ್ತು ವಿಪಕ್ಷದ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ನಾನು ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸಲು ಸರಕಾರ ನೋಟಿಸ್ ನೀಡಿದೆ ಎಂದು ಜಗನ್ ಆರೋಪಿಸಿದ್ದರೆ, ಯಾವುದೇ ನೋಟಿಸ್ ನೀಡಿಲ್ಲ. ಅವರ ಭೇಟಿಯನ್ನು ತಡೆಯಲು ಯತ್ನಿಸಿಲ್ಲ ಎಂದು ಚಂದ್ರಬಾಬು ಹೇಳಿದ್ದಾರೆ.
ಲಡ್ಡು ವಿವಾದದ ಬಳಿಕ ತಿರುಪತಿ ದೇವ ಸ್ಥಾನಕ್ಕೆ ಭೇಟಿ ನೀಡುವುದಾಗಿ ಜಗನ್ ಗುರು ವಾರ ಹೇಳಿದ್ದರು. ಆದರೆ ಕೊನೇಕ್ಷಣದಲ್ಲಿ ಈ ಭೇಟಿ ರದ್ದು ಮಾಡಿದ ಅವರು, ದೇವಸ್ಥಾನಕ್ಕೆ ಹೋಗುವುದನ್ನು ತಡೆ ಯಲು ರಾಜ್ಯ ಸರಕಾರ ದೇವಸ್ಥಾನದಲ್ಲಿ ಪೊಲೀ ಸರನ್ನು ನಿಯೋಜನೆ ಮಾಡಿದೆ. ಅಲ್ಲದೇ ವೈಎಸ್‌ಆರ್‌ಪಿ ನಾಯಕರಿಗೆ ದೇವ ಸ್ಥಾ ನಕ್ಕೆ ಹೋಗದಂತೆ ನೋಟಿಸ್ ನೀಡಿದೆ ಎಂದಿದ್ದರು.
ಇದಕ್ಕೆ ತಿರುಗೇಟು ನೀಡುರುವ ಸಿಎಂ ನಾಯ್ಡು, ಎಲ್ಲ ಧರ್ಮಗಳಿಗೂ ತನ್ನದೇ ಆದ ನಂಬಿಕೆಗಳನ್ನು ಹೊಂದಿವೆ. ನಂಬಿಕೆಗಳಿಗಿಂತ ಯಾರೂ ದೊಡ್ಡವರಲ್ಲ. ದೇವರನ್ನು ದೂಷಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ಜಗನ್ ಮೋಹನ್ ರೆಡ್ಡಿ ತಿರುಪತಿಗೆ ಭೇಟಿ ನೀಡುವುದಾಗಿ ಘೋಷಿಸಿದ ಬಳಿಕ ಅದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ದೇವಸ್ಥಾನ ಭೇಟಿಗೂ ಮುನ್ನ ರೆಡ್ಡಿ ತಮ್ಮ ಧರ್ಮವನ್ನು ಘೋಷಣೆ ಮಾಡಬೇಕು ಎಂದು ಹೇಳಿತ್ತು.
ನನ್ನ ಧರ್ಮ ಮಾನವೀಯತೆ: ರೆಡ್ಡಿ
ನನ್ನ ಧರ್ಮ ಯಾವುದು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ನಾನು 4 ಗೋಡೆಗಳ ಮಧ್ಯೆ ಬೈಬಲ್ ಓದುತ್ತೇನೆ. ಆದರೆ ಹೊರಗೆ ಎಲ್ಲ ಧರ್ಮವನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ನನ್ನ ಧರ್ಮ ಮಾನವೀಯತೆಯಾಗಿದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಕಲಾಂ ತಿರುಪತಿಯಲ್ಲಿ ಧರ್ಮ ಘೋಷಿಸಿದ್ದರು!
ಭಾರತದ ರಾಷ್ಟ್ರಪತಿಯಾಗಿದ್ದ ಸಮಯದಲ್ಲಿ ತಿರುಮಲಕ್ಕೆ ಭೇಟಿ ನೀಡಿದ್ದ ಡಾ| ಎ.ಪಿ.ಜೆ.ಅಬ್ದುಲ್ ಕಲಾಂ ದೇವಸ್ಥಾನದ ನಿಯಮದಂತೆ ತಮ್ಮ ಧರ್ಮ ಘೋಷಣೆ ಮಾಡಿದ್ದರು. ಆದರೆ ಸೋನಿಯಾ ಗಾಂಧಿ ಧರ್ಮ ಘೋಷಣೆ ಮಾಡಲಿಲ್ಲ ಎಂಬ ವಿಷಯ ವಿವಾದಕ್ಕೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.