ನಾಳೆಯದ್ದು “ಥಂಡರ್ ಮೂನ್’
ಕೇತುಗ್ರಸ್ತ ಚಂದ್ರಗ್ರಹಣ ಭಾರತದಲ್ಲೂ ಗೋಚರ
Team Udayavani, Jul 15, 2019, 5:30 AM IST
ಹೊಸದಿಲ್ಲಿ: ಇನ್ನು ಎರಡು ದಿನಗಳಲ್ಲಿ ಅಂದರೆ ಮಂಗಳವಾರ (ಜು. 16) ಆಂಶಿಕ ಚಂದ್ರಗ್ರಹಣ ನಡೆಯಲಿದೆ. ಈ ಸಂದರ್ಭ ದಲ್ಲಿ ಗುಡುಗು ಸಿಡಿಲು ಕೂಡ ಇರುವ ಕಾರಣ, ಅದನ್ನು “ಥಂಡರ್ ಮೂನ್’ ಎಂದೂ ಬಣ್ಣಿಸಲಾಗುತ್ತಿದೆ.
ಹಾಲಿ ತಿಂಗಳಲ್ಲಿ ಆಗಸದಲ್ಲಿ ಗುಡುಗು- ಸಿಡಿಲುಗಳು ಇರುವುದರಿಂದ ಈ ರೀತಿಯಾಗಿ ವಿಶ್ಲೇಷಿಸಲಾಗಿದೆ ಎಂದು “ಓಲ್ಡ್ ಫಾರ್ಮರ್ಸ್ ಅಲ್ಮಾನಿಕ್’ ಎಂಬ ವೆಬ್‌ಸೈಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ವೈಜ್ಞಾನಿಕವಾಗಿ ಗ್ರಹಣದ ಬಗ್ಗೆ ಹಲವು ಅಧ್ಯಯನ, ವಿಶ್ಲೇಷಣೆಗಳು ನಡೆ ಯುತ್ತಿದ್ದರೂ, ಕೆಲವೊಂದು ಕುತೂಹಲಕರ ಅಂಶಗಳು ಇವೆ.
ಈ ಗ್ರಹಣವನ್ನು “ಬಕ್ ಮೂನ್’ ಎಂದು ಹೇಳಲಾಗುತ್ತದೆ. ಅದಕ್ಕೊಂದು ಕುತೂಹಲಕರ ವಾದ ಅಂಶವೊಂದು ಇದೆ. ಈ ತಿಂಗಳು ಪೂರ್ಣ ಚಂದ್ರ ಇರುವ ಸಂದರ್ಭದಲ್ಲಿಯೇ ಸಾರಂಗಗಳ ತಲೆಯಲ್ಲಿ ಹೊಸ ಕೊಂಬುಗಳು ಮೂಡುತ್ತವೆ. ಹೀಗಾಗಿ ಈ ಹೆಸರು ಕೂಡ ಇದೆ. “ರೈಪ್ ಕಾರ್ನ್ ಮೂನ್’, “ಹೇ ಮೂನ್’, “ಓಲ್ಡ್ ಮೂನ್’ ಎಂಬ ಹೆಸರು ಗಳಿಂ ದಲೂ ಹಾಲಿ ಗ್ರಹಣವನ್ನು ಕರೆಯಲಾಗುತ್ತದೆ.
ಭಾರತ ಸೇರಿದಂತೆ ಜಗತ್ತಿನ ಕೆಲ ಭಾಗ ಗಳಲ್ಲಿ ಆಂಶಿಕ ಗ್ರಹಣ ಕಾಣಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ಚಂದ್ರ ಭೂಮಿಯ ನೆರಳಿನ ಒಳಗಿನ ಮೂಲಕ ಹಾದು ಹೋಗಲಿದೆ. ಈ ಸಂದರ್ಭದಲ್ಲಿ ಚಂದ್ರನ ಒಂದು ಭಾಗ ಕಪ್ಪಾಗಿಯೂ, ಮತ್ತೂಂದು ಭಾಗ ಸೂರ್ಯನ ಬೆಳಕಿನಿಂದ ಹೊಳೆಯಲಿದೆ. ಜು.16ರಿಂದ 2 ವಾರಗಳ ಬಳಿಕ ಮತ್ತೂಂದು “ಬ್ಲಾಕ್ ಮೂನ್’ ಉಂಟಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.