ಜನರ ವಿಶ್ವಾಸ, ಗೌರವದ ಪ್ರತೀಕ ಅಂಚೆ ವ್ಯವಸ್ಥೆ
ಇಂದು ವಿಶ್ವ ಅಂಚೆ ದಿನ
Team Udayavani, Oct 9, 2021, 6:50 AM IST
ನಾಲ್ಕು ದಶಕಗಳ ಹಿಂದಿನವರೆಗೂ ಮಾನವನ ಸಂವಹನ ವ್ಯವಸ್ಥೆಯ ಮೂಲಾಧಾರವಾಗಿದ್ದ ಅಂಚೆ ವ್ಯವಸ್ಥೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಒಂದಿಷ್ಟು ಹಿನ್ನೆಲೆಗೆ ಸರಿಯುವಂತಾಗಿದೆ. ಈಗ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ನಮ್ಮ ಅಂಗೈಗೆ ತಲುಪಿಸುತ್ತಿರುವ ಆಧುನಿಕ ಸಂವಹನ ವ್ಯವಸ್ಥೆಯಲ್ಲಿ ಅಂಚೆ ವ್ಯವಸ್ಥೆ ಹಿನ್ನೆಲೆಗೆ ಸರಿಯಬೇಕಾಗಿ ಬಂದುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಇವೆಲ್ಲದರ ಹೊರತಾಗಿಯೂ ಅಂಚೆ ವ್ಯವಸ್ಥೆಯು ಬದಲಾವಣೆಯ ಬಿರುಗಾಳಿಗೆ ತತ್ತರಿಸದೇ ಜನರಿಗೆ ಹೊಸ ಹೊಸ ಸೇವೆಗಳನ್ನು ಒದಗಿಸುವ ಮೂಲಕ ಇಂದಿಗೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಹೊಸ ಸೇವೆಗಳಿಗೆ ಉತ್ತೇಜನ, ಅಂಚೆ ವ್ಯವಸ್ಥೆಯ ಬಗೆಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಅಕ್ಟೋಬರ್ 9ರಂದು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ.
ಸ್ವಿಟ್ಸರ್‌ಲ್ಯಾಂಡ್ ರಾಜಧಾನಿ ಬರ್ನ್ನಲ್ಲಿ 1874ರಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್(ಯುಪಿಯು) ಸ್ಥಾಪನೆಯಾಯಿತು. 1969ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಯುಪಿಯು ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು. ಆ ಬಳಿಕ ವರ್ಷಂಪ್ರತಿ ಅಂಚೆ ಸೇವೆಗಳ ಮಹತ್ವವನ್ನು ಸಾರುವ ಉದ್ದೇಶದಿಂದ ವಿಶ್ವಾದ್ಯಂತ ಅಕ್ಟೋಬರ್ 9ರಂದು ವಿಶ್ವ ಅಂಚೆ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಸದ್ಯ ಪ್ರತೀ ವರ್ಷ ಯುಪಿಯುನ 192 ಸದಸ್ಯ ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದ್ದು ಸಮಾಜ ಮತ್ತು ಜಾಗತಿಕ ಆರ್ಥಿಕತೆಗೆ ಯುಪಿಯುನ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ. ಈ ದಿನದಂದು ವಿವಿಧ ದೇಶಗಳಲ್ಲಿ ವಿಶೇಷ ಅಂಚೆ ಚೀಟಿ ಪ್ರದರ್ಶನ, ಹೊಸ ಅಂಚೆ ಸೇವೆಗಳಿಗೆ ಚಾಲನೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಂಚೆ ಸೇವೆಯ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಭಾರತದಲ್ಲಿ ಅಂಚೆ ಸೇವೆ
ಭಾರತದಲ್ಲಿ ಅಂಚೆ ಸೇವೆಯು ಇಂದಿಗೂ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆ ಯನ್ನು ನೀಡುತ್ತಿದೆ. ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಜಾಲವನ್ನು ಹೊಂದಿರುವ ಅಂಚೆ ವ್ಯವಸ್ಥೆಯು ದೇಶದಲ್ಲಿ ಮುಖ್ಯ, ಉಪ, ಶಾಖಾ ಅಂಚೆ ಕಚೇರಿಗಳ ಸಹಿತ ಒಟ್ಟಾರೆ 1,56,641 ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ 4,44,266 ಅಂಚೆ ಡಬ್ಬಗಳನ್ನು ಹೊಂದಿದೆ. ಕೇವಲ ಪತ್ರ, ಪಾರ್ಸೆಲ್ ಸೇವೆಗಳಿಗೆ ಅಂಚೆ ಕಚೇರಿಗಳು ಸೀಮಿತವಾಗದೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತಿವೆ.
