ರೀಲ್ಸ್ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ
Team Udayavani, Jul 21, 2024, 3:24 PM IST
ದೆಹಲಿ: ಕೆಲಸಕ್ಕಿದ್ದ ಮನೆಯಲ್ಲೇ ಲಕ್ಷಾಂತರ ರೂ. ಬೆಳೆಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿ ಆಗಲು ಯತ್ನಿಸಿದ ಮಹಿಳೆಯನ್ನು ಬಂಧಿಸಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.
ನೀತು ಯಾದವ್(30) ಬಂಧಿತ ಮಹಿಳೆ. ಈಕೆಯಿಂದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಘಟನೆ?: ನೀತು ಯಾದವ್ ದ್ವಾರಕಾದಲ್ಲಿ ಮನೆಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು. ಈ ಐಷಾರಾಮಿ ಬಂಗಲೆಯ ಮಾಲೀಕರು ಜು.15ರಂದು ತಮ್ಮ ಮನೆಯಿಂದ ಚಿನ್ನದ ಬಳೆ, ಬೆಳ್ಳಿ ಸರ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಆಗಿದೆ. ತಮಗೆ ಕೆಲಸದಾಕೆಯ ಮೇಲೆ ಸಂಶಯವಿರುವುದಾಗಿ ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿ ಪೊಲೀಸರು ನೀತು ಅವರನ್ನು ಸಂಪರ್ಕಿಸಲು ಕರೆ ಮಾಡಿದಾಗ, ಅವರ ಫೋನ್ ಸ್ವಿಚ್ಡ್ ಆಫ್ ಬಂದಿದೆ. ಕೊಟ್ಟಿರುವ ವಿಳಾಸ ಕೂಡ ನಕಲಿ ಎನ್ನುವುದು ಗೊತ್ತಾಗಿದೆ. ಇದಾದ ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ನೀತು ಇರುವ ಸ್ಥಳವನ್ನು ಪತ್ತೆ ಮಾಡಿದ್ದಾರೆ.
ಪೊಲೀಸರು ನೀತುರನ್ನು ಬಂಧಿಸಲು ತೆರಳುವಾಗ ಅವರು ಬ್ಯಾಗ್ ಹಿಡಿದುಕೊಂಡು ದೆಹಲಿಗೆ ಹೋಗಲು ಸಿದ್ಧರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ರೀಲ್ಸ್ ಗಾಗಿ ಮಾಡಲು ಕ್ಯಾಮೆರಾ ಖರೀದಿಗೆ ಮುಂದಾಗಿದ್ದ ನೀತು: ನೀತು ಮೂಲತಃ ನಿವಾಸಿಯಾಗಿದ್ದು, ತನ್ನ ಪತಿ ಮಾದಕ ವ್ಯಸನಿಯಾಗಿದ್ದಾನೆ. ಗಂಡನ ಕಿರುಕುಳ ತಾಳಲಾರದೆ, ಅದರಿಂದ ತಪ್ಪಿಸಿಕೊಂಡು ದೆಹಲಿಗೆ ಬಂದು ಬಂಗಲೆಗಳಲ್ಲಿ ಮನೆ ಕೆಲಸ ಮಾಡಲು ಆರಂಭಿಸಿರುವುದಾಗಿ ವಿಚಾರಣೆ ವೇಳೆ ನೀತು ಹೇಳಿದ್ದಾರೆ.
ನಾನೊಂದು ಯೂಟ್ಯೂಬ್ ಚಾನೆಲ್ ಹೊಂದಿದ್ದೇನೆ. ಬಿಡುವಿನ ವೇಳೆ ರೀಲ್ಸ್ ವಿಡಿಯೋಗಳನ್ನು ಮಾಡಿ ಅದರಲ್ಲಿ ಪೋಸ್ಟ್ ಮಾಡುತ್ತಿದ್ದೆ. ಈ ವೇಳೆ ನನಗೆ ನೀವು ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸಿ ಅದರಲ್ಲಿ ವಿಡಿಯೋ ಗುಣಮಟ್ಟ ಉತ್ತಮವಾಗಿ ಬರುತ್ತದೆನ್ನುವ ಸಲಹೆವೊಂದು ಬಂತು. ಡಿಎಸ್‌ಎಲ್‌ಆರ್ ಕ್ಯಾಮೆರಾಕ್ಕೆ ಲಕ್ಷ ಲಕ್ಷ ಹಣ ಬೇಕಾಗಿತ್ತು. ಹೀಗಾಗಿ ನಾನು ನನ್ನ ಕುಟುಂಬವರ ಬಳಿ ಸಾಲ ಕೇಳಿದ್ದೆ. ಆದರೆ ಯಾರೂ ಕೂಡ ಸಾಲ ನೀಡಿಲ್ಲ. ಹೀಗಾಗಿ ಈ ಬಂಗಲೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಇರುವುದು ಗೊತ್ತಾಯಿತು. ಕ್ಯಾಮೆರಾ ಖರೀದಿಗಾಗಿ ಅದನ್ನು ಕಳವು ಮಾಡುವ ಪ್ಲ್ಯಾನ್ ಮಾಡಿದೆ ಎಂದು ನೀತು ಪೊಲೀಸರು ಮುಂದೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.