ಇಂದು ಕಮಲ್ ಹಾಸನ್ ರಾಜಕೀಯ ಆ್ಯಪ್ ಬಿಡುಗಡೆ
Team Udayavani, Nov 7, 2017, 6:50 AM IST
ಚೆನ್ನೈ: ತಮ್ಮ ರಾಜಕೀಯ ಪ್ರವೇಶ ಕಾಲ ಸನ್ನಿಹಿತವಾಗಿದ್ದು, ಇದರ ಪ್ರಥಮ ಹೆಜ್ಜೆಯಾಗಿ ಮಂಗಳವಾರವೇ ಅಂದರೆ ತಮ್ಮ ಜನ್ಮದಿನದಂದೇ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡುವುದಾಗಿ ಬಹುಭಾಷಾ ನಟ ಕಮಲ್ ಹಾಸನ್ ತಿಳಿಸಿದ್ದಾರೆ.
ಚೆನ್ನೈನಲ್ಲಿ ಸೋಮವಾರ ಮಾತನಾಡಿದ ಅವರು, ಈ ಆ್ಯಪ್ ಮೂಲಕವೇ ತಮ್ಮ ಉದ್ದೇಶಿತ ರಾಜಕೀಯ ಪಕ್ಷ ಸ್ಥಾಪನೆಗೆ ಬೇಕಾಗುವ ಹಣವನ್ನು ಅಭಿಮಾನಿಗಳೇ ನೀಡಬೇಕೆಂದು ಮನವಿ ಮಾಡಿದ್ದಾರೆ. ವರ್ಷಗಳ ಹಿಂದೆ, ತಾವು ನರ್ಪಾನಿ ಇಯಾಕ್ಕಮ್ ಸ್ಥಾಪಿಸಿದಾಗಲೂ ಅಭಿಮಾನಿಗಳೇ ಹಣ ನೀಡಿದ್ದನ್ನು ಸ್ಮರಿಸಿದ ಅವರು, ಸಂಗ್ರಹವಾಗುವ ನಿಧಿಯನ್ನು ತಾವು ಸ್ವಿಸ್ ಬ್ಯಾಂಕ್‌ನಲ್ಲಿ ಇಡುವುದಿಲ್ಲವೆಂಬ ವಾಗ್ಧಾನವಿತ್ತರು. ಆ್ಯಪ್ ಮೂಲಕ ಪಕ್ಷದ ಆರ್ಥಿಕ ವ್ಯವಹಾರಗಳನ್ನು ಸಾಮಾನ್ಯರೂ ಅವಲೋಕಿಸುವ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು. ಅಲ್ಲದೆ, ತಾವು ನ.7ರಂದು ಹೊಸ ಪಕ್ಷದ ಹೆಸರು ಘೋಷಿಸುತ್ತೇನೆಂದು ಕೆಲವರು ಹೇಳುತ್ತಿದ್ದಾರೆ. ಮಗು ಹುಟ್ಟದೆಯೇ ಹೆಸರಿಡುವುದು ಹೇಗೆ ಎಂದೂ ಪ್ರಶ್ನಿಸಿದರು. ಇದೇ ವೇಳೆ, ಭಾರೀ ಮಳೆಯಿಂದಾಗಿ ರಾಜ್ಯ ಸಂಕಷ್ಟದಲ್ಲಿರುವ ಕಾರಣ ತಾವು ಜನ್ಮದಿನವನ್ನು ಆಚರಿಸುವುದಿಲ್ಲ ಎಂದೂ ಕಮಲ್ ಹೇಳಿದ್ದಾರೆ. ಅದರ ಬದಲು ಮಳೆಯಿಂದ ತೊಂದರೆಗೆ ಸಿಲುಕಿದ ಪ್ರದೇಶಗಳಿಗೆ ಅವರು ಭೇಟಿ ನೀಡಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.