BJP ನಾಯಕರ ವಿರುದ್ಧ ಸುಳ್ಳು ಕೇಸ್ ಹಾಕಿ ಜೈಲಿಗಟ್ಟಿ; TMC ವಿವಾದ
Team Udayavani, Sep 4, 2018, 4:20 PM IST
ಕೋಲ್ಕತ : ಬಿಜೆಪಿ ನಾಯಕರ ವಿರುದ್ಧ ಮಾದಕ ದ್ರವ್ಯ ಹೊಂದಿರುವ ಸುಳ್ಳು ಕೇಸು ಹಾಕಿ, ಬಂಧಿಸಿ ಜೈಲಿಗೆ ಅಟ್ಟುವಂತೆ ಟಿಎಂಸಿ ನಾಯಕ ಅನುಬೃತ ಮಂಡಲ್ ಅವರು ಪಕ್ಷದ ಕಾರ್ಯಕತರನ್ನು ಕೇಳಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು ರಾಜಕೀಯ ವಲಯಗಳಲ್ಲಿ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದೆ.
ಟಿಎಂಸಿ ತನ್ನ ರಾಜಕೀಯ ಎದುರಾಳಿಗಳ ವಿರುದ್ದ ಮುಯ್ಯಿ ತೀರಿಸಿಕೊಳ್ಳಲು ಪೊಲೀಸ್ ಬಲವನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷ ಆಪಾದಿಸಿದೆ.
ಬೀರ್ಭೂಮ್ ಜಿಲ್ಲೆಯ ಟಿಎಂಸಿ ಘಟಕದ ಅಧ್ಯಕ್ಷರಾಗಿರುವ ಅನುಬೃತ ಮಂಡಲ್ ಅವರು ನೆರೆಯ ಪೂರ್ವ ಬರ್ದ್ವಾನ್ ಜಿಲ್ಲೆಯಲ್ಲಿನ ಔಷ್ಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಸಭೆಯೊಂದರ ಅಧ್ಯಕ್ಷತೆ ವಹಿಸಿ ಈ ಹೇಳಿಕೆ ನೀಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು ಅದೀಗ ವಿರೋಧ ಪಕ್ಷಕ್ಕೆ ಟೀಕಾಸ್ತ್ರವನ್ನು ಒದಗಿಸಿದೆ.
ಪಶ್ಚಿಮ ಬಂಗಾಲದಲ್ಲಿ ಅಫೀಮು, ಗಾಂಜಾ ಮುಂತಾದ ಮಾದಕ ದ್ರವ್ಯವನ್ನು ಕನಿಷ್ಠ 1 ಕಿಲೋ ಹೊಂದಿದರೂ 6 ತಿಂಗಳ ಜೈಲು ಶಿಕ್ಷೆಗೆ, ಹೆಚ್ಚು ಪ್ರಮಾಣ ಹೊಂದಿದ್ದರೆ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.