UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು
Team Udayavani, Oct 18, 2024, 4:14 PM IST
ಉತ್ತರಪ್ರದೇಶ: ಹಸುವನ್ನು ರಕ್ಷಿಸಲು ಹೋಗಿ 18 ಟನ್ ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಒಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯೆ ಪಲ್ಟಿಯಾದ ಘಟನೆ ಉತ್ತರಪ್ರದೇಶದಲ್ಲಿ ಗುರುವಾರ(ಅ.17) ತಡರಾತ್ರಿ ಝಾನ್ಸಿ-ಗ್ವಾಲಿಯರ್ ಹೆದ್ದಾರಿಯ ಸಿಪ್ರಿ ಬಜಾರ್ ಬಳಿ ಸಂಭವಿಸಿದೆ.
ಘಟನೆಯಲ್ಲಿ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ, ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಲಾರಿಯಲ್ಲಿ ಸುಮಾರು ಹದಿನೆಂಟು ಟನ್ ಟೊಮ್ಯಾಟೊ ಸಾಗಿಸಲಗುತ್ತಿತ್ತು ಎನ್ನಲಾಗಿದೆ ಈ ವೇಳೆ ಹೆದ್ದಾರಿಯಲ್ಲಿ ದನವೊಂದು ಅಡ್ಡ ಬಂದ ಹಿನ್ನೆಲೆಯಲ್ಲಿ ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ, ಈ ವೇಳೆ ಲಾರಿಯಲ್ಲಿದ್ದ ಟೊಮ್ಯಾಟೊ ಹೆದ್ದಾರಿ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.
ಮಹಿಳೆಗೆ ಸಣ್ಣಪುಟ್ಟ ಗಾಯ:
ಇನ್ನು ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿದ್ದಂತೆ ಲಾರಿ ಹಿಂದಿನಿಂದ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಯೊಬ್ಬರು ಲಾರಿಗೆ ಡಿಕ್ಕಿ ಹೊಡೆದು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
JHANSI :
➡️झांसी-कानपुर हाईवे पर पलटा टमाटरों से लदा ट्रक
➡️पुलिस कर रही है बिखरे सामान की पहरेदारी
➡️बंगलौर से दिल्ली जा रहा था टमाटर से लदा ट्रक
➡️ट्रक की चपेट में आने से स्कूटी सवार महिला हुई घायल #HNN24X7 @jhansipolice #Accident pic.twitter.com/m9WiACJu8E— HNN24X7 (@HNN24X7) October 18, 2024
ಟೊಮ್ಯಾಟೊ ಕಾದು ಕೂತ ಪೊಲೀಸರು:
ಈಗಾಗಲೇ ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಕೆಜಿಗೆ 100 ರಿಂದ 120ರೂ. ಇದ್ದು ಕಳ್ಳರ ಪಾಲಾಗುವ ನಿಟ್ಟಿನಲ್ಲಿ ವಿಚಾರ ತಿಳಿದ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ತೆರಳಿ ಬ್ಯಾರಿಕೆಡ್ ಇಟ್ಟು ಬೆಳಗ್ಗಿನವರೆಗೆ ಕಾದು ಕೂತು 18 ಟನ್ ಟೊಮ್ಯಾಟೊ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.