ಇಂದು ‘ವಿಶ್ವ ಗಜ ದಿನ’- ಇದು ಜಂಬೋ ಲೋಕ; ಇವುಗಳನ್ನು ನೋಡಿದರೆ ನಿಮಗೆ ನಗೆಯುಕ್ಕುವುದು ಪಕ್ಕಾ!
Team Udayavani, Aug 12, 2020, 6:12 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ನಮ್ಮಲ್ಲಿ ಎಲ್ಲದಕ್ಕೂ ಒಂದೊಂದು ದಿನ ಎಂದು ನಿಗದಿಯಾಗಿರುತ್ತದೆ.
ಹಾಗೆಯೇ ಇಂದು ವಿಶ್ವ ಆನೆಗಳ ದಿನ, ಅಥವಾ ಇದನ್ನು ನಾವು ವಿಶ್ವ ಗಜ ದಿನವೆಂದೂ ಸಹ ಕರೆಯಬಹುದು.
ಆನೆಗಳು ಪ್ರಕೃತಿಯಲ್ಲಿ ವಾಸವಾಗಿರುವ ಅತೀದೊಡ್ಡ ಜೀವಿಗಳಲ್ಲಿ ಒಂದೆಂಬ ಸ್ಥಾನವನ್ನು ಪಡೆದುಕೊಂಡಿವೆ.
ನಮ್ಮ ದೇಶದಲ್ಲಿ ಆನೆಗಳಿಗೆ ವಿಶೇಷವಾದ ಸ್ಥಾನವಿದೆ. ಪ್ರಥಮ ಪೂಜಿತ ಗಣೇಶನೂ ಆನೆ ಮುಖದ ದೇವರೇ ಹಾಗಾಗಿ ಗಣೇಶನನ್ನು ನಾವೆಲ್ಲಾ ಗಜಮುಖ ಎಂದೇ ಕರೆಯುವುದು.
ಇನ್ನು ದಕ್ಷಿಣ ಭಾರತದ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಒಂದಾದರೂ ಆನೆ ಇದ್ದೇ ಇರುತ್ತದೆ. ಹಾಗಾಗಿ ನಮಗೂ ಆನೆಗಳಿಗೂ ಬಾಲ್ಯದಿಂದಲೇ ಒಂದು ನಂಟು ಬೆಳೆದುಬಿಟ್ಟಿರುತ್ತದೆ.
ಇನ್ನು ನಮ್ಮಲ್ಲಿ ಕಾಡುಗಳ್ಳರ ಹಾವಳಿಗೆ ಅತೀ ಹೆಚ್ಚು ತುತ್ತಾಗುತ್ತಿರುವುದೂ ಸಹ ಆನೆಗಳೇ. ಆನೆ ದಂತಕ್ಕೆ ಅಪಾರವಾದ ಬೇಡಿಕೆ ಮತ್ತು ಬೆಲೆ ಇರುವುದರಿಂದ ಗಂಡಾನೆಗಳು ಕಾಡುಗಳ್ಳರ ಕ್ರೂರದೃಷ್ಟಿಗೆ ತುತ್ತಾಗುತ್ತಲೇ ಇವೆ. ನಮ್ಮ ದೇಶ ಕಂಡ ಅತ್ಯಂತ ಕ್ರೂರಿ ಕಾಡುಗಳ್ಳ ವೀರಪ್ಪನ್ ಸಹ ‘ದಂತ ಚೋರ’ನೆಂದೇ ಕುಖ್ಯಾತಿಯನ್ನು ಹೊಂದಿದ್ದವ.
ಏಷ್ಯಾ ಸಹಿತ ನಮ್ಮ ದೇಶದಲ್ಲಿ ಕಾಣಸಿಗುವ ಆನೆಗಳು ಆಫ್ರಿಕಾದ ಆನೆಗಳಿಗಿಂತ ಗಾತ್ರ ಮತ್ತು ಆಕಾರದಲ್ಲಿ ಸಂಪೂರ್ಣ ಭಿನ್ನವಾಗಿವೆ. ದೊಡ್ಡ ಆನೆಗಳು ಗಾಂಭಿರ್ಯಕ್ಕೆ ಹೆಸರುವಾಸಿಯಾದರೆ ಮರಿಯಾನೆಗಳು ತಮ್ಮ ತುಂಟಾಟಗಳಿಗೆ ಪ್ರಸಿದ್ಧಿಯನ್ನು ಪಡೆದಿವೆ.
