![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 15, 2021, 10:30 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದೀನ್‌ನ ಮೋಸ್ಟ್ ವಾಂಟೆಡ್ ಉಗ್ರನನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.
ಭದ್ರತಾ ಪಡೆಗಳ ಮೇಲೆ ದಾಳಿ ಸೇರಿದಂತೆ ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಾಗೂ “ಎ+ ಕೆಟಗರಿ’ಯಲ್ಲಿ ಸ್ಥಾನ ಪಡೆದಿದ್ದ ಕುಖ್ಯಾತ ಉಗ್ರ ಫೆರೋಜ್ ಅಹ್ಮದ್ ದರ್‌ನನ್ನು ಹೊಡೆದುರುಳಿಸಿದ್ದು ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು ಎಂದು ಬಣ್ಣಿಸಲಾಗಿದೆ.
2018ರಲ್ಲಿ ಶೋಪಿಯಾನ್‌ನ ಝೈನಪೋರಾದಲ್ಲಿ ನಾಲ್ವರು ಪೊಲೀಸರ ಸಾವಿಗೆ ಕಾರಣವಾದ ದಾಳಿಯಲ್ಲೂ ಈತ ಪ್ರಮುಖ ಪಾತ್ರ ವಹಿಸಿದ್ದ. 2017ರಿಂದಲೂ ಕಣಿವೆಯಲ್ಲಿ ಉಗ್ರ ದರ್ ಸಕ್ರಿಯನಾಗಿದ್ದು, 2019ರ ಫೆಬ್ರವರಿಯಲ್ಲಿ ಇಶ್ರತ್ ಮುನೀರ್ ಎಂಬ ಬಾಲಕಿಯನ್ನೂ ಕೊಂದಿದ್ದ.
ಇದನ್ನೂ ಓದಿ:2024ರಲ್ಲಿ ಟಿಎಂಸಿ ಬಿಜೆಪಿಯನ್ನು ಸೋಲಿಸಲಿದೆ : ಮಮತಾ ಬ್ಯಾನರ್ಜಿ ವಿಶ್ವಾಸ
2019ರ ಅಕ್ಟೋಬರ್‌ನಲ್ಲಿ ಹೊರರಾಜ್ಯದ ಚರಣ್‌ಜೀತ್ ಎಂಬ ಕಾರ್ಮಿಕನನ್ನು ಹತ್ಯೆಗೈದಿದ್ದಲ್ಲದೆ, ಸ್ಥಳೀಯ ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡುವ ಕೆಲಸವನ್ನೂ ದರ್ ಮಾಡುತ್ತಿದ್ದ ಎಂದು ಜಮ್ಮು-ಕಾಶ್ಮೀರ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳದಿಂದ ಎಕೆ ರೈಫಲ್, ಮೂರು ಮ್ಯಾಗಜಿನ್‌ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.