ಚಾಂದಿನಿ ಶಾಶ್ವತ ವಿದಾಯ
Team Udayavani, Mar 1, 2018, 8:15 AM IST
ಮುಂಬೈ: ಬಾಲಿವುಡ್ ತಾರೆ ಶ್ರೀದೇವಿ ಅಂತ್ಯ ಸಂಸ್ಕಾರ ಬುಧವಾರ, ಸರ್ಕಾರಿ ಗೌರವಗಳೊಂದಿಗೆ ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದ ಚಿತಾಗಾರದಲ್ಲಿ ನೆರವೇರಿತು. ಶ್ರೀದೇವಿ ಪತಿ ಬೋನಿ ಕಪೂರ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಪುತ್ರಿಯರಾದ ಜಾಹ್ನವಿ, ಖುಷಿ ಜತೆಯಲ್ಲಿದ್ದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಶ್ರೀದೇವಿ ಅವರಿಗೆ ಅವರ ಅಚ್ಚುಮೆಚ್ಚಾದ ಕಡುಕೆಂಪು ಬಣ್ಣದ ಕಾಂಜೀವರಂ ರೇಷ್ಮೆ ಸೀರೆ ಉಡಿಸಲಾಯಿತು. ಚಿನ್ನಾಭರಣಗಳನ್ನು ತೊಡಿಸಲಾಯಿತು. ಮುಖಕ್ಕೆ ಮೇಕಪ್ ಮಾಡಿ, ಹಣೆಗೆ ಕಡುಕೆಂಪು ಬಣ್ಣದ ಬಿಂದಿ ಹಚ್ಚಲಾಯಿತು. ಇಹಲೋಕದಿಂದ ಶಾಶ್ವತವಾಗಿ ದೂರವಾಗುವ ಮುನ್ನ ಸೌಂದರ್ಯದ ಖನಿಯಾಗಿದ್ದ ಶ್ರೀದೇವಿ ಅವರನ್ನು ಸೌಂದರ್ಯವತಿಯಾಗಿಯೇ ಸಿಂಗರಿ ಸಿದ್ದು ಅನೇಕ ಅಭಿಮಾನಿಗಳ ಕಣ್ಣಂಚಿನಲ್ಲಿ ನೀರು ತರಿಸಿತು.
ಬೆಳಗ್ಗೆ ಅಂತಿಮ ದರ್ಶನ: ದುಬೈನಿಂದ ಮಂಗಳವಾರ ರಾತ್ರಿ ಮುಂಬೈಗೆ ಆಗಮಿಸಿದ್ದ ಶ್ರೀದೇವಿಯವರ ಮೃತದೇಹವನ್ನು ಮೊದಲು, ಲೋಖಂಡ್‌ವಾಲಾದಲ್ಲಿರುವ ಶ್ರೀದೇವಿ ನಿವಾಸಕ್ಕೆ ಕೊಂಡೊಯ್ಯಲಾಗಿತ್ತು. ಬೆಳಗ್ಗೆ 9 ಗಂಟೆಯಿಂದ ಅಂಧೇರಿಯ ಸೆಲೆಬ್ರೇಷನ್ ನ್ಪೋರ್ಟ್ಸ್ ಕ್ಲಬ್‌ನಲ್ಲಿ ಅವರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ಚಿತ್ರತಾರೆಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ನೆಚ್ಚಿನ ನಟಿಗೆ ಅಂತಿಮ ನಮನ ಸಲ್ಲಿಸಿದರು.
ದಕ್ಷಿಣ ಭಾರತದ ತಾರೆಯರಾದ ಚಿರಂಜೀವಿ, ವೆಂಕಟೇಶ್, ಪ್ರಕಾಶ್ ರೈ ಸೇರಿದಂತೆ ಶಾರೂಖ್ ಖಾನ್, ದೀಪಿಕಾ ಪಡುಕೋಣೆ, ಜಾಕಿ ಶ್ರಾಫ್, ಶಾಹೀದ್ ಕಪೂರ್, ನಿರ್ದೇಶಕರಾದ ರಾಕೇಶ್ ರೋಷನ್, ಡೇವಿಡ್ ಧವನ್, ಸಂಜಯ್ ಲೀಲಾ ಬನ್ಸಾಲಿ, ಮಹಿಮಾ ಚೌಧರಿ, ಜಯಾ ಬಚ್ಚನ್, ಐಶ್ವರ್ಯ ರೈ, ವಿವೇಕ್ ಓಬೆರಾಯ್, ವಿದ್ಯಾ ಬಾಲನ್ ಸೇರಿದಂತೆ ಇಡೀ ಬಾಲಿವುಡ್ ಚಿತ್ರರಂಗವೇ ಅಲ್ಲಿ ನರೆದಿತ್ತು.
