2018-19ರಲ್ಲಿ 12,000 ಉಚಿತ ದನ ವಿತರಿಸುವ ತ.ನಾ.ಸರಕಾರ
Team Udayavani, Mar 15, 2018, 4:48 PM IST
ಚೆನ್ನೈ : ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರ ಪ್ರಧಾನ ಸಮಾಜ ಕಲ್ಯಾಣ ಯೋಜನೆಯಡಿ ತಮಿಳುನಾಡು ಸರಕಾರ 2018-19ರಲ್ಲಿ ಒಂದೂವರೆ ಲಕ್ಷ ಫಲಾನುಭವಿಗಳಿಗೆ 12,000 ಹಾಲು ಕೊಡುವ ದನಗಳನ್ನು, ಆರು ಲಕ್ಷ ಕುರಿ ಅಥವಾ ಆಡುಗಳನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಿದೆ.
ಕೃಷಿಕರಿಗೆ ಉಚಿತವಾಗಿ ಹಾಲು ಕೊಡುವ ದನ, ಕುರಿ, ಆಡುಗಳನ್ನು ಒದಗಿಸುವುದು ಎಐಎಡಿಎಂಕ ಪಕ್ಷದ ಪರಮೋಚ್ಚನಾಯಕಿ, ಮಾಜಿ ಮುಖ್ಯಮಂತ್ರಿ, ದಿ| ಜೆ ಜಯಲಲಿತಾ ಅವರ ಅಚ್ಚುಮೆಚ್ಚಿನ ಯೋಜನೆಯಾಗಿದ್ದು ಅದನ್ನಾಕೆ 2011ರಲ್ಲಿ ಆರಂಭಿಸಿದ್ದರು.
ಉಪ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರು ತಮ್ಮ ಬಜೆಟ್ ಭಾಷಣದಲ್ಲಿ 2018-19ರಲ್ಲಿ 248.58 ಕೋಟಿ ರೂ. ವೆಚ್ಚದಲ್ಲಿ ಒಂದೂವರೆ ಲಕ್ಷ ಫಲಾನುಭವಿಗಳಿಗೆ ಒಟ್ಟು 12,000 ಹಾಲು ಕೊಡುವ ದನಗಳನ್ನು ಮತ್ತು ಆರು ಲಕ್ಷ ಕುರಿಗಳನ್ನು ಉಚಿತವಾಗಿ ಪೂರೈಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.
2011ರಿಂದ ಈ ತನಕ 75,398 ಮಹಿಳೆಯರಿಗೆ ತಲಾ ಒಂದು ದನವನ್ನು, 8.71 ಲಕ್ಷ ಬಡ ಕುಟುಂಬಗಳಿಗೆ 34.85 ಲಕ್ಷ ಕುರಿ/ಆಡುಗಳನ್ನು ತಮಿಳು ನಾಡು ಸರಕಾರ ಪೂರೈಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.