ಅವುಗಳು ತಮ್ಮ ಪುಟ್ಟ ಸೊಂಡಿಲಿನಿಂದ ಕೂಡಿದ ದೇಹದ ಮೂಲಕ ನಡೆಸುವ ತುಂಟಾಟದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ.
ಜಗತ್ತಿನಲ್ಲಿರುವ ಒಟ್ಟು ಆನೆಗಳ ಸಂತತಿಯಲ್ಲಿ ಸರಿಸುಮಾರು 60% ಆನೆಗಳು ಭಾರತ ದೇಶದಲ್ಲಿಯೇ ಇರುವುದು ವಿಶೇಷ. ನಮ್ಮ ದೇಶದ 14 ರಾಜ್ಯಗಳಲ್ಲಿ ಇರುವ 30 ಆನೆ ಸಂರಕ್ಷಿತ ಪ್ರದೇಶಗಳಲ್ಲಿ ಈ ಗಜ ಸಂತತಿ ಹರಡಿದೆ. ಅದರಲ್ಲಿ ನಮ್ಮ ರಾಜ್ಯದ ದುಬಾರೆ ಮತ್ತು ಸಕ್ರೆಬೈಲೂ ಸಹ ಸೇರಿದೆ. ಭಾರತದಲ್ಲಿ ಸರಿಸುಮಾರು 65 ಸಾವಿರ ಚದರ ಕಿಲೋ ಮೀಟರ್ ಪ್ರದೇಶಗಳಲ್ಲಿ ಗಜ ಸಂತತಿ ವಾಸಿಸುತ್ತಿರುವುದರಿಂದ ಅವುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವೂ ಆಗಿದೆ.
ನಮ್ಮ ಪಶ್ಚಿಮ ಘಟ್ಟ ಭಾಗಗಳಲ್ಲೂ ಆನೆಗಳ ಸಂತತಿ ಬಹಳಷ್ಟಿದೆ. ಆನೆಗಳನ್ನು ಪಳಗಿಸಿ ಅವುಗಳನ್ನು ಧಾರ್ಮಿಕ ಚಟುವಟಿಕೆಗಳಿಗೆ ಮತ್ತು ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುವ ವಿಚಾರದಲ್ಲಿ ಕೇರಳ ರಾಜ್ಯ ಅಗ್ರಣಿಯಾಗಿದೆ.
ಇಂದು ವಿಶ್ವ ಗಜ ದಿನದ ಈ ಸಂದರ್ಭದಲ್ಲಿ ನಾವು ನಿಮಗೆ ಆನೆ ಮರಿಗಳ ತುಂಟಾಟಗಳ ಇಂತಹ ಕೆಲವು ವಿಡಿಯೋ ಟ್ವೀಟ್ ಗಳನ್ನು ಇಲ್ಲಿ ನೀಡುತ್ತಿದ್ದೇವೆ ನೋಡಿ ಆನಂದಿಸಿ.
Preparing for tomorrow’s world elephants day.. pic.twitter.com/JdUyq2G957
— Susanta Nanda IFS (@susantananda3) August 11, 2020
Running to be part of world elephants day celebrations?
With 50 elephants estimated to be vulnerable to poaching every day, say no to ivory for this majestic giants to roam forever.. pic.twitter.com/JHt0rZwGkk
— Susanta Nanda IFS (@susantananda3) August 12, 2020
In current pandemic situation, dis is hw we shld njy…?#elephants #WorldElephantDay #HaathiHamaaraSaathi @ParveenKaswan pic.twitter.com/5OpsBkJ3fE
— Bhavin Bakhai (@bhavinbakhai) August 12, 2020
Elephant is one animal which celebrates life every day ?
India has more than 60% of global Asian elephants population in 30 Elephant Reserve of 14 states over an area of around 65,000 sq km. Let’s support in preserve them.#HaathiHamaaraSaathi #WorldElephantDay2020 pic.twitter.com/SCpAcF65eH
— Susanta Nanda IFS (@susantananda3) August 12, 2020
The biggest elephant alive on earth … Rare footage … #futureforelephants #Worldelephantday ? ? pic.twitter.com/0H4bS1sqga
— Abhishek mohapatra (@Abhishekluvmm) August 12, 2020
They all are going for #WorldElephantDay celebration. Most elegant family I have ever seen. pic.twitter.com/sEsFsnVCIZ
— Parveen Kaswan, IFS (@ParveenKaswan) August 12, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.