![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 18, 2023, 4:34 PM IST
ಭೋಪಾಲ್: ಎರಡೂವರೆ ವರ್ಷದ ಹೆಣ್ಣು ಮಗುವೊಂದು ಕೊಳವೆ ಬಾವಿಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಕಜಾರಿ ಬರ್ಖೇಡಾ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ (ಜು.18 ರಂದು) ಸ್ಮಿತಾ ಎಂಬ ಮಗು ತನ್ನ ಮನೆಯ ಪಕ್ಕದಲ್ಲಿ ಆಟ ಆಡುತ್ತಿರುವಾಗ ಬೋಲ್ ವೆಲ್ ಬಿದ್ದಿದ್ದಾಳೆ ಎಂದು ವರದಿ ತಿಳಿಸಿದೆ.
20 ಆಡಿ ಆಳದ ಕೊಳವೆ ಬಾವಿಗೆ ಮಗು ಬಿದ್ದಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದ ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬಾಲಕಿಯ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಬೋರ್‌ವೆಲ್ ಬಳಿ ಗುಂಡಿ ತೋಡಲು ಎಸ್‌ಡಿಆರ್‌ಎಫ್ ಕೆಲಸ ಮಾಡುತ್ತಿದೆ. ಬೋರ್‌ವೆಲ್‌ನಲ್ಲಿ ಸಿಲುಕಿರುವ ಬಾಲಕಿಗೆ ಆಮ್ಲಜನಕವನ್ನು ಒದಗಿಸಲಾಗಿದೆ ಎಂದು ವಿದಿಶಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಸಮೀರ್ ಯಾದವ್ ಹೇಳಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.