ಇದನ್ನೂ ಓದಿ:ಬದಲಿ ಇಂಧನ ಬಳಕೆ ಮಾಡಿದರೆ ದೇಶ ಐದು ವರ್ಷಗಳಲ್ಲಿ ನಂ1
ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್ ಮಾದರಿಯಲ್ಲಿ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಜನರು ಇಂದಿಗೂ ತಮ್ಮ ಹಣಕಾಸು ವ್ಯವಹಾರಗಳಿಗೆ ಅಂಚೆ ಕಚೇರಿಯನ್ನೇ ಅವಲಂಬಿಸಿದ್ದಾರೆ. ಉಳಿತಾಯದ ನೆನಪು ಬಂದಾಗಲೆಲ್ಲ ನಮಗೆಲ್ಲರಿಗೂ ಮೊದಲು ನೆನಪಾಗುವುದು ಅಂಚೆ ಕಚೇರಿಯೇ. ಇಲ್ಲಿನ ಉಳಿತಾಯ ಯೋಜನೆಗಳ ಬಗೆಗೆ ಜನರಿಗೆ ಎಲ್ಲಿಲ್ಲದ ವಿಶ್ವಾಸ ಮತ್ತು ನಂಬಿಕೆ. ಇದರಿಂದಾಗಿಯೇ ಅಂಚೆಯಣ್ಣನಿಂದ ಹಿಡಿದು ಕಚೇರಿಗಳಲ್ಲಿರುವ ಅಧಿಕಾರಿಗಳು ಮತ್ತು ಸಿಬಂದಿಯ ಬಗೆಗೆ ಜನತೆಗೆ ಒಂದು ರೀತಿಯ ಗೌರವದ ಭಾವನೆ. ಈ ಕಾರಣದಿಂದಾಗಿಯೇ ಅಂಚೆ ಇಲಾಖೆ ಮತ್ತದರ ಸೇವೆಗಳು ಜನಜೀವನದಲ್ಲಿ ಹಾಸುಹೊಕ್ಕಾಗಿವೆ.
ಡಿಜಿಟಲ್‌ಸ್ನೇಹಿ
ಕೇಂದ್ರ ಸರಕಾರದ ವಿವಿಧ ಸೇವಾ ಯೋಜನೆಗಳ ಕೆಲಸಕಾರ್ಯಗಳನ್ನೂ ಅಂಚೆ ಕಚೇರಿಗಳು ನಿರ್ವಹಿಸುತ್ತಿವೆ. ಅಂಚೆ ಇಲಾಖೆ ಕೂಡ ಡಿಜಿಟಲ್‌ಸ್ನೇಹಿಯಾಗಿ ಪರಿವರ್ತನೆಯಾಗಿದೆ. ಬ್ಯಾಂಕ್‌ಗಳ ಮಾದರಿಯಲ್ಲಿ ಅಂಚೆ ಕಚೇರಿಗಳೂ ಕೂಡ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಆರಂಭಿಸಿವೆ. ಈ ಮೂಲಕ ಅಂಚೆ ಕಚೇರಿ ಯುವ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.