ಮಧ್ಯಾಹ್ನದ ಹೊತ್ತಿಗೆ ಮಹಾರಾಷ್ಟ್ರ ಸರ್ಕಾರ, ಶ್ರೀದೇವಿ ಅವರಿಗೆ ಸರ್ಕಾರಿ ಗೌರವ ನೀಡಲು ನಿರ್ಧರಿಸಿತು. ಸಮಾಜ ಸೇವೆ, ಕಲೆ, ಸಾಹಿತ್ಯ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರು ನಿಧನರಾದಾಗ ತನ್ನ ವಿವೇಚನೆ ಮೇರೆಗೆ ಸರ್ಕಾರಿ ಗೌರವ ನೀಡುವ ಅಧಿಕಾರ ಹೊಂದಿದೆ. 2013ರಲ್ಲಿ ಪದ್ಮಶ್ರೀ ಗೌರವ ಪಡೆದಿದ್ದ ಶ್ರೀದೇವಿಯವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲು ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ, ಸೆಲೆಬ್ರೇಷನ್ ನ್ಪೋರ್ಟ್ಸ್ ಕ್ಲಬ್‌ನಲ್ಲಿದ್ದ ಶ್ರೀದೇವಿ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ, ಕುಶಾಲ ತೋಪು ಸಿಡಿಸಲಾಯಿತು.
ರಸ್ತೆಗಳಲ್ಲಿ ಜನಸಾಗರ
ಮಧ್ಯಾಹ್ನ 2:12ರ ಹೊತ್ತಿಗೆ, ಶ್ರೀದೇವಿಯವರ ಅಂತಿಮ ಯಾತ್ರೆ ಆರಂಭವಾಯಿತು. ಹೂಗಳಿಂದ ಅಲಂಕೃತವಾಗಿದ್ದ ವಾಹನದಲ್ಲಿ ಅವರ ಪಾರ್ಥಿವ ಶರೀರ ಸಾಗುತ್ತಿದ್ದಾಗ ಬಾಲಿವು ಡ್‌ನ ತಾರೆಗಳು ಸೇರಿದಂತೆ ಸಾವಿರಾರು ಮಂದಿ ವಾಹನವನ್ನು ಕಾಲ್ನಡಿಗೆಯಲ್ಲೇ ಹಿಂಬಾಲಿಸಿದರು. ಪಾರ್ಥಿ ವ ಶರೀರ ವಿಲೆ ಪಾರ್ಲೆ ಪ್ರಾಂತ್ಯ ತಲುಪುವಷ್ಟರಲ್ಲಿ, ಸಂಜೆ 3 ಗಂಟೆಯಾಗಿತ್ತು. ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಕತ್ರಿನಾ ಕೈಫ್, ವಿದ್ಯಾ ಬಾಲನ್, ಅನುಪಮ್ ಖೇರ್, ಅನಿಲ್ ಅಂಬಾನಿ ಸೇರಿದಂತೆ ಹಲವಾರು ಗಣ್ಯರು ಅಲ್ಲಿಗೆ ಆಗಮಿಸಿದ್ದರು. ಅಲ್ಲಿ ಯೂ ಕೆಲ ಹೊತ್ತು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾ ಗಿತ್ತು. ಚಿತಾಗಾರ ಸೇರಿದ ನಂತರ, ಶ್ರೀದೇವಿಯವ ಪಾರ್ಥಿಕ ಶರೀರಕ್ಕೆ ಕೊನೆಯ ಅಲಂಕಾರ, ಇತರ ಧಾರ್ಮಿಕ ವಿಧಿವಿಧಾ ನಗಳು, ಭಜನೆ ಗಳು ನೆರವೇರಿದವು. ಆನಂತರ, ಗಣ್ಯರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾ ಯಿತು. ಈ ಸಂದರ್ಭದಲ್ಲಿ, ಅನೇಕರು ಗದ್ಗದಿತರಾಗಿ ಕಂಬನಿಯ ನಮನ ಸಲ್ಲಿಸಿದ್ದು ಶ್ರೀದೇವಿಯವರ ಜನಪ್ರಿಯತೆಗೆ ಸಾಕ್ಷಿಯೆನಿಸಿತು.
ಕರ್ನಾಟಕದಿಂದಲೂ ಭೇಟಿ
ನಟಿಯ ಅಂತಿಮ ದರ್ಶನ ಪಡೆಯಲು ಕರ್ನಾಟಕದಿಂದಲೂ ನೂರಾರು ಮಂದಿ ಭೇಟಿ ನೀಡಿದ್ದರು. ಈ ಗುಂಪಿನಲ್ಲೊಬ್ಬರು ಸುದ್ದಿಸಂಸ್ಥೆ ಜತೆಗೆ ಮಾತನಾಡಿ ನಟ ಅನಿಲ್ ಕಪೂರ್ ನಿವಾಸಕ್ಕೂ ತೆರಳಿದ್ದಾಗಿ ತಿಳಿಸಿದ್ದಾರೆ.
ಅಂತ್ಯ ಸಂಸ್ಕಾರಕ್ಕೂ ಮುನ್ನ ಶ್ರೀದೇವಿಗೆ ಕಾಂಚೀವರಂ ಸೀರೆ, ಒಡವೆ, ಮೇಕಪ್
ಅಗಲಿದ ಜನಪ್ರಿಯ ಕಲಾವಿದೆಗೆ ಮಹಾರಾಷ್ಟ್ರ ರಾಜ್ಯದಿಂದ ಸರ್ಕಾರಿ ಗೌರವ
ಕೋಟ್ಯಂತರ ಅಭಿ ಮಾನಿಗಳ ಸಮ್ಮು ಖದಲ್ಲಿ ಭೌತಿಕ ವಾಗಿ ಮರೆಯಾದ ಮೋಹಕ ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.